Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Written by Soma Shekar

Published on:

---Join Our Channel---

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ ವಿಚಾರವಾಗಿ ಸುದ್ದಿಯಾಗಿಲ್ಲ. ಬದಲಾಗಿ ನಟಿಯು ಅಟಲ್ ಸೇತು (Atal Setu) ವಿಚಾರವಾಗಿ ವೀಡಿಯೋ ಒಂದರಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿ, ಸರ್ಕಾರವನ್ನು ಹೊಗಳಿದ್ದು ಈಗ ಚರ್ಚೆಗಳಿಗೆ ಕಾರಣವಾಗಿದೆ. ನಟಿ ಕಳೆದ ಹತ್ತು ವರ್ಷಗಳಲ್ಲಿ ಭಾರತ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದ್ದು ವೈರಲ್ ಆದ ಬೆನ್ನಲ್ಲೇ ನಟಿಯನ್ನು ನಿಂದನೆ ಮಾಡುವ, ಟೀಕಿಸುವ ಕಾರ್ಯಗಳು ಬಹಳ ಜೋರಾಗಿಯೇ ನಡೆಯುತ್ತಿದೆ.

ರಶ್ಮಿಕಾ ಅಟಲ್ ಸೇತುವನ್ನು ಹೊಗಳಿದ್ದಕ್ಕೆ ಕೇರಳ ಕಾಂಗ್ರೆಸ್ (Kerala Congress) ಕೆಂಡಾಮಂಡಲವಾಗಿದೆ. ಕೇರಳ ಕಾಂಗ್ರೆಸ್ ಘಟಕವು ಕಿಡಿಕಾರುತ್ತಾ, ಇದು ಇ.ಡಿ. ನಿರ್ದೇಶನದ ಬಾಡಿಗೆ ಜಾಹೀರಾತು’ ಎಂದು ನಿಂದಿಸಿದೆ. ಈ ಹಿಂದೆ ರಶ್ಮಿಕಾಗೆ ತೆರಿಗೆ ಇಲಾಖೆಯಿಂದ ನೋಟೀಸ್ ಬಂದಿತ್ತೆನ್ನಲಾಗಿದೆ, ಅದೇ ಕಾರಣಕ್ಕೆ ಇದೆಲ್ಲಾ ಎಂದು ಕಾಂಗ್ರೆಸ್ ಆರೋಪವನ್ನು ಮಾಡಿದೆ. ಅಲ್ಲದೇ ರಶ್ಮಿಕಾ ಮಂದಣ್ಣ‌ ತೋರಿಸಿದ ಅಟಲ್ ಸೇತು ಖಾಲಿಯಾಗಿದೆ ಅನ್ನೋದನ್ನ ಗಮನಿಸಿದ್ದೇವೆ.

ಈ ಹಿಂದೆ ಕಾಂಗ್ರೆಸ್‌ ನ ಕಾಲದಲ್ಲಿ 2009 ರಲ್ಲಿ ಉದ್ಘಾಟನೆಯಾದಂತಹ ಮುಂಬೈನ ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯನ್ನು (Bandra Worli Sea Link) ನಾವು ಪರಿಶೀಲನೆ ಮಾಡಿದಾಗ, ಅದನ್ನು ₹ 1,634 ಕೋಟಿ ವೆಚ್ಚದಲ್ಲಿ ನಿರ್ಮಸಲಾಗಿದೆ ಎಂದೂ, ಅದು 5.6 ಕಿ.ಮೀ ಇದ್ದು, ಯಾವುದೇ ರೀತಿಯ ಪ್ರಾಯೋಜಿತ ಜಾಹೀರಾತಿಲ್ಲದೆ ಜನಪ್ರಿಯತೆಯನ್ನು ಗಳಿಸಿದೆ. ಅದಲ್ಲದೇ ಇಲ್ಲಿ ಪ್ರತಿ ಕಾರಿಗೆ ₹85 ಶುಲ್ಕ ವಿಧಿಸಲಾಗುತ್ತಿದ್ದು, ಇದರ ಆದಾಯವು ಮಾರ್ಚ್ 2022 ರಲ್ಲಿ ₹9.95 ಕೋಟಿಗಳಷ್ಟಿತ್ತು.

ಆದರೆ ಅಟಲ್‌ ಸೇತುವನ್ನು ಒಟ್ಟು ₹17,840 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಮತ್ತು ಇಲ್ಲಿ ಒಂದು ಟ್ರಿಪ್ ಗೆ ಪ್ರತಿ ಕಾರಿಗೆ ₹250 ಟೋಲ್ ದರವನ್ನು ನಿಗಧಿ ಮಾಡಲಾಗಿದ್ದು, ಇದು ಸಾಮಾನ್ಯ ಜನರಿಗೆ ಅಸಹನೀಯ ಎನಿಸಿದೆ. ಅಟಲ್ ಸೇತು ಉದ್ಘಾಟನೆಯ ನಂತರ, 102 ದಿನಗಳಲ್ಲಿ ಒಟ್ಟು ₹22.57 ಕೋಟಿ ಹಣವನ್ನು ಸಂಗ್ರಹಿಸಲಲಾಗಿದ್ದು,ಇದು ಕೇವಲ ₹6.6 ಕೋಟಿಯ ಮಾಸಿಕ ಆದಾಯಕ್ಕೆ ಸಮ ಎಂದು ಟೀಕೆ ಮಾಡಿದೆ.

ಈ ದರದಲ್ಲಿ ಅಟಲ್ ಸೇತುವಿನ ನಿರ್ಮಾಣ ವೆಚ್ಚವನ್ನು ವಾಪಸ್ ಪಡೆಯಲು 225 ವರ್ಷಗಳು ಬೇಕಾಗುತ್ತದೆ. ಆದರೆ ಬಡ್ಡಿಗೆ ಲೆಕ್ಕವಿಲ್ಲ. ಇನ್ನು ಇದನ್ನು ಬಾಂದ್ರಾ-ವರ್ಲಿ ಸೀ ಲಿಂಕ್‌ ಗೆ ಹೋಲಿಕೆ ಮಾಡಿ ನೋಡಿದಾಗ ಈ ಸೇತುವೆನ್ನು ಸರಿ ಸುಮಾರು 20% ವಾಹನಗಳು ಮಾತ್ರವೇ ಬಳಸಿಕೊಳ್ಳುತ್ತಿವೆ ಎನ್ನಲಾಗಿದ್ದು, ಉದ್ಘಾಟನೆಗೂ ಮುನ್ನ ಮಾಸಿಕ ಅಂದಾಜು ₹30 ಕೋಟಿ ಆದಾಯ ಬರಬೇಕಿತ್ತು ಆದ ಕಾರಣ ಈಗ ಪ್ರತಿ ತಿಂಗಳು ₹23.4 ಕೋಟಿ ಕೊರತೆಯಾಗುತ್ತಿದೆ ಎಂದೂ ಸಹಾ ಹೇಳಿದೆ.

Leave a Comment