Shwetha Varma: ನಿಮ್ಮ ಅದು ಚೆನ್ನಾಗಿದೆ ಅಂತ ಕೆಟ್ಟ ಕಾಮೆಂಟ್ ಮಾಡಿದವನಿಗೆ ಗ್ರಹಚಾರ ಬಿಡಿಸಿದ ನಟಿ

Written by Soma Shekar

Published on:

---Join Our Channel---

Shwetha Varma: ತೆಲುಗಿನ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಶ್ವೇತಾ ವರ್ಮಾ (Shwetha Varma) ಹಲವು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಬಿಗ್ ಬಾಸ್ (Bigg Boss Telugu) ಮನೆಯಲ್ಲಿ ಕೆಲವು ದಿನಗಳ ಕಾಲ ಇದ್ದ ಈ ನಟಿ ದೊಡ್ಡ ಕ್ರೇಜ್ ಅನ್ನು ಸಂಪಾದಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ನಟಿ ಒಂದಷ್ಟು ಸಿನಿಮಾಗಳಲ್ಲಿ ನಟಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಶ್ವೇತಾ ವರ್ಮಾ ಸೋಶಿಯಲ್ ಮೀಡಿಯಾಗಳಲ್ಲೂ ಸಹಾ ಸಾಕಷ್ಟು ಸಕ್ರಿಯರಾಗಿದ್ದಾರೆ.

ಇತ್ತೀಚಿಗೆ ನಟಿಯ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಅವರ ಅಭಿಮಾನಿಗಳು ಶುಭಾಶಯವನ್ನು ಕೋರಿದ್ದಾರೆ. ಇದೇ ವೇಳೆ ಜನ್ಮದಿನದಂದೇ ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಾ, ಶುಭ ಹಾರೈಸಿದ್ದು ಮಾತ್ರವೇ ಅಲ್ಲದೇ ನಿಮ್ಮ ಬೂಬ್ಸ್ (ಸ್ತನಗಳು) ಸೂಪರ್ ಆಗಿದೆ ಎಂದು ಕೆಟ್ಟದಾಗಿ ಹೇಳಿದ್ದಾರೆ.
ಈ ಕಾಮೆಂಟ್ ನಟಿಯ ಗಮನಕ್ಕೆ ಬಂದಿದೆ ಹಾಗೂ ನಟಿ ಅದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ತನ್ನ ಕುರಿತಾಗಿ ಕಾಮೆಂಟ್ ಮಾಡಿದ ವ್ಯಕ್ತಿಗೆ ತಿರುಗೇಟನ್ನ ನೀಡುತ್ತಾ, ನಿಮ್ಮ ತಾಯಿಗೂ ಅದನ್ನೇ ಕೇಳುತ್ತೀರಾ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಅಲ್ಲದೇ ಅಂಥವರನ್ನು ಕಂಡಾಗ ನನಗೆ ನಾಚಿಕೆಯಾಗುತ್ತದೆ ಎಂದು ನಟಿ ಹೇಳಿದ್ದಾರೆ. ಅಲ್ಲದೇ ಕಾಮೆಂಟ್ ಮಾಡಿದವನದ್ದು ಅಸಲಿ ಖಾತೆಯೋ ಅಥವಾ ನಕಲಿ ಖಾತೆಯೋ ಅನ್ನೋದನ್ನ ತಿಳ್ಕೋಳ್ಳೋದಕ್ಕೆ ಹೆಚ್ಚು ಸಮಯ ಬೇಕಿಲ್ಲ.

ಆದರೆ ನಾನು ಹಾಗೆ ಮಾಡೋದಕ್ಕೆ ಇಷ್ಟ ಪಡೋದಿಲ್ಲ ಎನ್ನುವ ಮಾತನ್ನು ನಟಿ ಹೇಳಿದ್ದಾರೆ. ನಾನು ಬೇಕಾದ್ರೆ ಅವನ ವಿಳಾಸವನ್ನು ಸಹಾ ಪೋಸ್ಟ್ ಮಾಡಬಹುದು, ಆದರೆ ನಾನು ಅದನ್ನ ಮಾಡ್ತಾ ಇಲ್ಲ. ಅವನು ಪಾಠ ಕಲಿತು ಬದಲಾದ್ರೆ ಒಳ್ಳೇದು. ಆತನ ವಿರುದ್ಧ ನಾನು ಯಾವುದೇ ಕ್ರಮ ತಗೊಳ್ಳೋದಿಲ್ಲ ಅನ್ನೋ ಮಾತನ್ನ ಶ್ವೇತಾ ಹೇಳಿದ್ದಾರೆ.

Leave a Comment