Chandan Shetty: 60 ಲಕ್ಷ ರೂ. ಮದ್ವೆಗೆ ಖರ್ಚು ಮಾಡಿಬಿಟ್ಟೆ, ಲೈಫ್ ದೊಡ್ಡ ಪಾಠ ಕಲಿಸಿತು, ಮನಸ್ಸಿನ ಮಾತು ಹೇಳಿದ ಚಂದನ್ ಶೆಟ್ಟಿ

Written by Soma Shekar

Published on:

---Join Our Channel---

Chandan Shetty: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ (Sandalwood) ಸಂಚಲನ ಸೃಷ್ಟಿಸಿದ ಸುದ್ದಿಗಳಲ್ಲಿ ಒಂದು ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedita Gowda) ಅವರ ವಿಚ್ಚೇದನದ ಸುದ್ದಿಯಾಗಿತ್ತು. ಇದ್ದಕ್ಕಿದ್ದ ಹಾಗೆ ಹೊರ ಬಂದ ಈ ಸುದ್ದಿ ಎಲ್ಲರಿಗೂ ಶಾಕ್ ನೀಡಿತ್ತು. ಇವರ ಡಿವೋರ್ಸ್ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿತ್ತು, ಡಿವೋರ್ಸ್ ನಂತರ ಚಂದನ್ ಮತ್ತು ನಿವೇದಿತಾ ಜೊತೆಯಾಗಿಯೇ ಪತ್ರಿಕಾಗೋಷ್ಠಿ ಸಹಾ ನಡೆಸಿದ್ದರು. ಈಗ ವಿಷಯ ತಣ್ಣಗಾಗಿದೆ. ಚಂದನ್ ಅವರು ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಭಾಗಿಯಾಗಿ ಒಂದಷ್ಟು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ತಾವು ನಡೆದು ಬಂದ ಹಾದಿಯ ಕುರಿತಾಗಿ ಮಾತನಾಡಿದ ಚಂದನ್ ಶೆಟ್ಟಿ ಅವರು, ನನಗೆ ಅಹಂ ಅನ್ನೋದಿಲ್ಲ, ಒಂದು ಹಾಡು ಹಿಟ್ ಆಯ್ತು ಅಂದ್ರೆ ಅದರ ಹಿಂದೆ ತುಂಬಾ ಜನರ ಶ್ರಮ ಇರುತ್ತೆ ಎಂದು ಹೇಳಿದ್ದಾರೆ. ಅಲ್ಲದೇ ತಾನು ಗ್ಯಾಜೆಟ್ ಗಳನ್ನು ವಿಪರೀತ ಖರೀದಿ ಮಾಡ್ತಿದ್ದೆ, ಸಿಕ್ಕಾಪಟ್ಟೆ ಖರ್ಚು ಮಾಡ್ತಿದ್ದೆ ಕೋವಿಡ್ ನನಗೆ ಪಾಠ ಕಲಿಸಿತು ಎನ್ನುವ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

ಕೋವಿಡ್ ಸಮಯದಲ್ಲಿ ದುಡ್ಡನ್ನ ಹೇಗೆ ಮ್ಯಾನೇಜ್ ಮಾಡೋದು ಅನ್ನೋದನ್ನ ಕಲಿತೆ. ನಾನು ಮಾಡಿದ ಪ್ರಾಜೆಕ್ಟ್ ಗಳಿಂದ ತುಂಬಾ ಸಕ್ಸಸ್ ಸಿಗುತ್ತೆ ಅಂದುಕೊಳ್ಳೋ ಸಮಯದಲ್ಲಿ ಕೋವಿಡ್ ಬಂದು ಬರ ಸಿಡಿಲು ಬಡಿಯಿತು. ಆಗಷ್ಟೇ ನನ್ನ ಮದುವೆ ಆಯಿತು. ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂ. ಖರ್ಚು ಮಾಡಿಬಿಟ್ಟೆ. ಮದುವೆ ಆಗುತ್ತಲೇ ಕೋವಿಡ್ ಬಂತು.

ಹಣದ ಕೊರತೆ ಉಂಟಾಗಿ, ಇದೆಲ್ಲಾ ಬೇಕಿತ್ತಾ ಅಂತ ಅನಿಸಿತ್ತು. ತುಂಬಾ ಕಷ್ಟ ಪಟ್ಟುಬಿಟ್ಟೆ. ನಿಧಾನಕ್ಕೆ ಮೇಲೆ ಬಂದೆ ಎಂದು ಅಂದಿ‌ನ ದಿನಗಳನ್ನು ಚಂದನ್ ಶೆಟ್ಟಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಬಂದರೆ ಬೆಟ್ಟ, ಹೋದ್ರೆ ಟಾಟಾ ಎನ್ನುವುದು ಲೈಫು. ಯಾರಿಗೆ ಯಾವಾಗ ಏನಾಗುತ್ತೆ ಅಂತ ಗೊತ್ತಾಗೋದಿಲ್ಲ. ಯಾವ ಹಾಡುಗಳು ಫ್ಲಾಪ್ ಆಗುತ್ತೆ, ಯಾವುದು ಹಿಟ್ ಆಗುತ್ತೆ ತಿಳಿಯೋದಿಲ್ಲ ಎಂದಿದ್ದಾರೆ ಚಂದನ್ ಶೆಟ್ಟಿ.

Leave a Comment