Kriti Shetty: ತನ್ನ ಮೊದಲ ಸಿನಿಮಾ ಉಪ್ಪೆನ ಮೂಲಕ ಟಾಲಿವುಡ್ ನಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದವರು ಕರಾವಳಿ ಬೆಡಗಿ ಕೃತಿ ಶೆಟ್ಟಿ (Kriti Shetty). ಮೊದಲ ಸಿನಿಮಾದಿಂದಲೇ ಸ್ಟಾರ್ ನಟಿಯ ಸ್ಥಾನವನ್ನು ಪಡೆದುಕೊಂಡ ನಟಿಗೆ ಉಪ್ಪೆನ (Uppena) ಸಿನಿಮಾ ನಂತರ ಸಾಕಷ್ಟು ಹೊಸ ಹೊಸ ಅವಕಾಶಗಳು ಹರಿದು ಬಂದವು. ಆದರೆ ನಟಿಯ ಅದೃಷ್ಟ ಕೈಕೊಟ್ಟಿತ್ತೇನೋ ಅನ್ನೋ ಹಾಗೇ ನಟಿಯ ಹೊಸ ಸಿನಿಮಾಗಳು ಸೋಲಿನ ಹಾದಿಯನ್ನು ಹಿಡ್ಕೊಳ್ತು. ಇದು ನಟಿಗೆ ತಮ್ಮ ಕೆರಿಯರ್ ಬಗ್ಗೆ ಚಿಂತೆಯನ್ನು ಉಂಟು ಮಾಡಿದೆ.
ಕೈ ತುಂಬಾ ಸಿನಿಮಾಗಳು, ಬ್ಯುಸಿ ಶೆಡ್ಯೂಲ್ ಅಂತ ಇದ್ದ ನಟಿ ಈಗ ಸಿನಿಮಾ ಅವಕಾಶಗಳು ಬರುತ್ತಾ ಅಂತ ಕಾಯೋ ಪರಿಸ್ಥಿತಿ ಎದುರಾಗಿದೆ ಅಂತ ಹೇಳಲಾಗ್ತಿದೆ. ಅದಕ್ಕೆ ಈಗ ನಟಿ ಅವಕಾಶಕ್ಕೋಸ್ಕರ ಒಂದು ದಿಟ್ಟ ನಿರ್ಧಾರವನ್ನು ಸಹಾ ಮಾಡಿದ್ದಾರೆ ಅನ್ನೊ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಹಿಟ್ ಆದಾಗ ಕೆಲವು ನಟಿಯರು ಆರಂಭದಲ್ಲಿ ನಾವು ಬಿಕಿನಿ ಹಾಕಲ್ಲ, ಬೋಲ್ಡ್ ಸೀನ್ ಮಾಡಲ್ಲ ಅಂತ ಹೇಳ್ತಾರೆ.
ಹಾಗೆ ಹೇಳಿದವರಲ್ಲಿ ನಟಿ ಕೃತಿ ಶೆಟ್ಟಿ ಕೂಡಾ ಇಬ್ರು. ಈ ಹಿಂದೆ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಕೂಡಾ ಹೀಗೆ ಹೇಳಿದ್ರು. ಆದ್ರೆ ಟಿಲ್ಲು ಸ್ಕ್ವೇರ್ ನಲ್ಲಿ ನಟಿ ತಾನು ಹಾಕಿದ್ದ ರೂಲ್ಸ್ ಗೆ ಗುಡ್ ಬೈ ಹೇಳಿ ಬಹಳ ಬೋಲ್ಡ್ ಆಗಿ ನಟಿಸಿ ಶಾಕ್ ಕೊಟ್ಟಿದ್ದಾರೆ. ಈಗ ಕೃತಿ ಅವರು ಕೂಡಾ ಅದೇ ದಾರಿಯಲ್ಲಿ ನಡೆಯೋ ನಿರ್ಧಾರವನ್ನು ಮಾಡಿದ್ದಾರಂತೆ. ತಾನು ಸಹಾ ಬೋಲ್ಡ್ ಆಗಿ ನಟಿಸೋಕೆ ಸಿದ್ಧ ಅಂತ ನಿರ್ಮಾಪಕರಿಗೆ ನಟಿ ಆಫರ್ ಕೊಟ್ಟಿದ್ದಾರಂತೆ.
ಕೃತಿ ಮೊದಲು ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಇದಲ್ಲದೇ ಬಾಲಿವುಡ್ ಸಿನಿಮಾವೊಂದರಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಟಾಲಿವುಡ್ ನಲ್ಲಿ ಉಪ್ಪೆನ ಮತ್ತು ಬಂಗಾರ್ರಾಜು ಸಿನಿಮಾಗಳು ನಟಿಗೆ ಯಶಸ್ಸನ್ನು ತಂದುಕೊಟ್ಟಿತು. ಆದರೆ ಅನಂತರ ನಟಿಸಿದ ಸಿನಿಮಾಗಳು ನಿರೀಕ್ಷಿತ ಮಟ್ಟದ ಗೆಲುವು ಪಡೆಯಲಿಲ್ಲ ಹಾಗೂ ನಟಿಯ ಬೇಡಿಕೆ ಕೂಡಾ ಕುಸಿಯತೊಡಗಿತ್ತು.