Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Written by Soma Shekar

Published on:

---Join Our Channel---

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ ಅದ್ಭುತ ಎನಿಸುವ ವಸ್ತ್ರ ವಿನ್ಯಾಸದ ಮೇಳವೇ ನಡೆಯುತ್ತದೆ. ಬಾಲಿವುಡ್ ನ ಬೆಡಗಿಯರು ಸಹಾ ಈ ಉತ್ಸವದಲ್ಲಿ ಕಾಣಿಸಿಕೊಂಡು ತಮ್ಮ ಅಂದ ಮತ್ತು ಡ್ರೆಸ್ ಮೂಲಕ ಸುದ್ದಿಯಾಗುತ್ತಾರೆ ಮತ್ತು ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಬಾಲಿವುಡ್ ಬೆಡಗಿಯರ ಫೋಟೋಗಳು ವೈರಲ್ ಆಗಿ ಗಮನ ಸೆಳೆಯುತ್ತದೆ.

ಈ ಬಾರಿ ಕಾನ್ ಸಿನಿಮಾ ಉತ್ಸವದಲ್ಲಿ ಬಾಲಿವುಡ್ ಮತ್ತು ದಕ್ಷಿಣದ ಕೆಲವು ಸಿನಿಮಾಗಳಲ್ಲೂ ನಟಿಸಿ ಹೆಸರನ್ನು ಮಾಡಿರುವ ಸ್ಟಾರ್ ನಟಿ ಕಿಯಾರಾ ಅಡ್ವಾಣಿ (Kiara Advani) ಅಂದದ ಕಿಚ್ಚನ್ನು ಹೊತ್ತಿಸಿದ್ದಾರೆ.

ಕಿಯಾರಾ ತಾವು ಕಾನ್ ಸಿನಿಮೋತ್ಸವದಲ್ಲಿ ಧರಿಸಲಿರುವ ಡ್ರೆಸ್ ನ ಒಂದು ಸಣ್ಣ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು ನಟಿಯ ಲುಕ್ ನೋಡಿದ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಶ್ವೇತ ವರ್ಣದ ಅದ್ಭುತ ವಿನ್ಯಾಸದ ಬಟ್ಟೆಯನ್ನು ತೊಟ್ಟಿರುವ ನಟಿಯ ಸೌಂದರ್ಯವನ್ನು ನೋಡದ ಅಭಿಮಾನಿಗಳಂತೂ ಆ ನೋಟದ ಮಾಯೆಯಲ್ಲಿ ಸಿಲುಕಿ ಫಿದಾ ಆಗಿದ್ದಾರೆ.

ಹಂಸವೊಂದು ನಡೆದಂತೆ ಬಿಳಿಯ ಬಣ್ಣದ ಉಡುಪಿನಲ್ಲಿ ನಟಿ ತಮ್ಮ ಮೋಹದ ಮಾಯಾ ಜಾಲವನ್ನು ಅಭಿಮಾನಿಗಳ ಮನಸುಗಳ ಮೇಲೆ ಬೀಸಿದ್ದಾರೆಂದರೆ ತಪ್ಪಾಗಲಾರದು.

ಸೋಷಿಯಲ್ ಮೀಡಿಯಾದಲ್ಲಿ ನಟಿಯ ಅಭಿಮಾನಿಗಳು ಭೂಮಿಗಿಳಿದ ಅಪ್ಸರೆ, ಅದ್ಭುತ ಸೌಂದರ್ಯ, ಹಂಸದಂತಹ ನಡಿಗೆ ಸೂಪರ್ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಾ ಹಾಡಿ ಹೊಗಳುತ್ತಿದ್ದಾರೆ.

Leave a Comment