Tollywood Heroins: ಟಾಲಿವುಡ್ ನಲ್ಲಿ ಹೊಸ ಬೆಡಗಿಯರ ಅಬ್ಬರ, ರಶ್ಮಿಕಾ, ಶ್ರೀಲೀಲಾ, ಮೃಣಾಲ್ ಬೇಡಿಕೆಗೆ ಕುತ್ತು

Written by Soma Shekar

Published on:

---Join Our Channel---

Tollywood Heroins: ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹೊಸ ಹೀರೋಯಿನ್ ಗಳ ಎಂಟ್ರಿ ಸಾಕಷ್ಟು ಆಗುತ್ತೆ. ಅದ್ರಲ್ಲೂ ಸ್ಟಾರ್ ಕಿಡ್ ಗಳಾದ್ರೆ ಎಂಟ್ರಿನೇ ದೊಡ್ಡ ಸಿನಿಮಾಗಳ ಮೂಲಕ ಆಗುತ್ತೆ. ಆದ್ರೆ ಎಂಟ್ರಿ ಕೊಟ್ಟವರೆಲ್ಲಾ ಸ್ಟಾರ್ ಹೀರೋಯಿನ್ ಗಳಾಗೋದಕ್ಕೆ ಖಂಡಿತ ಸಾಧ್ಯ ಇಲ್ಲ. ಟಾಲಿವುಡ್ (Tollywood Heroins) ವಿಚಾರಕ್ಕೆ ಬಂದ್ರೆ ಸದ್ಯಕ್ಕೆ ಅಲ್ಲಿ ಮುಖ್ಯವಾಗಿ ಕಾಣೋದು ಮೂರು ಹೆಸರುಗಳು. ರಶ್ಮಿಕಾ (Rashmika), ಶ್ರೀಲೀಲಾ ಮತ್ತು ಮೃಣಾಲ್ ಠಾಕೂರ್‌ (Mrunal Thakur). ಇನ್ನುಳಿದ ಹಾಗೆ ಇತ್ತೀಚಿಗೆ ಕೆಲವು ನಟಿಯರು ಸಕ್ಸಸ್ ಪಡ್ಕೊಳ್ತಾ ಸುದ್ದಿಯಾಗ್ತಾ ಇದ್ದಾರೆ.‌

ಅದರಲ್ಲಿ ಆಶಿಕಾ ರಂಗನಾಥ್ (Ashika Ranganath) ಒಬ್ಭರಾಗಿದ್ದು, ಈ ನಟಿ ನಾಗಾರ್ಜುನ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆಶಿಕಾ ರಂಗನಾಥ್ ಬ್ಯೂಟಿಗೆ ತೆಲುಗು ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಆಶಿಕಾ ಹೊಸ ಹೊಸ ಆಫರ್ ಗಳನ್ನು ಪಡೆದುಕೊಂಡು ಇನ್ನಷ್ಟು ಬ್ಯುಸಿಯಾಗುತ್ತಿದ್ದಾರೆ.

ಆಶಿಕಾ ರಂಗನಾಥ್ ನಂತರ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್ (Rukmini Vasanth) ಸಹಾ ಟಾಲಿವುಡ್ ನಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ತಮಿಳಿನಲ್ಲಿ ಶಿವಕಾರ್ತಿಕೇಯನ್ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿ ತಮಿಳು ಇಂಡಸ್ಟಿಗೆ ಅಡಿಯಿಟ್ಟಿದ್ದಾರೆ.

ಇವರಿಬ್ಬರ ಬೆನ್ನಲ್ಲೇ ಮಾಸ್ ಮಹಾರಾಜ್ ರವಿತೇಜ ಸಿನಿಮಾದಲ್ಲಿ ಭಾಗ್ಯಶ್ರೀ ಬೋರ್ಸೆ (Bhagyashree Borse) ನಾಯಕಿಯಾಗಿ ಎಂಟ್ರಿಯನ್ನು ಕೊಡ್ತಾ ಇದ್ದಾರೆ. ಈ ನಟಿಯ ಎಂಟ್ರಿ ಬೇರೆ ನಟಿಯರಿಗೆ ಭರ್ಜರಿ ಪೈಪೋಟಿ ಆಗಲಿದೆ ಎನ್ನುವ ಮಾತುಗಳು ಸಹಾ ಕೇಳಿ ಬರ್ತಿದೆ.

ತೆಲುಗಿನಲ್ಲಿ ಈ ನವ ನಟಿಯರ ಆಗಮನ ರಶ್ಮಿಕಾ, ಶ್ರೀಲೀಲಾ ಮತ್ತು ಮೃಣಾಲ್‌ ಚಾರ್ಮ್ ನ ಕಡಿಮೆ ಮಾಡಲಿದ್ಯಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಸ್ಟಾರ್ ಗಳ ಲಿಸ್ಟ್ ನಲ್ಲಿದ್ದ ಸಮಂತಾ, ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಎಲ್ಲಾ ಈಗ ಬೇಡಿಕೆ ಇಲ್ಲದೇ ಅಪರೂಪಕ್ಕೊಮ್ಮೆ ತೆಲುಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Comment