Sonakshi Sinha: ಝಹೀರ್ ನ ಮದ್ವೆ ಆದ ಸೋನಾಕ್ಷಿನ ಕುಟಂಬದಿಂದಲೇ ಹೊರಗೆ ಇಟ್ರಾ ನಟಿಯ ಅಣ್ಣ ಲವ್ ಸಿನ್ಹಾ?

Written by Soma Shekar

Published on:

---Join Our Channel---

Sonakshi Sinha: ಬಾಲಿವುಡ್ ನ (Bollywood) ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಗೆಳೆಯ ಝಹೀರ್ ಇಕ್ಬಾಲ್ (Zahher Iqbal) ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ನಟಿಯ ಮದುವೆಯ ವಿಚಾರವಾಗಿ ಒಂದಷ್ಟು ಸುದ್ದಿಗಳಾಗಿದ್ದವು. ಇದೇ ವೇಳೆ ಸೋನಾಕ್ಷಿ ಮದುವೆ ಅವರ ಮನೆಯವರಿಗೆ ಇಷ್ಟ ಇಲ್ಲ ಎನ್ನುವ ಮಾತು ಸಹಾ ಕೇಳಿ ಬಂದಿದೆ. ಇವೆಲ್ಲವುಗಳ ನಡುವೆಯೇ ಸೋನಾಕ್ಷಿ ಸಹೋದರ ಲವ್ ಸಿನ್ಹಾ (Luv Sinha) ಮಾಡಿರುವ ಒಂದು ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.

ಸೋನಾಕ್ಷಿ ಮದುವೆ ವೇಳೆ ಅವರ ತಂದೆ ಹಿರಿಯ ನಟ ಶತೃಘ್ನ ಸಿನ್ಹಾ, ಪೂನಂ ಸಿನ್ಹಾ, ಸಹೋದರ ಖುಷ್ ಸಿನ್ಹಾ ಹಾಗೂ ಕುಟುಂಬದವರು ಹಾಜರಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಸೋನಾಕ್ಷಿ ಅವರ ಅಣ್ಣ ಲವ್ ಸಿನ್ಹಾ ಹಾಜರಾಗಿರಲಿಲ್ಲ. ಲವ್ ಗೆ ಸೋನಾಕ್ಷಿ ಜಹೀರ್ ಜೊತೆಗೆ ಮದುವೆ ಆಗೋದು ಇಷ್ಟ ಇರಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ.

ಜುಲೈ ಒಂಬತ್ತರಂದು ಲವ್ ಸಿನ್ಹಾ ತಮ್ಮ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸುತ್ತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಅವರು ತಾವು ತಮ್ಮ ಸಹೋದರ ಖುಷ್ ತಂದೆ ತಾಯಿ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಫ್ಯಾಮಿಲಿ ಫೋಟೋ ಆಗಿದ್ರು ಇದರಲ್ಲಿ ಸೋನಾಕ್ಷಿ ಇಲ್ಲ ಅನ್ನೋದು ಎಲ್ಲರ ಗಮನ ಸೆಳೆದಿದೆ.

ಝಹೀರ್ ಇಕ್ಬಾಲ್ ನ ಮದುವೆ ಆಗಿದ್ದಕ್ಕೆ ಲವ್ ತಮ್ಮ ಸಹೋದರಿಯನ್ನು ಕುಟುಂಬದಿಂದ ದೂರ ಇಟ್ಟಿದ್ದಾರಾ ಅನ್ನೋ ಅನುಮಾನವೊಂದು ಈಗ ಎಲ್ಲರಲ್ಲೂ ಮೂಡಿದೆ. ಲವ್ ತಮ್ಮ ಪೋಸ್ಟ್ ನಲ್ಲಿ, ನನ್ನ ಅದ್ಭುತ ತಂದೆ ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಮಕ್ಕಳಾಗಿ ಜನಿಸಿರುವುದು ನಮ್ಮ ಅದೃಷ್ಟ. ನಿಮ್ಮ ಜೊತೆ ಕಳೆಯುವ ಪ್ರತಿ ಕ್ಷಣಕ್ಕೂ ನಾವು ಋಣಿ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಲವ್ ಅಪ್ಪ ಅಮ್ಮನ ಮದುವೆ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿ ಶೇರ್ ಮಾಡಿಕೊಂಡ ಫೋಟೋ ಈಗ ವೈರಲ್ ಆಗಿದೆ. ಅದರಲ್ಲಿ ಸೋನಾಕ್ಷಿ ಯಾಕಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಲವ್ ಸಿನ್ಹಾ ಮಾತ್ರ ಇದುವರೆಗೂ ತಂಗಿಯ ಮದುವೆಯ ಕುರಿತಾಗಿ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ ಎನ್ನುವುದು ಸಹಾ ಗಮನಾರ್ಹ ವಿಷಯವಾಗಿದೆ.

Leave a Comment