Sonakshi Marriage: ಕರೆದ್ರೆ ನಾನೂ ಹೋಗ್ತೀನಿ, ಜಹೀರ್ ಸೋನಾಕ್ಷಿ ಮದುವೆ ಬಗ್ಗೆ ಅಪ್ಪ ಶತೃಘ್ನ ಸಿನ್ಹಾ ಅಚ್ಚರಿ ಹೇಳಿಕೆ

Written by Soma Shekar

Published on:

---Join Our Channel---

Sonakshi Marriage: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆಗೆ ಮದುವೆಯಾಗುತ್ತಾರೆ (Sonakshi Marriage) ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡಿದೆ. ಜೂನ್ 23ರಂದು ಮುಂಬೈನಲ್ಲಿ ಇವರ ವಿವಾಹವು ನಡೆಯಲಿದೆ ಎಂದೂ ಇದರಲ್ಲಿ ಕೇವಲ ಕುಟುಂಬಸ್ಥರು ಮತ್ತು ಆತ್ಮೀಯರು ಮಾತ್ರವೇ ಭಾಗಿಯಾಗಲಿದ್ದಾರೆ ಎಂದು ಎನ್ನುವ ಮಾಧ್ಯಮಗಳಲ್ಲಿ ಸುದ್ದಿಗಳಾಗಿದೆ. ಆದರೆ ಈಗ ಹಿರಿಯ ನಟ, ರಾಜಕಾರಣಿ ಹಾಗೂ ಸೋನಾಕ್ಷಿ ಅವರ ತಂದೆ ಶತೃಘ್ನ ಸಿನ್ಹಾ (Shatrughan Sinha) ಅವರು ಮಗಳ ಮದುವೆಯ ಕುರಿತಾಗಿ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸೋನಾಕ್ಷಿ (Sonakshi Sinha) ನನ್ನ ಬಳಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಈಗಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆಯನ್ನ ಕೇಳುವುದಿಲ್ಲ. ಬದಲಾಗಿ ತಮ್ಮ ನಿರ್ಧಾರದ ಬಗ್ಗೆ ಕುಟುಂಬದವರಿಗೆ ಮಾಹಿತಿಯನ್ನಷ್ಟೇ ನೀಡುತ್ತಾರೆ ಎಂದಿದ್ದಾರೆ ಶತೃಘ್ನ ಸಿನ್ಹಾ. ಪ್ರಸ್ತುತ ನಾನು ದೆಹಲಿಯಲ್ಲಿ ಇದ್ದು, ಚುನಾವಣ ಫಲಿತಾಂಶದ ನಂತರ ಇಲ್ಲಿಗೆ ಬಂದಿದ್ದೇನೆ. ನನ್ನ ಮಗಳ ಬಗ್ಗೆ ಹಾಗೂ ಅವಳ ಯೋಜನೆಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳ ಮದುವೆಯ ಕುರಿತಾಗಿ ನಾನು ಏನನ್ನು ಹೇಳಿಲ್ಲ.

ಮಾದ್ಯಮಗಳಲ್ಲಿ ವರದಿಯಾಗಿರುವಷ್ಟೇ ನನಗೂ ಗೊತ್ತಿದೆ. ಮಗಳು ನನಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಹೆಂಡತಿ ಹೋಗಿ ಆಶೀರ್ವಾದ ಮಾಡುತ್ತೇವೆ. ನಾವು ಅವಳ ಸಂತೋಷವನ್ನು ಬಯಸುತ್ತೇವೆ. ನನ್ನ ಮಗಳ ನಿರ್ಧಾರದ ಬಗ್ಗೆ ನಮಗೆ ನಂಬಿಕೆ ಇದೆ. ಅವಳು ಎಂದಿಗೂ ಸಂವಿಧಾನೇತರ ಅಥವಾ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ.

ಅವಳು ಸ್ವಂತ ನಿರ್ಧಾರಗಳನ್ನ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ನನ್ನ ಮಗಳ ಮದುವೆಯಲ್ಲಿ ನಾನು ಡ್ಯಾನ್ಸ್ ಮಾಡೋದಕ್ಕೆ ಇಷ್ಟಪಡುತ್ತೇನೆ. ಎಲ್ಲರೂ ನನಗೆ ಕರೆ ಮಾಡಿ ಮದುವೆ ಬಗ್ಗೆ ಕೇಳಿದರು. ಮಾದ್ಯಮದವರಿಗೆ ಈ ಬಗ್ಗೆ ಗೊತ್ತು, ಆದರೆ ನನಗೆ ಈ ಬಗ್ಗೆ ಗೊತ್ತಿಲ್ಲ. ನಮಗೆ ಮಗಳು ಮಾಹಿತಿ ನೀಡಲಿ ಎಂದು ಕಾಯುತ್ತಿದ್ದೇನೆ ಎನ್ನುವ ಮಾತುಗಳನ್ನು ಶತೃಘ್ನ ಸಿನ್ಹಾ ಹೇಳುತ್ತಾ ಮಗಳ ಮದುವೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Leave a Comment