Rashmika Mandanna: ಇನ್ಮುಂದೆ ನಯನತಾರ ಅಲ್ಲ ರಶ್ಮಿಕಾ, ವಿಷಯ ತಿಳಿದು ಕೆಲವರು ಶಾಕ್, ಫ್ಯಾನ್ಸ್ ಖುಷಿ

Written by Soma Shekar

Published on:

---Join Our Channel---

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಚಾರ್ಮ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅನಿಮಲ್ (Animal) ಸಿನಿಮಾದ ನಂತರ ಬಾಲಿವುಡ್ ನಲ್ಲಿ ನಟಿಯ ಕಡೆಗೆ ಅಲ್ಲಿನ ನಿರ್ದೇಶಕರು ಗಮನ ಹರಿಸಿದ್ದಾರೆ. ರಣಬೀರ್ ಕಪೂರ್ ನಂತರ ಇದೀಗ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆಗೆ ಸಿಕಂದರ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ರಶ್ಮಿಕಾ. ಇವೆಲ್ಲವುಗಳ ಬೆನ್ನಲ್ಲೇ ರಶ್ಮಿಕಾ ಈಗ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರ ಅವರ ದಾಖಲೆಯೊಂದನ್ನ ಬ್ರೇಕ್ ಮಾಡಿದ್ದಾರೆ.

ದಕ್ಷಿಣ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ನಯನತಾರಾ (Nayanthara). ಈ ನಟಿ ಪ್ರಸ್ತುತ ಸಿನಿಮಾವೊಂದಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ. ಕೆಲವೊಂದು ಸಿನಿಮಾಗಳಿಗೆ ನಯನತಾರಾ ಹನ್ನೆರಡು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಸಹಾ ಹೇಳಲಾಗುತ್ತೆ. ಆದರೆ ಈಗ ರಶ್ಮಿಕಾ ಈ ದಾಖಲೆಯನ್ನು ಮುರಿದಿದ್ದಾರೆ.

ಹೌದು, ಬಾಲಿವುಡ್ ನಲ್ಲಿ ಮುರುಗದಾಸ್ ಅವರು ಸಲ್ಮಾನ್ ಖಾನ್ (Salman Khan) ನಾಯಕನಾಗಿರುವ ಸಿಕಂದರ್ (Sikandar) ಸಿನಿಮಾ ನಿರ್ದೇಶನ ಮಾಡಲಿರುವುದು ಈಗಾಗಲೇ ಅಧಿಕೃತವಾಗಿ ಘೋಷಣೆ ಆಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿರುವ ರಶ್ಮಿಕಾ ತಮ್ಮ ಪಾತ್ರಕ್ಕಾಗಿ ಬರೋಬ್ಬರಿ 13 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಈಗ ಎಲ್ಲರ ಗಮನವನ್ನು ಸೆಳೆದಿದೆ.

ಅನಿಮಲ್ ಸಿನಿಮಾದ ಯಶಸ್ಸಿನ ನಂತರ ರಶ್ಮಿಕಾಗೆ ಬಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಿದೆ. ಈಗ ನಟಿ ಹದಿಮೂರು ಕೋಟಿ ಸಂಭಾವನೆ ಪಡೆಯುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ನಟಿಯಾಗಿ ಹೊರ ಹೊಮ್ಮಿದ್ದು, ನಯನತಾರ ರೆಕಾರ್ಡ್ ಅನ್ನು ಬ್ರೇಕ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಸಂಭಾವನೆ ವಿಚಾರವೀಗ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.

Leave a Comment