Arun Yogiraj : ಇಂದು ರಾಮನವಮಿಯನ್ನು (Rama Navami) ದೇಶದಾದ್ಯಂತ ಜನರು ತಮ್ಮದೇ ಪ್ರಾದೇಶಿಕ ಸಂಪ್ರದಾಯ ಗಳಲ್ಲಿ ಆಚರಿಸಿ ಶ್ರೀರಾಮನ ಆರಾಧನೆಯನ್ನು ಭಕ್ತಿಯಿಂದ ಮಾಡುತ್ತಿದ್ದಾರೆ. ಇದೇ ವೇಳೆ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ayodhya Sri Ram Mandir) ಸೂರ್ಯ ತಿಲಕ ಕೂಡಾ ನಡೆದಿದ್ದು ಅಸಂಖ್ಯಾತ ಭಕ್ತವೃಂದ ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡು ರಾಮ ನಾಮವನ್ನು ಜಪಿಸಿದ್ದಾರೆ.
ಇಂದು ರಾಮನವಮಿಯ ಪರ್ವದಿನದಂದು ಕಿರುತೆರೆಯ ಜನಪ್ರಿಯ ಅಡುಗೆ ಕಾರ್ಯಕ್ರವಾದ ಬೊಂಬಾಟ್ ಭೋಜನದ (Bombat Bhojana) ರೂವಾರಿಯಾಗಿರುವ ಕನ್ನಡದ ಹಿರಿಯ ಹಾಸ್ಯ ನಟ, ಪೋಷಕ ಕಲಾವಿದರಾದ ಸಿಹಿ ಕಹಿ ಚಂದ್ರು (Sihi Kahi Chandru) ಅವರು ಬಾಲರಾಮನ ಮೂರ್ತಿಯ ಸೃಷ್ಟಿಕರ್ತನಾದ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡಿದ್ದಾರೆ.
ಬೊಂಬಾಟ್ ಭೋಜನದ ಮನೆ ಊಟ ವಿಭಾಗದ ರಾಮನವಮಿ ವಿಶೇಷ ಎನ್ನುವಂತೆ ಸಿಹಿ ಕಹಿ ಚಂದ್ರ ಅವರು ಅರುಣ್ ಯೋಗಿರಾಜ್ (Arun Yogiraj) ಅವರ ಮನೆಗೆ ಭೇಟಿ ನೀಡಿ, ಯೋಗಿರಾಜ್ ಅವರ ಇಡೀ ಕುಟುಂಬವನ್ನು ಭೇಟಿ ಮಾಡಿ ರಾಮನವಮಿ ಹಬ್ಬವನ್ನು ಬಹಳ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಒಂದಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಅರುಣ್ ಯೋಗಿರಾಜ್ ಅವರ ಮನೆಯ ಊಟವನ್ನು ಸವಿಯುವ ಮುನ್ನ ಚಂದ್ರು ಅವರು ಯೋಗಿರಾಜ್ ಅವರು ಉತ್ತರ ಪ್ರದೇಶದಲ್ಲಿದ್ದು ಬಾಲರಾಮನ ಮೂರ್ತಿ ಕೆತ್ತನೆ ಮಾಡುವ ವೇಳೆ ಅವರ ಅನುಭವ ಹಾಗೂ ಅನುಭೂತಿ ಹೇಗಿತ್ತು ಎನ್ನುವ ಒಂದಷ್ಟು ಬಹಳ ಆಸಕ್ತಿಕರ ವಿಚಾರಗಳನ್ನು ಮಾತನಾಡಿದ್ದು ವಿಶೇಷವಾಗಿತ್ತು.
ಅರುಣ್ ಯೋಗಿರಾಜ್ ಅವರು ತಮಗಾದ ಅನುಭವಗಳನ್ನು ಹಂಚಿಕೊಂಡು ಅದೆಲ್ಲವೂ ಕೂಡಾ ದೈವ ನಿರ್ಣಯ ಎಂದು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅರುಣ್ ಯೋಗಿರಾಜ್ ಅವರು ಸಿಹಿ ಕಹಿ ಚಂದ್ರು ಅವರು ತಮ್ಮ ಮನೆಗೆ ಭೇಟಿ ನೀಡಿದ್ದರಿಂದ ಬಹಳ ಖುಷಿಯಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಚಂದ್ರು ಅವರು ಸಹಾ ತಮ್ಮ ತಂಡದ ಕಡೆಯಿಂದ ಅರುಣ್ ಅವರನ್ನು ಸತ್ಕರಿಸಿದ್ದಾರೆ.