Rakshak Bullet: ಕನ್ನಡ ಬಿಗ್ ಬಾಸ್ ಸೀಸನ್ 10 ರ (Bigg Boss Kannada Season 10) ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ ಕನ್ನಡ ಸಿನಿಮಾ ರಂಗದ ಹಿರಿಯ ನಟ, ದಿವಂಗತ ಬುಲೆಟ್ ಪ್ರಕಾಶ್ (Bullet Prakash) ಅವರು ಪುತ್ರ ರಕ್ಷಕ್ ಬುಲೆಟ್ ಅವರು. ಪ್ರಸ್ತುತ ರಕ್ಷಕ್ ಬುಲೆಟ್ (Rakshak Bullet) ಅವರು ತಮ್ಮ ಹೊಸ ಸಿನಿಮಾದ ಕುರಿತಾಗಿ ಮತ್ತು ಸ್ಯಾಂಡಲ್ವುಡ್ ನಲ್ಲಿ ನಾಯಕ ನಟನಾಗಿ ಎಂಟ್ರಿ ನೀಡಲು ಉತ್ಸುಕರಾಗಿದ್ದು, ಅದರ ವಿಚಾರವಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ರಕ್ಷಕ್ ಗುರು ಶಿಷ್ಯರು ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಪರಿಚಯ ಆಗಿದ್ದಾರೆ.
ಈಗ ನಾಯಕ ನಟನಾಗಿ ಹೊಸ ಜರ್ನಿ ಆರಂಭಿಸುವ ದಿಕ್ಕಿನಲ್ಲಿ ಅವರ ತಯಾರಿ ನಡೆಯುತ್ತಿದೆ. ಇವೆಲ್ಲವುಗಳ ನಡುವೆ ಈಗ ರಕ್ಷಕ್ ತಮ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನ ನೀಡಿದ್ದಾರೆ. ಈ ಬಾರಿ ತಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಎನ್ನುವ ವಿಚಾರವನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ರಕ್ಷಕ್ ಅವರ ಪೋಸ್ಟ್ ನಲ್ಲಿ ಏನಿದೆ ತಿಳಿಯೋಣ ಬನ್ನಿ.
ಎಲ್ಲರಿಗೂ ನಮಸ್ಕಾರ ಹಾಗೂ ‘ಫಾದರ್ಸ್ ಡೇ’ ನ ಶುಭಾಶಯಗಳು, ಇವತ್ತು ಬೆಳಗ್ಗೆಯಿಂದ ನನ್ನ ತಂದೆಯ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಎಲ್ಲರಂತೆ ನನಗೂ ಕೂಡ ನನ್ನ ತಂದೆಯೇ ಮೊದಲ ಹೀರೋ. ಹೀರೋ ಅಷ್ಟೇ ಅಲ್ಲ ಒಳ್ಳೆಯ ಮಾರ್ಗದರ್ಶಕರು ಹಾಗೂ ಸ್ನೇಹಿತರು ಕೂಡ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ.
ನಮ್ಮ ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಮುಂದಿನ ವರ್ಷದ ಹುಟ್ಟು ಹಬ್ಬದಷ್ಟರಲ್ಲಿ ಏನಾದರೂ ಒಂದು ಸಾಧನೆ ಮಾಡಿರುತ್ತೇನೆ, ಆಗ ನನ್ನ ಎಲ್ಲ ಸ್ನೇಹಿತರು, ಹಿತೈಷಿಗಳು, ಗುರು-ಹಿರಿಯರು ಹಾಗೂ ಪ್ರೀತಿ ಪಾತ್ರರೊಂದಿಗೆ ಆಚರಣೆ ಮಾಡುತ್ತೇನೆ.
ಹೀಗೆ ನಿಮ್ಮ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದ ನನ್ನ ಮೇಲಿರಲಿ ನನ್ನನ್ನು ಬೆಂಬಲಿಸುತ್ತಿರುವ ಎಲ್ಲ ನನ್ನ ಸ್ನೇಹಿತರು, ಪ್ರೀತಿ ಪಾತ್ರರು, ಮಾದ್ಯಮ ಮಿತ್ರರು, ಟ್ರೋಲ್ ಪೇಜ್‌ಗಳು, ಯೂಟ್ಯೂಬರ್ಸ್ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ಧನ್ಯವಾದಗಳು. ಇಂತಿ ನಿಮ್ಮ ಪ್ರೀತಿಯ ರಕ್ಷಕ್ ಬುಲೆಟ್ ಎಂದು ಬರೆದುಕೊಂಡು ಇದನ್ನ ನೋಡಿ ಅವರ ಅಭಿಮಾನಿಗಳು ಶಾ ಕ್ ಆಗಿದ್ದಾರೆ.