Bollywood Actor: ಸಾಯಿ ಪಲ್ಲವಿ ಲುಕ್ ಬಗ್ಗೆ ಆಘಾತಕಾರಿ ಮಾತನ್ನಾಡಿದ ಬಾಲಿವುಡ್ ನಟ

Written by Soma Shekar

Published on:

---Join Our Channel---

Bollywood Actor: ಬಾಲಿವುಡ್ ನಲ್ಲಿ ರಣಬೀರ್ ಕಪೂರ್ (Ranbir Kapoor) ಮತ್ತು ಸಾಯಿ ಪಲ್ಲವಿ (Sai Pallavi) ಕಾಂಬಿನೇಷನ್ ನಲ್ಲಿ ರಾಮಾಯಣ (Ramayana) ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ವಿಚಾರವು ಈಗಾಗಲೇ ಸಾಕಷ್ಟು ಸಲ ಸುದ್ದಿಗಳಾಗಿದೆ. ಸಿನಿಮಾ ಚಿತ್ರೀಕರಣದ ಒಂದಷ್ಟು ಫೋಟೋಗಳು ಸಹಾ ಲೀಕ್ ಆಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾದ ಕುರಿತ ಹೊಸ ಅಪ್ಡೇಟ್ ಹೊರಗೆ ಬಂದಿಲ್ಲ. ಇವೆಲ್ಲವುಗಳ ನಡುವೆ ಹಿರಿಯ ನಟ ಒಬ್ಬರು ಸಾಯಿ ಪಲ್ಲವಿ ಬಗ್ಗೆ ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಕಿರುತೆರೆಯಲ್ಲಿ ದಶಕಗಳ ಹಿಂದೆ ರಾಮಾಯಣ ಸೀರಿಯಲ್ ಜನರ ಮೇಲೆ ದೊಡ್ಡ ಮೋಡಿ ಮಾಡಿತ್ತು, ಅದರಲ್ಲಿ ಪಾತ್ರಗಳನ್ನು ಮಾಡಿದ ಕಲಾವಿದರನ್ನು ಜನರು ಇಂದಿಗೂ ಗೌರವ ಮತ್ತು ಪೂಜನೀಯ ಭಾವದಿಂದ ನೋಡುತ್ತಾರೆ. ರಾಮಾಯಣ ಸೀರಿಯಲ್ ನಲ್ಲಿ ಲಕ್ಷ್ಮಣನ ಪಾತ್ರ ಮಾಡಿದ್ದ ನಟ ಸುನೀಲ್ ಲಾಹಿರಿ ಈಗ ರಾಮಾಯಣ ಸಿನಿಮಾ ಸ್ಟಾರ್ ಗಳ ಕುರಿತಾಗಿ ತಮ್ಮ‌ ಅನಿಸಿಕೆ ಶೇರ್ ಮಾಡಿಕೊಂಡಿದ್ದಾರೆ.

ಅನಿಮಲ್ ಸಿನಿಮಾವನ್ನು ನೋಡಿದ ಮೇಲೆ ರಣಬೀರ್ ಕಪೂರ್ ಅವರನ್ನು ರಾಮನ ರೂಪದಲ್ಲಿ ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ ಎಂದಿದ್ದಾರೆ. ಇನ್ನು ನಟಿ ಸಾಯಿ ಪಲ್ಲವಿ ಅವರು ನಟಿಯಾಗಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ, ನಾನು ಅವರ ಸಿನಿಮಾಗಳನ್ನು ನೋಡಿಲ್ಲ. ಆದರೆ ಅವರು ಸೀತೆಯ ಹಾಗೆ ಕಾಣುವುದಿಲ್ಲ ಎಂದಿದ್ದಾರೆ.

ನಟಿಯ ನೋಟದಲ್ಲಿ ದೇವಿಯ ಯಾವುದೇ ಗುಣಗಳು ಕಾಣುವುದಿಲ್ಲ. ಇನ್ನು ರಣಬೀರ್ ಅವರನ್ನು ರಾಮನಾಗಿ ಕಲ್ಪಿಸಿಕೊಳ್ಳುವುದು ಸಹಾ ಕಷ್ಟ ಎಂದು ಹೇಳಿದ್ದಾರೆ. ಹಿರಿಯ ನಟನ ಮಾತುಗಳೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಕೇಳಿ ನೆಟ್ಟಿಗರು ಸಹಾ ಪರ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Leave a Comment