Actress Darshana: ಬೋಲ್ಡ್ ಸೀನ್ ಅಂದ್ರು, ಬಟ್ಟೆ ಬಿಚ್ಚಿ ಹೀರೋ ಜೊತೆ ಮಲಗಿದೆ, ಅದ್ರಲ್ಲೇನಿದೆ? ನಟಿಯ ಬೋಲ್ಡ್ ಮಾತು

Written by Soma Shekar

Published on:

---Join Our Channel---

Actress Darshana: ಇಂದಿನ ಸಿನಿಮಾಗಳಲ್ಲಿ ನಟಿಯರು ಮಡಿವಂತಿಕೆಯನ್ನು ದೂರ ಇಟ್ಟು ಬೋಲ್ಡ್ ಆಗಿ ನಟಿಸುವುದು ಸಾಮಾನ್ಯವಾದ ವಿಷಯವಾಗಿದೆ. ಕೆಲವು ನಟಿಯರಂತೂ ಯಾವುದೇ ಮುಜುಗರ ಇಲ್ಲದೇ ಬಟ್ಟೆ ಬಿಚ್ಚಿ ಕ್ಯಾಮರಾ ಮುಂದೆ ಪೋಸ್ ನೀಡಿ ಸುದ್ದಿಯಾಗುತ್ತಾರೆ. ಅಲ್ಲದೇ ರಾತ್ರೋ ರಾತ್ರಿ ನಟಿಯು ಸ್ಟಾರ್ ನಟಿಯರಿಗೆ ಟಕ್ಕರ್ ಕೊಡುವಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಉದಾಹರಣೆಗೆ ಅನಿಮಲ್ ಸಿನಿಮಾದಲ್ಲಿ ಕೆಲವೇ ನಿಮಿಷಗಳ ಪಾತ್ರ ಮಾಡಿದರೂ ತೃಪ್ತಿ ಡಿಮ್ರಿ (Tripti Dimri) ನ್ಯಾಷನಲ್ ಲೆವೆಲ್ ನಲ್ಲಿ ಸುದ್ದಿಯಾದ ನಟಿ.

ಈಗ ಮಲೆಯಾಳಂ ನಟಿಯೊಬ್ಬರು ತಾನು ನಟಿಸಿದ ಸಿನಿಮಾದ ಹಸಿ ಬಿಸಿ ದೃಶ್ಯಗಳ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಚಾರಗಳು ವೈರಲ್ ಆಗಿದೆ. ಮಲೆಯಾಳಂನಲ್ಲಿ ಜನಪ್ರಿಯತೆ ಪಡೆದಿರುವ ತೆಲುಗಿನಲ್ಲೂ ನಟಿಸಿರುವ ನಟಿ ದರ್ಶನಾ (Actress Darshana) ಅವರ ಹೊಸ ಸಿನಿಮಾ ಪ್ಯಾರಡೈಸ್ ಇತ್ತೀಚಿಗೆ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿನ ಇಂಟಿಮೇಟ್ ದೃಶ್ಯಗಳ ಕುರಿತಾಗಿ ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

ಸಂದರ್ಶನದಲ್ಲಿ ನಟಿಯನ್ನು ಅವರ ನಟನೆಯ ಅಣುಂ ಪೆಣ್ಣುಂ (Aanum Pennum) ಸಿನಿಮಾದ ದೃಶ್ಯಗಳ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ನಟಿ ಯಾವುದೇ ಮುಜುಗರ ಇಲ್ಲದೇ ಉತ್ತರ ನೀಡುತ್ತಾ, ಸಿನಿಮಾದಲ್ಲಿ ಇಂಟಿಮೇಟ್ ದೃಶ್ಯ ಇದೆ ಅನ್ನೋದನ್ನ ನಿರ್ದೇಶಕರು ಮೊದಲೇ ಹೇಳಿದ್ದರು. ಕಥೆ ಕೇಳಿದಾಗ ಬಟ್ಟೆ ಇಲ್ಲದೇ ಬರಬೇಕು ಎನ್ನುವುದು ಗೊತ್ತಾಯಿತು. ಶೂಟಿಂಗ್ ಮಾಡುವಾಗ ಬಟ್ಟೆ ಹಾಕಬೇಕು ಅಂತ ನನಗೇನು ಅನಿಸಲೇ ಇಲ್ಲ.

ಬಟ್ಟೆ ಇಲ್ಲದೇ ಶೂಟಿಂಗ್ ಮುಗಿಸಿ ಬಂದೆ ಎಂದು ಹೇಳಿದ್ದಾರೆ ನಟಿ ದರ್ಶನಾ. ಅಂತಹ ದೃಶ್ಯಗಳನ್ನು ಮಾಡುವಾಗ ಹಾಗೆ ಇರುವುದು ನಟಿಯ ಕರ್ತವ್ಯ ಎನ್ನುವುದಾಗಿ ನಟಿ ದರ್ಶನ ಹೇಳಿಕೊಂಡಿದ್ದಾರೆ. ಅಲ್ಲದೇ ಸಿನಿಮಾದ ನಿರ್ದೇಶಕ ಆಶಿಕ್, ಛಾಯಾಗ್ರಾಹಕ ಶೈಜಕಾ ಮತ್ತು ಸಹ ನಟ ರೋಷನ್ ಮೇಲೆ ನನಗೆ ಇದ್ದ ನಂಬಿಕೆಯಿಂದ ಹಾಗೆ ನಟಿಸಿದೆ ಎನ್ನುವ ಮಾತುಗಳನ್ನು ನಟಿ ಹೇಳಿದ್ದಾರೆ. ನಟಿಯ ಮಾತುಗಳು ವೈರಲ್ ಆಗಿದ್ದು, ಇದಕ್ಕೆ ಪರ ವಿರೋಧ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.

Leave a Comment