Kannada Serial: ಅಣ್ಣಯ್ಯ ಸೀರಿಯಲ್ ಆಗಮನ, ಹಾಗಾದ್ರೆ ಈಗ ಮಕ್ತಾಯ ಆಗೋ ಸೀರಿಯಲ್ ಯಾವುದು?

Written by Soma Shekar

Published on:

---Join Our Channel---

Kannada Serial: ಸೀರಿಯಲ್ ಗಳ ವಿಚಾರ ಬಂದರೆ ಜೀ ಕನ್ನಡ (Zee Kannada) ವಾಹಿನಿಯ ಬಹುತೇಕ ಧಾರಾವಾಹಿಗಳು ಟಿ ಆರ್ ಪಿ ಯಲ್ಲಿ ಬೇರೆ ವಾಹಿನಿಗಳ ಧಾರಾವಾಹಿಗಳಿಗಿಂತ ಮುಂದೆ ಇದೆ ಹಾಗೂ ಟಾಪ್ ಐದರಲ್ಲಿ ಯಾವಾಗಲೂ ಜೀ ಕನ್ನಡದ ಸೀರಿಯಲ್ ಗಳೇ ಇರುತ್ತವೆ. ಈ ವಾಹಿನಿಯಲ್ಲಿ ಹೊಸ ಸೀರಿಯಲ್ ಒಂದು ಬರ್ತಿದೆ ಅಂದ್ರೆ ಸಹಜವಾಗಿಯೇ ಪ್ರೇಕ್ಷಕರ ಗಮನ ಸೆಳೆದು, ಕುತೂಹಲವನ್ನು ಮೂಡಿಸುತ್ತದೆ.

ಈಗ ಹೊಸ ಸೀರಿಯಲ್ (Kannada Serial) ಅಣ್ಣಯ್ಯದ (Annayya Serial) ಪ್ರೊಮೋ ವನ್ನು ವಾಹಿನಿ ಶೇರ್ ಮಾಡಿದ್ದು, ಅದ್ದೂರಿಯಾದ ಪ್ರೊಮೋ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಆದರೆ ಇದೇ ವೇಳೆ ಇನ್ನೂ ಕೆಲವರಿಗೆ ಹೊಸ ಸೀರಿಯಲ್ ಬಂದರೆ ಯಾವ ಹಳೆಯ ಸೀರಿಯಲ್ ಮುಗಿಯಲಿದೆ ಎನ್ನುವಂತಹ ಅನುಮಾನ ಸಹಜವಾಗಿಯೇ ಮೂಡಿದೆ. ಹಾಗಾದ್ರೆ ಯಾವ ಸೀರಿಯಲ್ ಮುಗಿಯಲಿದೆ ಅನ್ನೋ ಪ್ರಶ್ನೆ ನಿಮಗೂ ಇದ್ಯಾ??

ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ಬರುವ ಮೊದಲ ಎಂಟು ಗಂಟೆಯಿಂದ ಒಂಬತ್ತು ಗಂಟೆಯ ಅವಧಿಯಲ್ಲಿ ಎರಡು ಸೀರಿಯಲ್ ಗಳು ಪ್ರಸಾರವಾಗುತ್ತಿದ್ದವು. ಆದರೆ ಲಕ್ಷ್ಮೀ ನಿವಾಸ ಬಂದ ಮೇಲೆ ಈ ಸೀರಿಯಲ್ ಪ್ರತಿದಿನ ಒಂದು ಗಂಟೆಯ ಅವಧಿಗೆ ಪ್ರಸಾರವಾಗುತ್ತಿದೆ. ಆದ ಕಾರಣ ಈಗ ಹೊಸ ಸೀರಿಯಲ್ ಗಾಗಿ ಯಾವುದೇ ಸೀರಿಯಲ್ ಮುಗಿಯುವ ಸೂಚನೆಗಳು ಖಂಡಿತ ಇಲ್ಲ.

ಏಕೆಂದರೆ ಹೊಸ ಸೀರಿಯಲ್ ಬಂದರೆ ಪ್ರೈಮ್ ಟೈಮ್ ನಲ್ಲಿ ಪ್ರಸಾರ ಖಚಿತ. ಆದ್ದರಿಂದಲೇ ಇನ್ನು ಬಹುಶಃ ಹೊಸ ಸೀರಿಯಲ್ ಬಂದರೆ ಲಕ್ಷ್ಮೀ ನಿವಾಸ ಸೀರಿಯಲ್ ಒಂದು ಗಂಟೆಯ ಬದಲಾಗಿ ಅರ್ಧ ಗಂಟೆ ಸಮಯ ಪ್ರಸಾರವಾಗಬಹುದು. ಇನ್ನುಳಿದ ಅರ್ಧಗಂಟೆಯ ಅವಧಿಯನ್ನು ಹೊಸ ಸೀರಿಯಲ್ ಗೆ ನೀಡಬಹುದು ಎನ್ನುವ ನಿರೀಕ್ಷೆಗಳಿವೆ.

Leave a Comment