Actress Siri: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada 10) ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಸಿರಿ (Actress Siri) ಅವರಿಗೆ ಮದುವೆ ಯಾವಾಗ? ಅವರು ಇನ್ನು ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆಗಳ ವಿಷಯವಾಗಿ ಒಂದಷ್ಟು ಸುದ್ದಿಗಳು ಹರಿದಾಡಿತ್ತು ಮತ್ತು ಸಿರಿ ಅವರು ತಾನೇಕೆ ಮದುವೆ ಆಗಿಲ್ಲ ಅನ್ನೋ ವಿಚಾರವನ್ನ ಹೇಳಿಕೊಂಡಿದ್ದು ಉಂಟು. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಎನ್ನುವಂತೆ ಸಿರಿಯವರಿಗೆ ಮದುವೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿರಿ ಅವರ ಮದುವೆ ವೀಡಿಯೋ ವೈರಲ್ ಆಗ್ತಿದ್ದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಅಚ್ಚರಿ ಕೂಡ ಆಗ್ತಿದೆ.
ಕನ್ನಡದ ಹಲವು ಜನಪ್ರಿಯ ಸೀರಿಯಲ್ ಗಳಲ್ಲಿ ನಟಿಸಿ ಹೆಸರನ್ನು ಪಡೆದುಕೊಂಡ ಸಿರಿಯವರ ಮದುವೆ ವಿಚಾರ ಆಗಾಗ ಸುದ್ದಿಗಳಾಗುತ್ತಿದ್ದವು. ಈಗ ಎರಡು ದಿನಗಳ ಹಿಂದೆ ಅವರಿಗೆ ಮೈ ತುಂಬಾ ಅರಿಶಿನ ಹಚ್ಚಿರುವ ವೀಡಿಯೋ ವೈರಲ್ ಆಗಿತ್ತು. ಬಹುಶಃ ಇದು ಯಾವುದೋ ಸಿನಿಮಾ ಅಥವಾ ಧಾರಾವಾಹಿಯ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿಯವರು (Siri Marriage) ತಮ್ಮ ನಿಜ ಜೀವನದಲ್ಲಿ ದಾಂಪತ್ಯದ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಿರಿಯವರು ಮದುವೆಯಾಗಿರುವ ಹುಡುಗ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಎನ್ನಲಾಗಿದ್ದು, ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ನಡೆದಿದ್ದು, ಮದುವೆಯ ವಿಚಾರವಾಗಿ ಸಿರಿಯವರು ಎಲ್ಲಿಯೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ದೇವಸ್ಥಾನದಲ್ಲಿ ಬಹಳ ಸರಳವಾಗಿ ಸಿರಿ ಅವರ ಮದುವೆ ನಡೆದಿದೆ.
ವೈರಲ್ ವಿಡಿಯೋ ನೋಡಿದ ಮೇಲೆ ಸಿರಿ ಅವರಿಗೆ ಅವರ ಅಭಿಮಾನಿಗಳ ಕಡೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಹರಿದು ಬರುತ್ತಿವೆ. ಈ ವಿಚಾರವಾಗಿ ಸಿರಿ ಅವರು ಹೆಚ್ಚಿನ ಮಾಹಿತಿಯನ್ನು ನೀಡಬೇಕಾಗಿದ್ದು, ಅವರ ಅಭಿಮಾನಿಗಳು ನಟಿ ಅಧಿಕೃತವಾಗಿ ಯಾವಾಗ ಮದುವೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.