Anasuya Bharadwaj: ತಾನು ಬಟ್ಟೆ ಬಿಚ್ಚಿ ಟ್ರೋಲ್ ಆಗಿ ನೆಟ್ಟಿಗರ ಮೇಲೆ ಆಕ್ರೋಶಗೊಂಡ ಆ್ಯಂಕರ್ ಅನಸೂಯ

Written by Soma Shekar

Published on:

---Join Our Channel---

Anasuya Bharadwaj: ತೆಲುಗಿನ ಜನಪ್ರಿಯ ನಟಿ ಮತ್ತು ನಿರೂಪಕಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನಸೂಯ ಭಾರದ್ವಾಜ್ (Anasuya Bharadwaj) ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ನ್ಯೂಸ್ ರೀಡೆರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದ ಅನುಸೂಯ, ಆ್ಯಂಕರ್ ಆಗಿ ದೊಡ್ಡ ಹೆಸರು ಪಡೆದರು. ಅನಂತರ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸ್ಟಾರ್ ನಟಿಯರಷ್ಟೇ ಜನಪ್ರಿಯತೆಯಿಂದ ಪಡೆದುಕೊಂಡರು. ತಮ್ಮ ಅಂದ ಹಾಗೂ ಬೋಲ್ಡ್ ನೆಸ್ ನಿಂದಾಗಿ ಮತ್ತು ದಿಟ್ಟ ಮಾತುಗಳಿಂದ ಸಾಕಷ್ಟು ಟ್ರೋಲ್ ಆಗುತ್ತಾರೆ ಅನಸೂಯಾ.

ಯಾರು ಎಷ್ಟೇ ಟ್ರೋಲ್ ಮಾಡಿದ್ರೂ ಅದರ ಬಗ್ಗೆ ನಟಿ ತಲೆಯನ್ನ ಕೆಡಿಸಿಕೊಳ್ಳೋದಿಲ್ಲ. ಅನಸೂಯ ಭಾರದ್ವಾಜ್ ಬಹಳಷ್ಟು ಸಂದರ್ಭದಲ್ಲಿ ಈ ನಟಿಯು ಟ್ರೋಲ್ ಆಗಿರುವುದು ಅವರ ಡ್ರೆಸ್ ವಿಚಾರವಾಗಿ ಆಗಿದೆ. ಇನ್ನು ಈಗ ಮೂರ್ನಾಲ್ಕು ದಿನಗಳಿಂದ ಅನಸೂಯ ಅವರು ಹೊಸ ಶೋ ಕಿರ್ರಾಕ್ ಬಾಯ್ಸ್, ಕಿಲಾಡಿ ಗರ್ಲ್ಸ್ (Kirak Boys, Killadi Girls) ಕುರಿತಾಗಿ ದೊಡ್ಡ ಚರ್ಚೆಯೊಂದು ನಡೆದಿದೆ.

ಈ ಕಾರ್ಯಕ್ರಮದ ಪ್ರೊಮೋ ಬಿಡುಗಡೆಯಾಗಿದ್ದು ಇದರಲ್ಲಿ ಅನಸೂಯ ಮತ್ತು ಶೇಖರ್ ಮಾಸ್ಟರ್ ಸವಾಲಿಗೆ ಇಳಿದಂತೆ ಕಂಡಿದೆ. ಅನಸೂಯ ತಾವು ಧರಿಸಿದ್ದ ಜಾಕೆಟ್ ಅನ್ನು ಎಲ್ಲರ ಮುಂದೆಯೇ ತೆಗೆದಿದ್ದು, ಅದನ್ನ ಸವಾಲಾಗಿ ಸ್ವೀಕರಿಸಿದ ಶೇಖರ್ ಮಾಸ್ಟರ್ (Shekhar Master) ತಮ್ಮ ಶರ್ಟ್ ಅನ್ನು ಬಿಚ್ಚುತ್ತಾರೆ. ಪ್ರೊಮೊ ವೈರಲ್ ಅದ ನಂತರ ಈ ದೃಶ್ಯವನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಪ್ರೊಮೊ ನೋಡಿದ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಮತ್ತೊಮ್ಮೆ ಅನುಸೂಯ ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದು, ಅನಸೂಯ ಅದಕ್ಕೆ ತಲೆಕೆಡಿಸಿಕೊಳ್ಳದೇ ಹರಿದು ಬರುತ್ತಿರುವ ಕಾಮೆಂಟ್ ಗಳಿಗೆ ತಮ್ಮದೇ ಆದ ಸ್ಟೈಲ್ ನಲ್ಲಿ ಉತ್ತರಗಳನ್ನು ನೀಡುವ ಮೂಲಕ ಈಗ ಸುದ್ದಿಯಾಗಿದ್ದಾರೆ.

ಶೋನ ಪ್ರೊಮೊ ವನ್ನು ಶೇರ್ ಮಾಡಿಕೊಂಡಿರುವ ಎಕ್ಸ್ ಬಳಕೆದಾರರೊಬ್ಬರು ಇದು ಯಾವ ರೀತಿಯ ನಾನ್ ಸೆನ್ಸ್, ಅನಸೂಯಾ ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಅನುಸೂಯ ನೀವು ಹಾಕಿರುವ ಇಮೋಜಿಗಳನ್ನು ನೋಡಿದರೆ ನಿಮ್ಮ ಮೈಂಡ್ ಸೆಟ್ ಅರ್ಥ ಆಗುತ್ತದೆ. ನೀವು ಯಾಕೆ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೀರೆಂದು ತಿರುಗೇಟು ನೀಡಿದ್ದಾರೆ.

ಮತ್ತೊಬ್ಬ ನೆಟ್ಟಿಗ, ನಿಮಗೆ ನಿಜವಾಗಲೂ ಅರ್ಥ ಆಗ್ತಿಲ್ಲ, ಶೋಗಳು ಹೇಗೆ ನಡೆಯುತ್ತಿವೆ ಅಂತ. ಇಲ್ಲಿ ನಿಮ್ಮ ಚಾರಿತ್ರ್ಯ ಉತ್ತಮವಾಗಿ ಇರಬೇಕೇ ಹೊರತು ಕೆಟ್ಟದಾಗಿರಬಾರದು. ಜನರು ನಿಮ್ಮನ್ನು ಇಷ್ಟಪಡುತ್ತಾರೆ. ಆದರೆ ಇಂತಹ ಕೆಲಸಗಳನ್ನು ಮಾಡದೇ ಇರೋದು ಒಳಿತು ಎಂದಿದ್ದಾರೆ. ಅನಸೂಯ ಅವರು ಈ ಕಾಮೆಂಟ್ ಗೂ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಅನುಸೂಯ ತಮ್ಮ ಪ್ರತಿಕ್ರಿಯೆಯಲ್ಲಿ, ಸಿನಿ ಉದ್ಯಮದ ಜನರಾಗಿ ನಾವು ಕೆಲವು ವಿಷಯಗಳನ್ನು ಅನ್ವೇಷಣೆ ಮಾಡಬೇಕಾಗಿದೆ. ಅಲ್ಲದೇ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಇದೆ. ಅವರು ಏನನ್ನ ಇಷ್ಟ ಪಡ್ತಾರೋ ನಾವು ಅದನ್ನೇ ಮಾಡ್ತೀವಿ ಎಂದು ಹೇಳಿದ್ದಾರೆ.

ಸಿನಿಮಾಗಳಲ್ಲಿ ಆಕ್ಷೇಪಾರ್ಹ ವಿಷಯಗಳು ಎಷ್ಟೇ ಬಂದ್ರೂ ಅವುಗಳನ್ನು ಬ್ಲಾಕ್‌ಬಸ್ಟರ್ ಮಾಡುತ್ತೀರಿ. ಆದರೆ ಟಿವಿಯಲ್ಲಿ ಪ್ರೊಮೋಗಳನ್ನು ನೋಡೋ ಮೂಲಕ ಬಂದ ನಿರ್ಣಯ ಮಾಡ್ತಾರೆ. ಕೆಲವರಿಗೆ ಪ್ಯಾಂಟ್ ಮತ್ತು ಶರ್ಟುಗಳ ಮೇಲೆ ಕಣ್ಣು, ಶರ್ಟ್ ಗಳ ಸಮಸ್ಯೆಯೂ ಇದೆ. ನಾನು ಹೇಳಿದ್ದು ನಿಮಗೆ ಅರ್ಥವಾಗಿದೆ ಎಂದುಕೊಳ್ತೇನೆ ಅಂತ ಅನಸೂಯ ಖಡಕ್ ತಿರುಗೇಟು ನೀಡಿದ್ದಾರೆ.

Leave a Comment