Vijay Trisha: ದಳಪತಿ ವಿಜಯ್ ತ್ರಿಶಾ ಸೀಕ್ರೆಟ್ ಡೇಟಿಂಗ್ ? ಹೊಸ ಅನುಮಾನಕ್ಕೆ ಕಾರಣವಾಯ್ತಾ ಆ ಘಟನೆ

Written by Soma Shekar

Published on:

---Join Our Channel---

Vijay Trisha: ತಮಿಳು ಸಿನಿಮಾರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟ ನಟಿಯರ ಸಾಲಿನಲ್ಲಿ ದಳಪತಿ ವಿಜಯ್ ಮತ್ತು ತ್ರಿಷಾ (Vijay Trisha) ಕೃಷ್ಣನ್ ಹೆಸರೂ ಸೇರಿದೆ. ದಶಕಕ್ಕೂ ಅಧಿಕಕಾಲದ ನಂತರ ಇತ್ತೀಚಿಗಷ್ಟೇ ಈ ಜೋಡಿ ಮತ್ತೊಮ್ಮೆ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದರು. ಈಗ ಅದರ ಬೆನ್ನಲ್ಲೇ ತ್ರಿಷಾ ಕೃಷ್ಣನ್ ಮತ್ತು ದಳಪತಿ ವಿಜಯ್ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಒಂದು ಅನುಮಾನ ಹರಿದಾಡುವುದಕ್ಕೆ ಶುರುವಾಗಿದ್ದು, ಇಂಥ ಅನುಮಾನ ಮೂಡಿದ್ದಾದ್ರು ಯಾಕೆ ಅನ್ನೋದನ್ನ ತಿಳಿಯೋಣ ಬನ್ನಿ.

ಸ್ಟಾರ್ ನಟ ದಳಪತಿ ವಿಜಯ್ (Thalapathi Vijay) ಸೋಮವಾರದಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಟ ತ್ರಿಷಾ ಕೃಷ್ಣನ್ (Trisha Krishnan) ವಿಜಯ್ ಗೆ ಜನ್ಮದಿನದ ಶುಭಾಶಯಗಳು ತಿಳಿಸಿದ್ದು, ಇದನ್ನು ನೋಡಿ ನೆಟ್ಟಿಗರು ಒಂದಷ್ಟು ಅನುಮಾನಗಳನ್ನು ಪಡುವಂತಾಗಿದೆ. ತ್ರಿಷಾ ಮತ್ತು ವಿಜಯ್ ಇಬ್ಬರು ಲಿಫ್ಟ್ ನೊಳಗೆ ಇದ್ದು ತ್ರಿಷಾ ಈ ವೇಳೆ ಮಿರರ್ ನಲ್ಲಿ ಫೋಟೋ ತೆಗೆದಿದ್ದು, ಆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಫೋಟೋ ಹಂಚಿಕೊಂಡ ನಟಿ ಅದರ ಜೊತೆಗೆ ‘ದಿ ಕಾಮ್ ಟು ಎ ಸ್ಟಾರ್ಮ್, ಸ್ಟಾರ್ಮ್ ಟು ಎ ಕಾಮ್, ಟು ಮೆನಿ ಮೋರ್ ಮೈಲ್‌ಸ್ಟೋನ್ಸ್ ಅಹೆಡ್’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕಪ್ಪು ಹಾರ್ಟ್ ಒಂದನ್ನ ಸೇರಿಸಿದ್ದಾರೆ ಮತ್ತು ಇನ್ಫಿನಿಟಿ ಸಿಂಬಲ್ ಹಾಕಿದ್ದಾರೆ. ಈ ಸಿಂಬಲ್ ಅರ್ಥ ಪ್ರೀತಿ ಅನಂತ ಎಂಬುದಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಟ ವಿಜಯ್ ತ್ರಿಷಾ ಜೊತೆಗೆ ಲಿವ್ ಇನ್ ಸಂಬಂಧದಲ್ಲಿದ್ದಾರೆ ಎಂದು ವದಂತಿ ಹರಿದಾಡಲು ಶುರುವಾಗಿದೆ.

ಅಭಿಮಾನಿಯೊಬ್ಬರು ಇವರಿಬ್ಬರ ಫೋಟೋಗಳನ್ನ ಕ್ಯೊಲಾಜ್ ಮಾಡಿ ಅವರಿಬ್ಬರೂ ಒಟ್ಟಿಗೆ ತಿರುಗುತ್ತಾರೆ ಎಂಬುದಕ್ಕೆ ಒಂದಷ್ಟು ಸಾಕ್ಷಿಗಳು ಎನ್ನುವಂತೆ ಚಿತ್ರಗಳಲ್ಲಿ ಕೆಲವೊಂದು ಮಾರ್ಕ್ ಗಳನ್ನು ಮಾಡಿ ತೋರಿಸಿರುವ ಫೋಟೋ ವೈರಲ್ ಆಗಿದೆ. ಈ ಕ್ಯೊಲಾಜ್ ಫೋಟೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಎರಡು ಗುಂಪುಗಳಾಗಿದ್ದು, ಒಂದು ವಿಜಯ್ ಮತ್ತು ತ್ರಿಶಾ ಸಂಬಂಧದ ಬಗ್ಗೆ ಮಾತನಾಡಿದರೆ, ಇನ್ನೊಂದು ವಿಜಯ್ ಅವರ ಪತ್ನಿ ಸಂಗೀತ ಅವರನ್ನು ಸಮರ್ಥಿಸುತ್ತಿದೆ.

Leave a Comment