Rakshit Shetty: ಯಶವಂತಪುರ ಠಾಣೆಯಲ್ಲಿ ದಾಖಲಾಯ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು; ಸಿಂಪಲ್ ಸ್ಟಾರ್ ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Rakshit Shetty: ಸ್ಯಾಂಡಲ್ವುಡ್ ನ ಜನಪ್ರಿಯ ನಟ, ಸಿಂಪಲ್ ಸ್ಟಾರ್ ಖ್ಯಾತಿಯ ನಟ ಹಾಗೂ ನಿರ್ದೇಶಕ ಸಹಾ ಆಗಿರುವಂತಹ ರಕ್ಷಿತ್‌ ಶೆಟ್ಟಿ (Rakshit Shetty) ಅವರ ವಿರುದ್ಧ ಕಾಪಿರೈಟ್‌ ಉಲ್ಲಂಘನೆ ಆರೋಪವೊಂದು ಕೇಳಿ ಬಂದಿದೆ. ಈ ವಿಚಾರವಾಗಿ ನಟನ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ರಕ್ಷಿತ್‌ ಶೆಟ್ಟಿಯವರು ಪರಂವಃ ಸ್ಟುಡಿಯೋ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.

ತಮ್ಮ ಈ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸಿದ ಸಿನಿಮಾದಲ್ಲಿ ಎರಡು ಹಳೆಯ ಸಿನಿಮಾಗಳ ಹಾಡುಗಳನ್ನ ಅನುಮತಿ ಪಡೆಯದೇ ಬಳಸಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮಾಡಲಾಗಿದೆ. ಬ್ಯಾಚುಲರ್ ಪಾರ್ಟಿ (Bachelor Party) ಸಿನಿಮಾ ಥಿಯೇಟರ್ ಗಳಲ್ಲಿ ಅಷ್ಟೊಂದು ಸದ್ದು ಮಾಡಿರಲಿಲ್ಲ. ಈಗ ಓಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಗಾಳಿಮಾತು ಮತ್ತು ನ್ಯಾಯ ಎಲ್ಲಿದೆ ಸಿನಿಮಾಗಳ ಹಾಡುಗಳಾದ, ನ್ಯಾಯ ಎಲ್ಲಿದೆ ಮತ್ತು ಒಮ್ಮೆ ನಿನ್ನನ್ನು ಕಣ್ತುಂಬಾ ನೋಡುವ ಆಸೆ ಹಾಡುಗಳನ್ನು ಅನುಮತಿ ಪಡೆಯದೇ ಬಳಸಿಕೊಂಡಿದ್ದಾರೆ ಎಂದು ಎಂಆರ್‌ಟಿ ಮ್ಯೂಸಿಕ್‌ ನ ನವೀನ್ ಕುಮಾರ್ ಅವರು ರಕ್ಷಿತ್ ಶೆಟ್ಟಿ ಅವರ ವಿರುದ್ಧ ದೂರನ್ನ ದಾಖಲಿಸಿದ್ದಾರೆ.

ಈ ಹಿಂದೆ ಕಿರಿಕ್ ಪಾರ್ಟಿ (Kirik Party) ಸಿನಿಮಾದ ವೇಳೆಯಲ್ಲೂ ಸಹಾ ಇಂತದ್ದೇ ಸಮಸ್ಯೆ ಎದುರಾಗಿತ್ತು. ಆ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನು ಅನುಮತಿಯಿಲ್ಲದೇ ಬಳಸಿಕೊಂಡಿದ್ದಾರೆಂದು ಸಮಸ್ಯೆ ಎದುರಾಗಿತ್ತು. ಆಗ ಆ ವಿಚಾರವನ್ನು ರಾಜಿ ಸಂಧಾನದ ಮೂಲಕ ಈ ವಿಚಾರಕ್ಕೆ ಪರಿಹಾರವನ್ನು ಕಂಡುಕೊಂಡಿದ್ದರು.

Leave a Comment