Ratna Bhanadar: ನಾಲ್ಕು ದಶಕಗಳ ನಂತರ ತೆರೆಯಲ್ಪಟ್ಟಿದೆ ಪುರಿ ಜಗನ್ನಾಥ ಮಂದಿರದ ಅದ್ಭುತ ರತ್ನ ಭಂಡಾರ

Written by Soma Shekar

Published on:

---Join Our Channel---

Ratna Bhandar: ಬರೋಬ್ಬರಿ 46 ವರ್ಷಗಳ ನಂತರ ಜಗದ್ವಿಖ್ಯಾತ ಪುರಿ ಜಗನ್ನಾಥ ದೇವಾಲಯದ (Puri Jagannath Temple) ರತ್ನ ಭಂಡಾರದ (Ratna Bhandar) ಬಾಗಿಲನ್ನು ತೆರೆಯಲಾಗಿದೆ. ಈ ದಿನ ಮಧ್ಯಾಹ್ನ 1:28 ರತ್ನ ಭಂಡಾರ ತೆರೆಯಲಾಯಿತು ಎನ್ನುವುದಾಗಿ ಒಡಿಶಾದ ಮುಖ್ಯಮಂತ್ರಿ ಕಚೇರಿ ಮಾಹಿತಿಯನ್ನು ನೀಡಿದೆ. ಪುರಿ ಜಗನ್ನಾಥ ಮಂದಿರಕ್ಕೆ ಅದರದ್ದೇ ಆದ ಧಾರ್ಮಿಕ ಐತಿಹ್ಯ ಮತ್ತು ವೈಶಿಷ್ಟ್ಯಗಳಿದ್ದು, ಭಾರತದ ಪ್ರಮುಖ ಮಂದಿರಗಳಲ್ಲಿ ಒಂದಾಗಿದೆ.

12ನೇ ಶತಮಾನದ ಪುರಿ ಜಗನ್ನಾಥ ದೇವಾಲಯದಲ್ಲಿರುವಂತಹ ರತ್ನ ಭಂಡಾರದಲ್ಲಿ (Ratna Bhandar) ಅಮೂಲ್ಯವಾದ ಆಭರಣಗಳು ಹಾಗೂ ಇನ್ನಿತರೆ ಬೆಲೆಬಾಳುವ ವಸ್ತುಗಳು ಇವೆ ಎನ್ನಲಾಗಿದೆ. ಮೊದಲು ಹೊರ ಖಜಾನೆಯನ್ನು ತೆರೆಯಲಾಗಿದೆ. ಇದಾದ ನಂತರ ಒಳ ಖಜಾನೆ ತೆರೆಯಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಎಲ್ಲಾ ಕಾರ್ಯಗಳನ್ನು ಸಹಾ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯ ವಿಧಾನವನ್ನು (Standard Operating) ಅನುಸರಿಸಿ ಮಾಡಲಾಗುತ್ತಿದ್ದು, ಉನ್ನತ ಮಟ್ಟದ ಸಮಿತಿ ಮತ್ತು ಅದರ ಸದಸ್ಯರು ಹೊರಬಂದ ನಂತರ ಇನ್ನಿತರೆ ವಿವರಗಳನ್ನು ನೀಡುತ್ತಾರೆನ್ನುವ ವಿಷಯವನ್ನು ಪುರಿ ಎಸ್‌ಪಿ ಪಿನಾಕ್ ಮಿಶ್ರಾ ಅವರು ತಿಳಿಸಿದ್ದಾರೆ. ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಮ್‌ ಗೆ ಸ್ಥಳಾಂತರ ಮಾಡಲು ವಿಶೇಷ ಪೆಟ್ಟಿಗೆಗಳನ್ನು ತರಲಾಗಿತ್ತು.

ಈ ಪ್ರಕ್ರಿಯೆ ನಡೆಸಲು ಒರಿಸ್ಸಾ ಹೈಕೋರ್ಟ್ ನ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದಲ್ಲಿನ ಉನ್ನತ ಮಟ್ಟದ ಸಮಿತಿಯು ಗ್ರೀಮ್ ಸಿಗ್ನಲ್ ನೀಡಿತ್ತು. ಇದಕ್ಕೆ ಸರ್ಕಾರದ ಅನುಮೋದನೆಯೂ ದೊರೆತ ನಂತರ ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಸ್ಥಾಪಿಸಲಾಯಿತು.

ಪುರಿ ಜಗನ್ನಾಥ ದೇಗುಲದ ಆಡಳಿತವು ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದು, ರತ್ನ ಭಂಡಾರವನ್ನು ತೆರೆಯುವುದಕ್ಕಾಗಿ ಪುರಿ ಜಿಲ್ಲಾಡಳಿತದ ಬಳಿಯಿದ್ದ ನಕಲಿ ಕೀಯನ್ನು ಬಳಸಿಕೊಂಡು ಖಜಾನೆಯನ್ನು ತೆರೆಯಲಾಗಿದೆ. ಅಲ್ಲದೇ ಈ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದು, ವೈದ್ಯಕೀಯ ತಂಡ ಮತ್ತು ಉರಗ ತಜ್ಞರ ತಂಡದ ಸದಸ್ಯರು ಸಹಾ ಉಪಸ್ಥಿತರಿದ್ದರು.

Leave a Comment