Actor Darshan: ದರ್ಶನ್ ಅವರ ಮೇಲೆ ಬೇಷರತ್ ಗೌರವ ಇದೆ, ನಟನ ಪರ ದನಿ ಎತ್ತಿದ ನಟಿ ಯುಮನಾ ಶ್ರೀನಿಧಿ

Written by Soma Shekar

Published on:

---Join Our Channel---

Actor Darshan: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಹಾಗೂ ಸ್ಯಾಂಡಲ್ವುಡ್ ನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ಯಮುನಾ ಶ್ರೀನಿಧಿ (Yamuna Srinidhi) ಅವರು ಕಿರುತೆರೆಯ ಪ್ರೇಕ್ಷಕರಿಗೆ ಚಿರಪರಿಚಿತ ನಟಿಯಾಗಿದ್ದಾರೆ. ಇದೀಗ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಅವರ ಪರವಾಗಿ ತಮ್ಮ ಅನಿಸಿಕೆಯನ್ನು ಶೇರ್ ಮಾಡಿಕೊಂಡಿದ್ದಾರೆ.

ನಟ ದರ್ಶನ್ ಅವರು ಕೊ ಲೆ ಕೇಸ್ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ವೇಳೆ ಇಷ್ಟು ದಿನಗಳ ಕಾಲ ಮೌನವಾಗಿದ್ದ ಸೆಲೆಬ್ರಿಟಿಗಳು ಈಗ ಒಬ್ಬೊಬ್ಬರಾಗಿ ಈ ಪ್ರಕರಣದ ಕುರಿತಾಗಿ ಮಾತನಾಡಲು ಆರಂಭಿಸಿದ್ದಾರೆ. ಈಗ ಯಮುನಾ ಶ್ರೀನಿಧಿ ಅವರು ತಮ್ಮ ಪೋಸ್ಟ್ ನಲ್ಲಿ ದರ್ಶನ್ ಅವರ ಮೇಲೆ ತನಗೆ ಬೇಷರತ್ ಗೌರವ ಇದೆ ಎಂದಿದ್ದು, ನಟನ ಅಭಿಮಾನಿಗಳು ಇದನ್ನ ನೋಡಿ ಖುಷಿಯಾಗಿದ್ದಾರೆ.

ನಟಿ ತಮ್ಮ ಪೋಸ್ಟ್ ನಲ್ಲಿ, ಈ ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ ಮತ್ತು ನಿಷ್ಠೆ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಾಗುತ್ತಿರಲಿಲ್ಲ. ನಾನು ಇಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ, ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಜನರು ಅಥವಾ ಮಾಧ್ಯಮದ ವಿಚಾರಣೆಗಿಂತ ನ್ಯಾಯಾಲಯದ ವಿಚಾರಣೆಯನ್ನು ನಾನು ನಂಬುತ್ತೇನೆ.

ದರ್ಶನ್ ಸರ್ ಬಗ್ಗೆ ನನ್ನ ಬೇಷರತ್ತಾದ ಗೌರವಕ್ಕೆ ಕಾರಣ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ!!
ನಮ್ಮ ಮಕ್ಕಳು ತಪ್ಪು ಮಾಡಿದಾಗ, ನಾವು ಅವರಿಗೆ ಮಾರ್ಗದರ್ಶನ ನೀಡುತ್ತೇವೆ, ನಾವು ಅವರನ್ನು ಶಿಕ್ಷಿಸುತ್ತೇವೆ, ಆದರೆ ನಾವು ಅವರನ್ನು ತಿರಸ್ಕರಿಸುವುದಿಲ್ಲ, ನಾವು ಅವರನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅದೇ ರೀತಿ, ಏನೇ ಆಗಲಿ, ನಿಮ್ಮ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ದರ್ಶನ್ ಸರ್.

ಬೇಷರತ್ತಾದ ಪ್ರೀತಿಯನ್ನು ಪಡೆಯುವುದು ಸುಲಭವಲ್ಲದ ಜಗತ್ತಿನಲ್ಲಿ, ದರ್ಶನ್ ಸರ್ ಅವರ ಅಭಿಮಾನಿಗಳಿಂದ ಬೇಷರತ್ತಾದ ಪ್ರೀತಿ ಮತ್ತು ಬೆಂಬಲವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. “ದರ್ಶನ್ ಸರ್ ಅವರ ಅಭಿಮಾನಿಗಳಲ್ಲಿ ನನ್ನ ವಿನಮ್ರ ವಿನಂತಿ” – ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ,ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ, ಯಾವುದು ಸರಿ-ತಪ್ಪು ಎಂದು ಕಂಡುಹಿಡಿಯಲು ನ್ಯಾಯಾಂಗವಿದೆ.

ಯಾರು ಏನೇ ಮಾತಾಡಿಕೊಂಡರೂ ತಾಳ್ಮೆಯಿಂದಿರಿ ಎಂದು ಬೇಡಿಕೊಳ್ಳುತ್ತೇನೆ, ಈ ಅಹಿತಕರ ಘಟನೆಯಿಂದ ನಮಗೆಲ್ಲ ನೋವಾಗಿದೆ, ಈಗ ಬೇಕಾಗಿರುವುದು ತಾಳ್ಮೆ ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ನೋಡಿ ಸಹಜವಾಗಿಯೇ ದರ್ಶನ್ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಒಂದಷ್ಟು ಜನ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.

Leave a Comment