Ranveer Singh: ಕಾಂಗ್ರೆಸ್ ಪರ ರಣ್ವೀರ್ ಸಿಂಗ್ ಪ್ರಚಾರ? ದಾಖಲಾಯ್ತು ದೂರು, ಶಾಕ್ ನಲ್ಲಿ ಫ್ಯಾನ್ಸ್

Written by Soma Shekar

Published on:

---Join Our Channel---

Ranveer Singh :ಬಾಲಿವುಡ್ ನ ಹಿರಿಯ ಸ್ಟಾರ್ ನಟ, ಮಿಸ್ಟರ್ ಫರ್ಫೆಕ್ಟ್ ಖ್ಯಾತಿಯ ನಂತರ ಅಮೀರ್ ಖಾನ್ (Aamir Khan) ಅವರು ರಾಜಕೀಯ ಪಕ್ಷ ಒಂದನ್ನು ಬೆಂಬಲಿಸುತ್ತಾ, ಅದರ ಪ್ರಚಾರದಲ್ಲಿ ತೊಡಗಿಕೊಂಡಿರುವಂತಹ ದೃಶ್ಯವನ್ನು ತೋರಿಸುವ ಒಂದು ವೀಡಿಯೋ (Aamir Khan promoting a political party viral) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಅನೇಕರಿಗೆ ಅಚ್ಚರಿಯನ್ನು ಮೂಡಿಸಿತ್ತು.

ಈಗ ಅದರ ಬೆನ್ನಲ್ಲೇ ಬಾಲಿವುಡ್ ನ ಯುವ ಸ್ಟಾರ್ ನಟ ರಣ್ವೀರ್ ಸಿಂಗ್ (Ranveer Singh)​ ಅವರು ಒಂದು ವೀಡಿಯೋ ಸಹಾ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ರಣ್ವೀರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಅವರ ಆಡಳಿತವನ್ನು ಟೀಕೆ ಮಾಡುತ್ತಿರುವುದು ಕಂಡಿದೆ. ಆದರೆ ಅಸಲಿಯತ್ತು ಏನೆಂದರೆ ಅಮೀರ್ ಖಾನ್ ಮತ್ತು ರಣ್ವೀರ್ ಸಿಂಗ್ ಇಬ್ಬರ ವಿಚಾರದಲ್ಲೂ ವೀಡಿಯೋವನ್ನು ತಿರುಚಲಾಗಿದೆ..

ಈಗ ಈ ವೀಡಿಯೋ ವಿಚಾರವಾಗಿ ರಣ್ವೀರ್ ಸಿಂಗ್‌ ಅವರು ತಮ್ಮ ಇಂತದೊಂದು ಡೀಪ್ ಫೇಕ್ ವೀಡಿಯೋ ಮಾಡಿದವರ ವಿರುದ್ಧ ದೂರನ್ನ ದಾಖಲು ಮಾಡಿದ್ದಾರೆ. ವೈರಲ್ ಆಗಿರೋ ಡೀಪ್ ಫೇಕ್ ವೀಡಿಯೋದಲ್ಲಿ ರಣ್ವೀರ್ ಸಿಂಗ್ ನಿರುದ್ಯೋಗ ಮತ್ತು ಹಣದುಬ್ಬರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವಂತೆ ತೋರಿಸಲಾಗಿದೆ. ಅಷ್ಟೇ ಅಲ್ಲದೇ ವೀಡಿಯೋ ಕೊನೆಯಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಹೇಳಿದ್ದಾರೆ ರಣ್ವೀರ್ ಸಿಂಗ್.

ಈ ಹಿಂದೆ ರಣ್ವೀರ್ ಸಿಂಗ್ ಅವರು ಕಾಶಿ ಗೆ ಹೋದ ಸಂದರ್ಭದಲ್ಲಿ ನೀಡಿದ್ದ ಸಂದರ್ಶನದ ವೀಡಿಯೋವನ್ನು ತಿರುಚಿ, ಅದಕ್ಕೆ ಎಐ ವಾಯ್ಸ್ ಬಳಸಿ ಹೀಗೆ ನಕಲಿ ವೀಡಿಯೋವನ್ನು ಸೃಷ್ಟಿ ಮಾಡಲಾಗಿದೆ. ಈ ವೈರಲ್ ವೀಡಿಯೋ ವಿಚಾರ ನಟನ ಗಮನಕ್ಕೂ ಬಂದಿದ್ದು ಅವರು ಸೋಶಿಯಲ್ ಮೀಡಿಯಾ ಮೂಲಕ ಡೀಪ್ ಫೇಕ್ ವೀಡಿಯೋಗಳ ಬಗ್ಗೆ ಎಚ್ಚರವಾಗಿರಿ ಎಂದು ಎಲ್ಲರಿಗೂ ತಿಳಿಸಿದ್ದಾರೆ. ಈ ವೀಡಿಯೋ ವಿಚಾರವಾಗಿ ಎಫ್ ಐ ಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

Leave a Comment