Nayanthara: ನಯನತಾರ ಜೊತೆ ಆ ಸಿನಿಮಾ ಮಾಡಿ ತಪ್ಪು ಮಾಡಿಬಿಟ್ಟೆ; ಸ್ಟಾರ್ ನಿರ್ದೇಶಕನ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Nayanthara: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ನಟಿ ನಯನತಾರಾ (Nayanthara) ಈಗಾಗಲೇ 75 ಸಿನಿಮಾಗಳನ್ನು ಮುಗಿಸಿದ್ದಾರೆ. ನಯನತಾರಾ ಇಂಡಸ್ಟ್ರಿಗೆ ಕಾಲಿಟ್ಟಾಗ ಇಂಡಸ್ಟ್ರಿಗೆ ಪರಿಚಯರಾದ ಬಹುತೇಕ ಎಲ್ಲಾ ನಟಿಯರು ಸಹಾ ಇಂದು ಬೇಡಿಕೆ ಇಲ್ಲದೇ ಸಿನಿಮಾಗಳಿಂದ ದೂರವಾಗಿದ್ದರೆ ಇನ್ನೂ ಕೆಲವರು ಮದುವೆ ಮಾಡಿಕೊಂಡು ಸಂಸಾರ ಜೀವನದಲ್ಲಿ ಕಳೆದು ಹೋಗಿದ್ದಾರೆ. ಆದರೆ ನಯನತಾರಾ ಮಾತ್ರ ಇಂದಿಗೂ ಬಹುಬೇಡಿಕೆಯ ಹಾಗೂ ದುಬಾರಿ ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.

ಈಗ ಬಾಲಿವುಡ್ ಗೂ ಎಂಟ್ರಿಯನ್ನು ನೀಡಿರೋ ನಯನತಾರಾ ಕುರಿತಾಗಿ ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮಲ (Shekhar Kammala) ನೀಡಿರುವ ಹೇಳಿಕೆಗಳು ಈಗ ವೈರಲ್ ಆಗ್ತಿದೆ. ನಿರ್ದೇಶಕನ ಅಚ್ಚರಿಯ ಹೇಳಿಕೆಗಳನ್ನು ಕೇಳಿ ಸಿನಿ ಪ್ರೇಮಿಗಳು ಮಾತ್ರವಲ್ಲ ನಟಿ ನಯನತಾರಾ ಅವರ ಅಭಿಮಾನಿಗಳು ಸಹಾ ಶಾ ಕ್ ಆಗಿದ್ದಾರೆ. ಇಷ್ಟಕ್ಕೂ ನಿರ್ದೇಶಕ ಶೇಖರ್ ಕಮ್ಮಲ ಅಂತದ್ದೇನು ಹೇಳಿದ್ರು ಅನ್ನೋದನ್ನ ತಿಳಿಯೋಣ ಬನ್ನಿ.

ನಿರ್ದೇಶಕ ಶೇಖರ್ ಕಮ್ಮಲ ತೆಲುಗಿನಲ್ಲಿ ಫಿದಾ, ಲವ್ ಸ್ಟೋರಿ ಸಿನಿಮಾಗಳ ಮೂಲಕ ಹಿಟ್ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತಂದ ನಿರ್ದೇಶಕ ಇವರು. ಇದೇ ನಿರ್ದೇಶಕ ಶೇಖರ್ ಕಮ್ಮಲ ಅವರು ನಯನತಾರಾ ಜೊತೆಗೆ ಅನಾಮಿಕ (Anamika) ಹೆಸರಿನ ಸಿನಿಮಾ ಮಾಡಿದ್ದರು. ಅದು ಹಿಂದಿಯ ಕಹಾನಿ ಸಿನಿಮಾದ ರಿಮೇಕ್ ಆಗಿತ್ತು‌. ಆದರೆ ಅನಾಮಿಕ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವನ್ನು ಸಾಧಿಸಲೇ ಇಲ್ಲ.

ಶೇಖರ್ ಕಮ್ಮಲ ಸಂದರ್ಶನವೊಂದರಲ್ಲಿ ಮಾತನಾಡ್ತಾ, ನಿರ್ಭಯಾ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿತ್ತು, ಆಗ ನಾಯಕಿ ಪ್ರಧಾನ ಸಿನಿಮಾ ಮಾಡಲು ಯೋಚಿಸಿದೆ, ನಯನತಾರಾನ ನಾಯಕಿ ಮಾಡಿಕೊಂಡು ಅನಾಮಿಕ ಸಿನಿಮಾ ಮಾಡಿದೆ. ಅದೇ ನಾನು ಮಾಡಿದ ತಪ್ಪು ಎನ್ನುವ ಮಾತುಗಳನ್ನು ಹೇಳಿದ್ದು, ಅದು ಈಗ ವೈರಲ್ ಆಗುತ್ತಿದೆ. ಪ್ರಸ್ತುತ ಶೇಖರ್ ಕಮ್ಮಲ ಧನುಷ್ ಮತ್ತು ರಶ್ಮಿಕಾ ಅಭಿನಯದ ಕುಬೇರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Leave a Comment