Manisha Koirala: ನಟಿಯರು ಹೀರೋಗಳ ಜೊತೆ ಮಲಗಿ, ಮುಟ್ಟೇ ಇಲ್ಲ ಅಂತಾರೆ, ಮನೀಷಾ ಕೊಯಿರಾಲ ಶಾಕಿಂಗ್ ಹೇಳಿಕೆ

Written by Soma Shekar

Published on:

---Join Our Channel---

Manisha Koirala: ಸಿನಿಮಾ ರಂಗ ಅದರಲ್ಲೂ ವಿಶೇಷವಾಗಿ ಬಾಲಿವುಡ್ (Bollywood) ಅನ್ನೋದು ಬೇರೆಲ್ಲಾ ಸಿನಿಮಾ ರಂಗಗಳಿಗಿಂತ ಆಧುನಿಕತೆಯ ವಿಚಾರದಲ್ಲಿ ಮುಂದಿದೆ. ಬಾಲಿವುಡ್ ನಲ್ಲಿ ಆಧುನಿಕ ಸಂಸ್ಕೃತಿ ಅನ್ನೋ ಹೆಸರಲ್ಲಿ ಆಲ್ಕೋಹಾಲ್ ಸೇವನೆ ಅನ್ನೋದು ಸಾಮಾನ್ಯವಾಗಿದೆ. ಅದರಲ್ಲೂ ನಟಿಯರು ಸಹಾ ಆಲ್ಕೋಹಾಲ್ ಸೇವನೆ ಮಾಡೋದು ಸಹಾ ರಹಸ್ಯವಾಗಿ ಏನೂ ಉಳಿದಿಲ್ಲ.

ಬಾಲಿವುಡ್ ನ ಇಂತಹುದೊಂದು ಮಾಡ್ರನ್ ಕಲ್ಚರ್ ವಿಚಾರವಾಗಿ 90 ರ ದಶಕದ ಸ್ಟಾರ್ ನಟಿಯಾದ ಮನಿಷಾ ಕೊಯಿರಾಲ (Maninsha Koirala) ಯಾವುದೇ ಮುಚ್ಚು ಮರೆಯಿಲ್ಲದೇ ಮಾತನಾಡುವ ಮೂಲಕ ಸಂಚಲನವನ್ನು ಸೃಷ್ಟಿಸಿದ್ದಾರೆ. ನಟಿಯ ಹೇಳಿಕೆಗಳನ್ನು ಕೇಳಿ ಈಗ ಎಲ್ಲರೂ ಸಹಾ ಶಾಕ್ ಆಗಿದ್ದಾರೆ.

ಮನಿಷಾ ಕೊಯಿರಾಲ ಅವರು ಮೂಲತಃ ನೇಪಾಳದದವರು. ಬಾಲಿವುಡ್ ಮಾತ್ರವೇ ಅಲ್ಲದೇ ಒಂದೆರಡು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿ ಸೌತ್ ಸಿನಿಮಾದಲ್ಲೂ ಹೆಸರು ಮಾಡಿರುವ ಈ ನಟಿ ಬಾಲಿವುಡ್ ನಲ್ಲಿ ಬಹುಬೇಡಿಕೆಯ ಸ್ಟಾರ್ ನಟಿಯಾಗಿ ಹೆಸರು ಮತ್ತು ಸ್ಥಾನವನ್ನು ಪಡೆದುಕೊಂಡಿದ್ದರು.

ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದ ನಟಿ, ಕ್ಯಾನ್ಸರ್ ನಿಂದ ಬಳಲಿದ್ದರು. ಅನಂತರ ಅದನ್ನು ಗೆದ್ದು ಮತ್ತೆ ಹೊಸ ಉತ್ಸಾಹದೊಂದಿಗೆ ಜೀವನ ನಡೆಸುತ್ತಿದ್ದು, ಇತ್ತೀಚಿಗೆ ನಟಿ ಸಂಜಯ್ ಲೀಲಾ ಬನ್ಸಾಲಿ ಅವರು ಹೀರಾಮಂಡಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಂದರ್ಶನವೊಂದರಲ್ಲಿ ನಟಿ ಬಿಂದಾಸ್ ಆಗಿ ಮಾತನಾಡಿದ್ದು, ಕೆರಿಯಲ್ ಆರಂಭದಲ್ಲಿ ನಾನು ಕೂಲ್ ಡ್ರಿಂಕ್ಸ್ ನಲ್ಲಿ ವೋಡ್ಕಾ ಬೆರೆಸಿ ಕುಡಿಯುತ್ತಿದೆ, ಯಾರಾದರೂ ಕೇಳಿದರೆ ಅದನ್ನ ಕೂಲ್ ಡ್ರಿಂಕ್ಸ್ ಅಂತ ಹೇಳ್ತಿದ್ದೆ ಎನ್ನುವ ವಿಚಾರವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ನನಗೆ ಆಗ ಕುಡಿತದ ಅಭ್ಯಾಸ ಇತ್ತು. ಹಾಗಂತ ಅದು ನನ್ನ ಕೆರಿಯರ್ ನ ಹಾಳು ಮಾಡಿತು ಅಂತ ನಾನು ಹೇಳೋದಿಲ್ಲ. ಆದರೆ ಅದು ನನ್ನ ವೈಯಕ್ತಿಕ ವಿಚಾರವಾಗಿತ್ತು ಎಂದಿರುವ ಮನಿಷಾ ಅಂದಿನ ನಟಿಯರ ಬಗ್ಗೆ ಮತ್ತೊಂದು ಸ್ಪೋಟಕ ವಿಚಾರ ಶೇರ್ ಮಾಡಿದ್ದಾರೆ.

ಅಂದಿನ ಹಲವು ನಟಿಯರು ನಾಯಕ ನಟರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರು. ಆದರೂ ನಮ್ಮನ್ನು ಮುಟ್ಟಿಲ್ಲ ಅಂತ ಹೇಳಿಕೊಳ್ತಾರೆ. ನನಗೆ ಆ ರೀತಿ ಸುಳ್ಳು ಹೇಳೋಕೆ ಬರೋದಿಲ್ಲ ಎಂದು ಬಹಳ ಬೋಲ್ಡ್ ಆಗಿ ಮನೀಷಾ ಸಿನಿಮಾ ರಂಗದ ವಾಸ್ತವವನ್ನು ಶೇರ್ ಮಾಡಿಕೊಂಡಿದ್ದಾರೆ.

Leave a Comment