Tollywood: ಟಾಲಿವುಡ್ ನಟಿಯರು ಪಡೆಯೋ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ! ಬಾಲಿವುಡ್ ಬೆಡಗಿಯರಿಗೆ ಕಮ್ಮಿ ಇಲ್ಲ

Written by Soma Shekar

Published on:

---Join Our Channel---

Tollywood : ತೆಲುಗು ಸಿನಿಮಾ‌ ರಂಗದಲ್ಲಿ (Tollywood) ಪ್ರಸ್ತುತ ಮೂಲ ತೆಲುಗಿನಿಂದಲೇ ಬಂದಂತಹ ಸ್ಟಾರ್ ನಟಿಯರ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ದಶಕಗಳ ಹಿಂದೆ ತೆಲುಗಿನ ಮೂಲದ ನಟಿಯರು ಸ್ಟಾರ್ ಗಳಾಗಿದ್ದರು. ಆದರೆ ಈಗ ಅಂತಹ ನಟಿಯರಿಲ್ಲ. ತೆಲುಗಿನಲ್ಲಿ ಸ್ಟಾರ್ ನಟಿಯರ ಪಟ್ಟವನ್ನು ಅಲಂಕರಿಸಿರುವ ಬಹುತೇಕ ನಟಿಯರೆಲ್ಲರೂ ಸಹಾ ಬೇರೆ ಬೇರೆ ಭಾಷೆಗಳಿಂದ ಬಂದವರೇ ಆಗಿದ್ದಾರೆ. ಅಲ್ಲದೇ ಬಾಲಿವುಡ್ ಗೂ ಅಡಿಯಿಟ್ಟ ಕೆಲವು ನಟಿಯರು ಅಲ್ಲಿನ ನಟಿಯರಿಗೆ ನಾವೇ‌ನೂ ಕಡಿಮೆ ಇಲ್ಲ ಎನ್ನುವಂತೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ಹಾಗಾದರೆ ಟಾಲಿವುಡ್ ನಲ್ಲಿ ನಟಿಯರು ಪಡೆಯುತ್ತಿರುವ ಸಂಭಾವನೆ (Remuneration) ಎಷ್ಟು ಎನ್ನುವುದರ ಕಡೆಗೆ ಒಂದು ಸಲ ಗಮನ ನೀಡಿದರೆ, ಸದ್ಯಕ್ಕೆ ಟಾಲಿವುಡ್ ನಲ್ಲಿ ಸಿನಿ ಪ್ರೇಮಿಗಳ ಮೇಲೆ ಮೋಡಿ ಮಾಡಿರುವ ನಟಿ ಮೃಣಾಲ್‌ ಠಾಕೂರ್ (Mrunal Thakur) ಸಿನಿಮಾವೊಂದಕ್ಕೆ ನಾಲ್ಕು ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ.

ಟಾಲಿವುಡ್ ನ ಸ್ಟಾರ್ ನಟಿಯರ ಸಾಲಿನಲ್ಲಿ ಇರುವ ನಟಿ ಸಮಂತಾ (Samantha) ಅತ್ತ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಸಣ್ಣ ವಿರಾಮ ಪಡೆದಿದ್ದರೂ ಸಂಭಾವನೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ನಟಿ ಸಿನಿಮಾವೊಂದಕ್ಕೆ ಐದು ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ.

ತಮನ್ನಾ ಭಾಟಿಯಾ (Tamannah Bhatia) ಮತ್ತೊಬ್ಬ ಸ್ಟಾರ್ ನಟಿಯಾಗಿದ್ದಾರೆ. ‌ಹಿಂದಿಯಲ್ಲಿ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಾ, ತೆಲುಗು , ತಮಿಳು ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಈ ನಟಿ ಸಿನಿಮಾವೊಂದಕ್ಕೆ 4-5 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.

ಟಾಲಿವುಡ್ ನಲ್ಲಿ ಪುಷ್ಪ 2 ಸಿನಿಮಾ ಮೂಲಕ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಲು ಸಜ್ಜಾಗಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಾಲಿವುಡ್ ನಲ್ಲೂ ಅನಿಮಲ್ ನಂತರ ಸಾಕಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದು ಪ್ರಸ್ತುತ ಸಿನಿಮಾವೊಂದಕ್ಕೆ 3-4 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ.

ಟಾಲಿವುಡ್ ನಲ್ಲಿ ಒಂದೇ ವರ್ಷದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಸಾಕಷ್ಟು ಬೇಡಿಕೆ ಪಡೆದುಕೊಂಡ ನಟಿ ಶ್ರೀಲೀಲಾ (Sreeleela) ಅವರ ಸಾಲು ಸಾಲು ಸಿನಿಮಾ ಬಿಡುಗಡೆ ಆಗ್ತಿದೆ. ಆದರೆ ದೊಡ್ಡ ಸಕ್ಸಸ್ ಮಾತ್ರ ಬೆರಳೆಣಿಕೆಯಷ್ಟಾಗಿದೆ. ಈ ನಟಿ ತಮ್ಮ ಸಿನಿಮಾವೊಂದಕ್ಕೆ ಸುಮಾರು 2 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ರಶ್ಮಿಕಾಗೆ ಸ್ಪರ್ಧೆ ನೀಡುತ್ತಾ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಪೂಜಾ ಹೆಗ್ಡೆ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. ಈಗ ಕೆಲವೇ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ತೆಲುಗಿನಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಪ್ರಸ್ತುತ ನಟಿಯು ಮೂರು ಕೋಟಿ ಸಂಭಾವನೆಯಷ್ಟೇ ಪಡೆಯುತ್ತಿದ್ದಾರೆ.‌

ಲೇಡಿ ಪವರ್ ಸ್ಟಾರ್ ಖ್ಯಾತಿಯ ಸಾಯಿ ಪಲ್ಲವಿ (Sai Pallavi) ನಟಿಸುವುದು ಆಯ್ದ ಕೆಲವು ಸಿನಿಮಾಗಳಲ್ಲಿ ಮಾತ್ರವೇ. ನಟಿ ಸಿನಿಮಾವೊಂದಕ್ಕೆ ಎರಡು ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಈಗ ರಣಬೀರ್ ಜೊತೆಗೆ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ನಟಿಸುವುದಕ್ಕೆ ಆರು ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Comment