Bollywood Actor: ಅಂದು ಸೈಫ್ ಕರೀನಾ ಮದುವೇಲಿ ಪಾತ್ರ ತೊಳೀತಿದ್ದ, ಇಂದು ಸ್ಟಾರ್ ನಟ, ಎಂತಹ ಸಾಧನೆ

Written by Soma Shekar

Published on:

---Join Our Channel---

Bollywood Actor : ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳಿಗೆ (Star Kids) ಅವಕಾಶಗಳು ಸಿಗುವಷ್ಟು ಸುಲಭವಾಗಿ, ಸಿನಿಮಾ ಹಿನ್ನೆಲೆ ಇಲ್ಲದೇ ಬರುವವರಿಗೆ ಸಿಗೋದಿಲ್ಲ. ಬಹಳಷ್ಟು ಜನರು ಸಿನಿಮಾದಲ್ಲಿನ ಅವಕಾಶಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಕೆಲವರು ಸಕ್ಸಸ್ ಪಡೆದುಕೊಂಡರೆ ಇನ್ನೂ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಬೇಸರದಿಂದ ತಮ್ಮ ಊರುಗಳಿಗೆ ವಾಪಸ್ ಹೋಗುವ ಉದಾಹರಣೆಗಳೂ ಬೇಕಾದಷ್ಟಿವೆ.

ಆದರೆ ಕಠಿಣ ಪರಿಶ್ರಮದ ನಂತರ ಸಕ್ಸಸ್ ಅನ್ನು ಪಡೆದುಕೊಂಡ ನಟರ (Bollywood Actor) ಜೀವನ ಮಾತ್ರ ಅನೇಕರಿಗೆ ಸ್ಪೂರ್ತಿಯಾಗುವುದರ ಜೊತೆಗೆ ಅವರ ಕಥೆ ಕೂಡಾ ಅಚ್ಚರಿಯನ್ನ ಮೂಡಿಸುತ್ತದೆ. ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಪಂಚಾಯತ್ 3 (Panchayat 3) ಜನರಿಂದ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ. ಪಂಚಾಯತ್ ನ ಮೂರು ಸೀಸನಗಳು ಜನರ ಅಪಾರ ಪ್ರೀತಿಯನ್ನು ಗಳಿಸಿದೆ.‌

ಪಂಚಾಯತ್ ವೆಬ್ ಸೀರೀಸ್ ನಲ್ಲಿ ಅಭಿನಯಿಸಿದ ಒಬ್ಬ ನಟನ ಕುರಿತಾಗಿ ಭಾರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೌದು, ಪಂಚಾಯತ್ ಸೀರೀಸ್ ನಲ್ಲಿ ಅಭಿನಯಿಸಿದ ನಟ ಆಸಿಫ್ ಖಾನ್ (Asif Khan) ಅವರು ಸಣ್ಣ ಪಾತ್ರದಲ್ಲಿ ನಟಿಸಿದ್ದರೂ ಪ್ರೇಕ್ಷಕರ ಗಮನವನ್ನು ಸೆಳೆದು ಅವರ ಮನಸ್ಸಿನ ಮೇಲೆ ತಮ್ಮ ಅಭಿನಯದ ಛಾಪನ್ನು ಈ ನಟ ಮೂಡಿಸಿದ್ದಾರೆ.

ಪಂಚಾಯತ್ ಸೀಸನ್ 3 ದೊಡ್ಡ ಸಕ್ಸಸ್ ಪಡೆದ ನಂತರ ಎಲ್ಲರೂ ಆಸಿಫ್ ಅವರ ಅಭಿನಯವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ. ಇವೆಲ್ಲವುಗಳ ಬೆನ್ನಲ್ಲೇ ಈ ನಟನ ಹೋರಾಟದ ಬದುಕಿನ ಚಿತ್ರಣ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗ್ತಿದೆ. ದಿ ಗ್ರಾಂಡ್ ಫ್ಲೋರ್ ಪಾಡ್ ಕಾಸ್ಟ್ ನಲ್ಲಿ ನೀಡಿದ ಸಂದರ್ಶನದಲ್ಲಿ ಆಸಿಫ್ ಖಾನ್ ತಮ್ಮ ಸ್ಟ್ರಗಲಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಾನು ಮುಂಬೈನ ಹಯಾತ್ ಹೋಟೆಲ್ ನಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ (Saif Kareena Marriage) ಮದುವೆಯ ಅದ್ದೂರಿ ಆರತಕ್ಷತೆ ನಡೆಯುತ್ತಿತ್ತು. ನಾನು ಅಡುಗೆ ಮನೆಯಲ್ಲಿ ಪಾತ್ರೆಗಳನ್ನ ತೊಳೀತಿದ್ದೆ. ಅವರನ್ನ ಒಮ್ಮೆ ಭೇಟಿಯಾಗಬೇಕೆಂದು ಅನುಮತಿ ನೀಡುವಂತೆ ಕೇಳಿದ್ದೆ. ಆದರೆ ಮ್ಯಾನೇಜರ್ ಒಪ್ಪಿಕೊಳ್ಳಲಿಲ್ಲ ನನಗೆ ಬೇಸರ ಆಯ್ತು ಎನ್ನುವ ವಿಷಯವನ್ನು ಆಸಿಫ್ ಖಾನ್ ಹಂಚಿಕೊಂಡಿದ್ದಾರೆ.

Leave a Comment