Tirupati: ತಿರುಮಲಕ್ಕೆ ಹರಿದು ಬರ್ತಿದೆ ಭಕ್ತ ಸಾಗರ: ತಿರುಪತಿಗೆ ಹೋಗೋ ಪ್ಲಾನ್ ಇದ್ರೆ ಮೊದಲು ಈ ಸುದ್ದಿ ನೋಡಿ

Written by Soma Shekar

Published on:

---Join Our Channel---

Tirupati: ಬೇಸಿಗೆ ರಜೆ ಇನ್ನೇನು ಮುಗಿಯುವ ಹೊತ್ತಲ್ಲೇ ತಿರುಪತಿ (Tirupati) ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ತೆಲುಗು ರಾಜ್ಯಗಳು ಮಾತ್ರವೇ ಅಲ್ಲದೇ ಕರ್ನಾಟಕ ಮತ್ತು ತಮಿಳುನಾಡಿನಿಂದ ಕೂಡಾ ಭಾರಿ ಸಂಖ್ಯೆಯಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬರುತ್ತಿರುವ ಕಾರಣದಿಂದಾಗಿ ತಿರುಮಲ (Tirumala) ಬೆಟ್ಟದಲ್ಲಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಸುಮಾರು ಮೂರು ಕಿಲೋಮೀಟರ್ ಉದ್ದದ ಸರತಿ ಸಾಲುಗಳನ್ನ ನೋಡಬಹುದಾಗಿದೆ.

ತಿರುಮಲದಲ್ಲಿ ವೈಕುಂಠಂ ಕಾಂಪ್ಲೆಕ್ಸ್ ಮತ್ತು ನಾರಾಯಣ ಗಿರಿ ಶೆಡ್ ಗಳು ಭಕ್ತರಿಂದ ತುಂಬಿ ಹೋಗಿದೆ ಎಂದು ತಿಳಿದು ಬಂದಿದೆ. ಇದಲ್ಲದೇ ರಿಂಗ್ ರೋಡ್ ನಿಂದ ಅಕ್ಟೋಪಸ್ ಭವನದವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿರುವ ಕಾರಣದಿಂದಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಕನಿಷ್ಠ ಎಂದರು 24 ಗಂಟೆಗಳ ಸಮಯ ಹಿಡಿಯುತ್ತಿದೆ ಎಂದು ವರದಿಯಾಗಿದೆ.

ಸರತಿ ಸಾಲಿನಲ್ಲಿ ಕಾಯುತ್ತಿರುವ ಭಕ್ತರಿಗಾಗಿ ಕುಡಿಯುವ ನೀರು, ಅನ್ನಪ್ರಸಾದ ಮತ್ತು ಹಾಲನ್ನು ಟಿಟಿಡಿ (TTD) ಪೂರೈಕೆ ಮಾಡುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ದಿನವೊಂದಕ್ಕೆ ಅರವತ್ತು ಸಾವಿರ ಭಕ್ತರು ಶ್ರೀ ವೆಂಕಟೇಶ್ವರನ ದರ್ಶನವನ್ನು ಪಡೆಯುತ್ತಿದ್ದರು. ಆದರೆ ಈಗ ಆ ಸಂಖ್ಯೆ 90 ಸಾವಿರಕ್ಕೆ ಮುಟ್ಟಿದೆ. ತಿರುಮಲಕ್ಕೆ ಬರುವವರ ಸಂಖ್ಯೆ ಇನ್ನು ಕೆಲವು ದಿನಗಳ ಕಾಲದವರೆಗೆ ಹೀಗೆ ಮುಂದುವರೆಯುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ.

ಟಿಟಿಡಿ ಒದಗಿಸಿರುವ ಮಾಹಿತಿಗಳ ಪ್ರಕಾರ ಕಳೆದ ಬುಧವಾರ ಒಂದೇ ದಿನದಲ್ಲಿ 81 ಸಾವಿರಕ್ಕೂ ಅಧಿಕ ಭಕ್ತರು ದರ್ಶನವನ್ನು ಮಾಡಿದರೆ, ಗುರುವಾರ ಈ ಸಂಖ್ಯೆ 76,000 ಮತ್ತು ಶುಕ್ರವಾರ 75, ಸಾವಿರವಾಗಿತ್ತು. ತಿರುಮಲ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿರುವುದರಿಂದ ಅವರ ನಿಯಂತ್ರಣದ ವಿಚಾರದಲ್ಲಿ ಈಗ ಟಿಟಿಡಿ ಗೆ ಬಂದು ಸವಾಲಾಗಿ ಎದುರಾಗಿದೆ. ಟಿಟಿಡಿ ಭಕ್ತರ ನಿರ್ವಹಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

Leave a Comment