Samantha: ಸೌತ್ ಸುಂದರಿ, ಟಾಲಿವುಡ್ ನ ಸ್ಟಾರ್ ನಟಿ ಸಮಂತಾ (Samantha) ದೀರ್ಘ ಸಮಯದಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಖುಷಿ ನಂತರ ನಟಿ ಯಾವುದೇ ಹೊಸ ಸಿನಿಮಾ ಮಾಡಿಲ್ಲ ಹಾಗೂ ನಟಿಯ ಹೊಸ ಸಿನಿಮಾ ಯಾವುದೇ ಅಪ್ಡೇಟ್ ಸಹಾ ಹೊರಗೆ ಬಂದಿಲ್ಲ. ಅಭಿಮಾನಿಗಳು ನಟಿಯನ್ನು ಬೆಳ್ಳಿತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ನಟಿ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ ಎನ್ನುವ ಸುದ್ದಿಗಳಾಗಿತ್ತು. ಆದರೆ ನಟಿ ಬ್ರೇಕ್ ಪಡೆದು ದೇಶ-ವಿದೇಶ ಸುತ್ತುತ್ತಾ ಖುಷಿಯ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ.
ಇವೆಲ್ಲವುಗಳ ನಡುವೆಯೇ ಈಗ ಸಮಂತಾ ಸಿನಿಮಾಗಳ ಕುರಿತಾಗಿ ಮತ್ತು ಸಿನಿಮಾ ರಂಗದ ಕುರಿತಾಗಿ ಆಸಕ್ತಿಯನ್ನು ಕಳೆದುಕೊಂಡರಾ ಎನ್ನುವ ಪ್ರಶ್ನೆಯೊಂದು ಉದ್ಭವಿಸಿದೆ. ಇದಕ್ಕೆ ಕಾರಣ ನಟಿ ತಮ್ಮ ಮುಂದಿನ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಸಹಾ ಕಾಣಿಸಿಕೊಂಡಿಲ್ಲದೇ ಇರುವುದು ಅಚ್ಚರಿಯನ್ನು ಮೂಡಿಸಿದೆ ಮತ್ತು ಇದು ಹೊಸ ಪ್ರಶ್ನೆಗಳ್ನು ಹುಟ್ಟುಹಾಕಿದೆ.
ನಟಿಯ ಹೊಸ ಸಿನಿಮಾಗಳ ಕುರಿತಾಗಿ ಯಾವುದೇ ಅಪ್ಡೇಟ್ ಬಂದಿಲ್ಲ, ಅಭಿಮಾನಿಗಳು ಹೊಸ ಸಿನಿಮಾ ಯಾವಾಗ? ಎನ್ನುವುದನ್ನ ಕೇಳುತ್ತಿದ್ದಾರೆ. ಅದರ ನಡುವೆಯೇ ನಟಿ ಗೌತಮ್ ಮೆನೆನ್ (Gowtham Menon) ಸಿನಿಮಾದಲ್ಲಿ ನಟಿಸಬೇಕಿತ್ತು. ಮಲೆಯಾಳಂ ನಟ ಮಮ್ಮೂಟಿ (Mammooti) ಜೊತೆಗೆ ತೆರೆ ಹಂಚಿಕೊಳ್ಳಬೇಕಿತ್ತು. ಆದರೆ ಈಗ ಅದೆಲ್ಲಾ ಆಗುತ್ತಿಲ್ಲ ಎನ್ನಲಾಗಿದೆ.
ಸಮಂತಾ ನಟಸಿಬೇಕಾಗಿದ್ದ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇತ್ತೀಚಿಗಷ್ಟೇ ನಡೆದಿದೆ. ಆದರೆ ಈ ಕಾರ್ಯಕ್ರಮದಲ್ಲಿ ಸಮಂತಾ ಭಾಗಿಯಾಗಿಲ್ಲ. ಅಲ್ಲದೇ ನಟಿ ತಮ್ಮ ಈ ಹೊಸ ಸಿನಿಮಾದ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಯಾವುದೇ ಮಾಹಿತಿಯನ್ನು ಶೇರ್ ಮಾಡಿಕೊಂಡಿಲ್ಲ.
ಈ ಬೆಳವಣಿಗೆ ನೋಡಿದ ಅನೇಕರು ಸಮಂತಾ ಈ ಸಿನಿಮಾದಿಂದ ಹೊರ ನಡೆದಿರಬೇಕೆಂದು ಅಂದಾಜು ಮಾಡಿದ್ದಾರೆ. ಸಿನಿಮಾಗಳ ಜೊತೆಗೆ ಸಮಂತಾ ವೆಬ್ ಸಿರೀಸ್ ಕಡೆಗೂ ಸಹಾ ಗಮನವನ್ನು ನೀಡಿದ್ದರು. ಆದರೆ ಸಿಟಾಡೆಲ್ ನಂತರ ನಟಿ ಯಾವುದೇ ವೆಬ್ ಸಿರೀಸ್ ನಲ್ಲಿ ನಟಿಸುವ ವಿಷಯ ಸಹಾ ಹೊರಗೆ ಬಂದಿಲ್ಲ.