Anushka Shetty: ಪ್ರಭಾಸ್ ಪ್ರಪೋಸಲ್ ರಿಜೆಕ್ಟ್ ಮಾಡಿದ ಅನುಷ್ಕಾ; ತಡವಾಗಿ ಹೊರಬಿದ್ದ ಸತ್ಯ, ಸೂಪರ್ ಅಂದ ಫ್ಯಾನ್ಸ್

Written by Soma Shekar

Published on:

---Join Our Channel---

Anushka Shetty: ನಟ ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಾಹುಬಲಿ (Bahubali) ಸಿನಿಮಾದ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಪಡೆದುಕೊಂಡ ನಟನ ಜನಪ್ರಿಯತೆ ಸಹಾ ಹೆಚ್ಚಾಯ್ತು. ನಟನ ಸ್ಟಾರ್ ಡಂ ಮತ್ತು ಬೇಡಿಕೆ ದುಪ್ಪಟ್ಟಾಯಿತು. ತನ್ನ ಸ್ಟಾರ್ ಡಂ ತಕ್ಕ ಹಾಗೆ ಪ್ರಭಾಸ್ ಸಹಾ ಅದ್ದೂರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಆದರೂ ಬಾಹುಬಲಿ ನಂತರ ನಟನ ಯಾವುದೇ ಸಿನಿಮಾಗಳಿಗೂ ಸಹಾ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

ಸಿನಿಮಾಗಳು ನಿರೀಕ್ಷಿತ ಗೆಲುವನ್ನು ಪಡೆಯದೇ ಹೋಗಿದ್ದಾಗಲೇ ಕಳೆದ ವರ್ಷ ಸಲಾರ್ (Salaar) ಗೆಲುವು ನಟನಿಗೆ ಖುಷಿಯನ್ನು ನೀಡಿದೆ. ಪ್ರಸ್ತುತ ನಟ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅಭಿಮಾನಿಗಳು ನಟನ ಮುಂದಿನ ಸಿನಿಮಾ ಕಲ್ಕಿ 2898 AD ಯ ನಿರೀಕ್ಷೆಯಲ್ಲಿ ಇರುವಾಗಲೇ ಹೊಸದೊಂದು ಸುದ್ದಿ ಹೊರ ಬಂದು, ಸಿಕ್ಕಾಪಟ್ಟೆ ಶಾಕ್ ಅನ್ನು ನೀಡಿದೆ. ಅದು ಈ ವಿಚಾರ ನಟಿ ಅನುಷ್ಕಾ ಶೆಟ್ಟಿ (Anushka Shetty) ಕುರಿತಾಗಿ ಅನ್ನೋದು ಇನ್ನಷ್ಟು ರೋಚಕತೆಗೆ ಕಾರಣವಾಗಿದೆ.

ಈ ಹಿಂದೆ ನಟ ಆದಿಪುರುಷ್ (Adipurush) ಸಿನಿಮಾದಲ್ಲಿ ನಟಿಸಿದ್ದರು, ಆದಿಪುರುಷ್ ಸಿನಿಮಾದ ಮೊದಲ ಪ್ರೊಮೊ ಬಿಡುಗಡೆಯಿಂದಲೇ ಜನರ ಸಿಟ್ಟು ಮತ್ತು ಆಕ್ರೋಶವನ್ನು ಎದುರಿಸಿತ್ತು. ಸಿನಿಮಾ ಬಿಡುಗಡೆ ಆದ ಮೇಲಂತೂ ಕೆಲವು ಕಡೆಗಳಲ್ಲಿ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಜನರ ಇಂತಹುದೊಂದು ಪ್ರತಿಕ್ರಿಯೆಯ ಕಾರಣದಿಂದಾಗಿ ಆದಿಪುರುಷ್ ಸಿನಿಮಾ ಹೀನಾಯವಾಗಿ ಸೋಲನ್ನು ಕಂಡಿತ್ತು.

ಈಗ ಹೊರಗೆ ಬಂದಿರುವ ಹೊಸ ಸುದ್ದಿ ಏನೆಂದರೆ ಆದಿಪುರುಷ್ ಸಿನಿಮಾದಲ್ಲಿ ರಾಮನಾದ ಪ್ರಭಾಸ್ ಪಕ್ಕ ಸೀತೆಯ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು ಎನ್ನಲಾಗಿದ್ದು, ಚಿತ್ರದ ನಿರ್ದೇಶಕ ಓಂ ರಾವತ್ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದರು ಎನ್ನಲಾಗಿದೆ. ಅನಂತರ ನಟಿ ಅನುಷ್ಕಾ ಅವರನ್ನು ಸೀತೆಯ ಪಾತ್ರದ ವಿಚಾರವಾಗಿ ಸಂಪರ್ಕಿಸಿದಾಗ ನಟಿ ಆ ಆಫರ್ ಅನ್ನು ತಿರಸ್ಕರಿಸಿದ್ದರು ಎಂದು ತಿಳಿದು ಬಂದಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಅನುಷ್ಕಾ ಅವರ ನಿರ್ಧಾರ ಸರಿಯಾಗಿತ್ತು ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment