Entertainment

Brinadavana Serial : ರಿಯಲ್ ಲವ್ ಬ್ರೇಕಪ್ ಆಯ್ತಾ? ಬೃಂದಾವನ ಸೀರಿಯಲ್ ನಟಿ ಮಾಡಿದ ಪೋಸ್ಟ್ ಏನು?

Brindavana Serial : ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಬೃಂದಾವನ ಸೀರಿಯಲ್ ನಲ್ಲಿ (Brindavana Serial) ನಾಯಕಿಯಾಗಿ ಪುಷ್ಪ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಭರದ್ವಾಜ್ ಅವರ ಕುರಿತಾಗಿ ಕಳೆದ ಕೆಲವು ದಿನಗಳಿಂದಲೂ ಸುದ್ದಿಗಳು ಹರಿದಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ. ಅಮೂಲ್ಯ ಅವರು ಈ ಹಿಂದೆ ದಾಸ ಪುರಂದರ ಸೀರಿಯಲ್ ನಲ್ಲಿ ನಟಿಸಿದ್ದರು ಆದರೆ ಅವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿರುವುದು ಮಾತ್ರ ಬೃಂದಾವನ ಸೀರಿಯಲ್ ನ ಪುಷ್ಪ ಪಾತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಸೀರಿಯಲ್ ಮೊದಲು ಹಳ್ಳಿಯ ಮುಗ್ಧ ಹುಡುಗಿಯಾಗಿ ಕಂಡಿದ್ದ ಅಮೂಲ್ಯ (Amulya Bharadwaj) ಅವರು ಅನಂತರ ಶ್ರೀಮಂತರ ಮನೆಯ ಸೊಸೆಯಾಗಿ ಅಲ್ಲಿ ಸದಾ ಸೀರೆಯುಟ್ಟ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಆಧುನಿಕ ಉಡುಪುಗಳನ್ನು ಧರಿಸಿ ತಮ್ಮ ಮತ್ತೊಂದು ಲುಕ್ ನಲ್ಲಿ ಸಹಾ ಮಿಂಚ್ತಾ ಇರ್ತಾರೆ. ಅದನ್ನ ನೋಡಿದಾಗ ನೆಟ್ಟಿಗರು ಸಹಾ ಶಾಕ್ ಆಗಿ ಕಾಮೆಂಟ್ ಗಳನ್ನ ಮಾಡ್ತಾರೆ.

ಹೀಗೆ ಸೀರಿಯಲ್ ಮೂಲಕ ಅನೇಕರ ಮನಸ್ಸನ್ನು ಗೆದ್ದಿರುವ ಅಮೂಲ್ಯ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಸಹಾ ಸಾಕಷ್ಟು ಮಂದಿ ಹಿಂಬಾಲಿಸುತ್ತಾರೆ. ಆದ್ದರಿಂದಲೇ ನಟಿ ಶೇರ್ ಮಾಡುವ ಪೋಸ್ಟ್ ಗಳು ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತದೆ. ಇತ್ತೀಚಿಗೆ ಅಮೂಲ್ಯ ಅವರಿಗೆ ರಿಯಲ್ ಲೈಪ್ ನಲ್ಲಿ ಬ್ರೇಕಪ್ ಆಗಿದೆ ಅಂತ ಸುದ್ದಿ ಹರಿದಾಡಿತ್ತು. ಅಲ್ಲದೇ ನಟಿ ಶೇರ್ ಮಾಡಿಕೊಂಡ ಒಂದು ಪೋಸ್ಟ್ ನೋಡಿ ಅನೇಕರಿಗೆ ಹೊಸ ಅನುಮಾನ ಮೂಡಿದೆ. ನಟಿಗೆ ಬ್ರೇಕಪ್ ಆಗಿದ್ಯಾ? ಅಂತ ಪ್ರಶ್ನೆ ಮಾಡಿದ್ದಾರೆ.

ಹೌದು, ಅಮೂಲ್ಯ ಅವರು ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು, ಅದರಲ್ಲಿ ಯಾರಿದ್ದರೂ ಇಲ್ಲದಿದ್ದರೂ ನಮ್ಮ ಜೀವನ ನಡೆಯುತ್ತದೆ, ಎಂದು ಕ್ಯಾಪ್ಚನ್‌ ಹಾಕಿಕೊಂಡಿದ್ರು.. ಅಲ್ದೇ ಆ ಪೋಸ್ಟ್‌ ಗೆ ಕಾಮೆಂಟ್‌ ಸೆಕ್ಷನ್‌ ಕೂಡಾ ಆಫ್‌ ಮಾಡ್ಕೊಂಡಿದ್ದಾರೆ. ಇದನ್ನ ನೋಡಿದ ಮೇಲೆ ಹೊಸ ಚರ್ಚೆಗಳು ಹುಟ್ಟುಕೊಂಡಿದೆ. ಅಮೂಲ್ಯ ಅವರಿಗೆ ಬ್ರೇಕಪ್ ಆಗಿರೋದು ನಿಜಾನಾ? ಅಂತಿದ್ದಾರೆ ನೆಟ್ಟಿಗರು.

Soma Shekar

Recent Posts

Kasturi Shankar: ಐಶ್ವರ್ಯ ಅಂದ ಹಾಳಾಗಿದ್ದೇ ಅದರಿಂದ, ಕಾಲ ಯಾರನ್ನೂ ಬಿಡಲ್ಲ, ಕಸ್ತೂರಿ ಶಂಕರ್ ಶಾಕಿಂಗ್ ಹೇಳಿಕೆ

Kasturi Shankar: ಗ್ಲೋಬಲ್ ಸ್ಟಾರ್, ಮಾಜಿ ಮಿಸ್ ವರ್ಲ್ಡ್ ಮತ್ತು ಬಾಲಿವುಡ್ ನ ಒಂದು ಕಾಲದ ನಂಬರ್ ಒನ್ ನಟಿ…

2 hours ago

Hema Rave Party: ಬೆಂಗಳೂರು ರೇವ್ ಪಾರ್ಟಿ, ತೆಲುಗು ನಟಿ ಹೇಮಾ ಸಂಚಲನ ಹೇಳಿಕೆ; ನೆಟ್ಟಿಗರಿಂದ ಟೀಕೆ

Hema Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿನ (Bengaluru Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ…

4 hours ago

Actress Sithara: ಅವರ ನೆನಪೇ ಕಾಡುತ್ತದೆ; ವಯಸ್ಸು 50 ಆದ್ರು ನಟಿ ಸಿತಾರ ಒಂಟಿ, ಮದುವೆ ಆಲೋಚನೆ ಯಾಕಿಲ್ಲ?

Actress Sithara: ದಕ್ಷಿಣ ಸಿನಿಮಾ ರಂಗದಲ್ಲಿ ಪ್ರಸ್ತುತ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಸಿತಾರಾ (Actress Sithara)…

8 hours ago

Lakshmi Nivasa: ಜಾನುಗಾಗಿ ಜಯಂತ್ ಮನೆಗೆ ಬಂದ ಅಪ್ಪ ಅಮ್ಮ; ಮತ್ತೆ ಯಾವ ಹೊಸ ಪ್ಲಾನ್ ಮಾಡ್ತಾನೇ ಜಯಂತ್

Lakshmi Nivasa Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ಇತ್ತೀಚಿನ ದಿನಗಳಲ್ಲಿ ಜಯಂತ್…

10 hours ago

Tirupati: ತಿರುಮಲಕ್ಕೆ ಹರಿದು ಬರ್ತಿದೆ ಭಕ್ತ ಸಾಗರ: ತಿರುಪತಿಗೆ ಹೋಗೋ ಪ್ಲಾನ್ ಇದ್ರೆ ಮೊದಲು ಈ ಸುದ್ದಿ ನೋಡಿ

Tirupati: ಬೇಸಿಗೆ ರಜೆ ಇನ್ನೇನು ಮುಗಿಯುವ ಹೊತ್ತಲ್ಲೇ ತಿರುಪತಿ (Tirupati) ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ತೆಲುಗು…

11 hours ago

Rave Party: ಬೆಂಗಳೂರಿನಲ್ಲಿ ರೇವ್ ಪಾರ್ಟಿ, ಸಿಕ್ಕಿ ಬಿದ್ದ ಟಾಲಿವುಡ್ ನ ಸಿನಿ, ಸೀರಿಯಲ್ ನಟಿಯರು

Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದಂತಹ ರೇವ್ ಪಾರ್ಟಿಯ…

12 hours ago

This website uses cookies.