Rishab Shetty: ವನ್ಯ ಜೀವಿಗಳ ತಾಣದಲ್ಲಿ ಕುಟುಂಬದ ಜೊತೆಗೆ ಖುಷಿಯ ಕ್ಷಣಗಳನ್ನು ಆನಂದಿಸಿದ ರಿಷಬ್ ಶೆಟ್ಟಿ

Written by Soma Shekar

Published on:

---Join Our Channel---

Rishab Shetty: ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿಗಳಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಪ್ರಗತಿ ಶೆಟ್ಟಿ (Pragathi Shetty) ಅವರ ಜೋಡಿ ಕೂಡಾ ಒಂದಾಗಿದೆ. ರಿಷಬ್ ಶೆಟ್ಟಿ ಅವರು ತೆರೆಯ ಮೇಲೆ ಮೋಡಿಯನ್ನು ಮಾಡಿದರೆ, ತೆರೆಯ ಹಿಂದೆ ಪ್ರಗತಿ ಶೆಟ್ಟಿ ಅವರು ತಮ್ಮ ಪತಿಯ ಸಿನಿಮಾ ಕೆಲಸಗಳಲ್ಲಿ ತಾವು ಕೂಡಾ ಕೆಲಸವನ್ನು ಮಾಡುವ ಮೂಲಕ ಜೊತೆಯಾಗಿರುತ್ತಾರೆ. ಈ ಜೋಡಿ ಸೋಶಿಯಲ್ ಮೀಡಿಯಾಗಳಲ್ಲೂ ಸಹಾ ಸಾಕಷ್ಟು ಸಕ್ರಿಯರಾಗಿದ್ದಾರೆ. ‌

ಪ್ರಸ್ತುತ ರಿಷಬ್ ಶೆಟ್ಟಿ ಅವರು ತಮ್ಮ ಕಾಂತಾರ ಪ್ರೀಕ್ವೆಲ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕೆಲಸಗಳ ನಡುವೆ ಬಿಡುವು‌ ಮಾಡಿಕೊಂಡು ಈಗ ಕುಟುಂಬದೊಂದಿಗೆ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ.

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ತಮ್ಮ ಮುದ್ದು ಮಕ್ಕಳ ಜೊತೆಗೆ ಮೃಗಾಲಯದಂತಹ ಒಂದು ಸುಂದರವಾದ ತಾಣದಲ್ಲಿ ಬಿಡುವಿನ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಜೊತೆಗೆ ಸಮಯವನ್ನು ಕಳೆದಿದ್ದಾರೆ.

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ಈ ಸುಂದರ ಕ್ಷಣಗಳ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಇದಕ್ಕೆ ನೆಟ್ಟಿಗರು ಮತ್ತು ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ದಂಪತಿ ಆಗಾಗ ವಿಶೇಷ ಸಂದರ್ಭಗಳ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ.‌

ಈಗ ತಮ್ಮ ಬ್ಯುಸಿ ಶೆಡ್ಯೂಲ್ ನ ನಡುವೆ ವಿರಾಮದ ಸಮಯದಲ್ಲಿ ಕುಟುಂಬದೊಂದಿಗೆ ಕಳೆದಿರುವ ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ ಫ್ಯಾಮಿಲಿ ಟೈಮ್ ಅಂತ ಬರ್ಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಮಕ್ಕಳು ವನ್ಯ ಜೀವಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಬಣ್ಣ ಬಣ್ಣದ ಹಕ್ಕಿಗಳ ಜೊತೆಗೆ ಆಟವಾಡಿದ್ದಾರೆ. ವೈವಿದ್ಯಮಯ ಪ್ರಾಣಿಗಳನ್ನು ಸಹಾ ನೋಡಿ ಎಂಜಾಯ್ ಮಾಡಿದ್ದಾರೆ.‌

ಸೋಶಿಯಲ್ ಮೀಡಿಯಾದಲ್ಲೀಗ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದ ಜೊತೆಗೆ ಕಳೆದಂತಹ ಸುಂದರ ಕ್ಷಣಗಳ ಫೋಟೋಗಳು ವೈರಲ್ ಆಗ್ತಿದ್ದು, ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ.

Leave a Comment