Payal Rajput: ಆ ನಟಿ ಕೇಳಿದ್ರೆ ಏನು ಬೇಕಾದ್ರು ಮಾಡೋಕೆ ಸಿದ್ಧ; ಹೆಡ್ ಬುಷ್ ನಟಿಯ ಮನಸ್ಸು ಗೆದ್ದ ಆ ನಟ ಯಾರು?

Written by Soma Shekar

Published on:

---Join Our Channel---

Payal Rajput: ಕನ್ನಡದ ಹೆಡ್ ಬುಷ್ ಸಿನಿಮಾದಲ್ಲಿ ನಟಿಸಿದ್ದ ಪಾಯಲ್ ರಜಪೂತ್ (Payal Rajput) ತೆಲುಗು ಸಿನಿಮಾ ರಂಗದಲ್ಲಿ ಸಹಾ ಚಿರಪರಿಚಿತ ನಟಿ. ತೆಲುಗಿನಲ್ಲಿ RX 100 ಸಿನಿಮಾ ಮೂಲಕ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಗಳ ಎದೆಯಲ್ಲಿ ಕಿಚ್ಚು ಹೊತ್ತಿಸಿದ್ದ ಈ ನಟಿ ಸದ್ಯಕ್ಕೆ ಕೆಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಆಡಿದ ಮಾತುಗಳು ಈಗ ಸುದ್ದಿಯಾಗಿದೆ.

ಸಂದರ್ಶನದಲ್ಲಿ ಮಾತನಾಡುವ ವೇಳೆ ಪಾಯಲ್ ತಮ್ಮ ಅಚ್ಚು ಮೆಚ್ಚಿನ ನಟ, ನಟಿಯರು ಯಾರೆಂದು ಹೇಳುವಾಗ, ನಟಿಯರಲ್ಲಿ ತನಗೆ ಇಲಿಯಾನಾ ಮತ್ತು ಅನುಷ್ಕಾ ಶೆಟ್ಟಿ ಇಷ್ಟವಾಗುತ್ತಾರೆ ಎಂದು ಹೇಳಿದ್ದಾರೆ. ತಾನು ಪವನ್ ಕಲ್ಯಾಣ್ ಸಿನಿಮಾಗಳನ್ನು ಹೆಚ್ಚಾಗಿ ನೀಡುವುದಾಗಿಯೂ ನಟಿ ಹೇಳಿದ್ದಾರೆ.

ಇದೇ ವೇಳೆ ತನಗೆ ಮಹೇಶ್ ಬಾಬು ಮತ್ತು ಪ್ರಭಾಸ್ (Prabhas) ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ ಪಾಯಲ್ ರಜಪೂತ್. ಅಲ್ಲದೇ ಪ್ರಭಾಸ್ ತಾನು ಬಹಳ ಮೆಚ್ಚುವ ವ್ಯಕ್ತಿಯೆನ್ನುವ ಮಾತನ್ನು ಸಹಾ ಹೇಳಿದ್ದಾರೆ.. ಪ್ರಭಾಸ್ ಗೆ ಅಡುಗೆ ಮಾಡಿ ಬಡಿಸಲು ನಾನು ಬಯಸುತ್ತೇನೆಂದು ಮನಸಿನ ಮಾತನ್ನ ಶೇರ್ ಮಾಡಿಕೊಂಡಿದ್ದಾರೆ.‌

ಪ್ರಭಾಸ್ ಏನು ಕೇಳುತ್ತಾರೋ ಅದೆಲ್ಲವನ್ನು ಮಾಡಿಕೊಡಲು ನಾನು ಸಿದ್ಧ. ನನಗೆ ರಾಜ್ಮಾ‌ರೈಸ್ ತುಂಬಾ ಇಷ್ಟ.‌ ಅದನ್ನು ವಿಶೇಷವಾಗಿ ಅಡುಗೆ ಮಾಡಿ ನಾನೇ ನನ್ನ ಕೈಯಿಂದ ಪ್ರಭಾಸ್ ಗೆ ತಿನ್ನಿಸಲು ಇಷ್ಟಪಡುತ್ತೇನೆಂದು ಪಾಯಲ್ ಹೇಳಿಕೊಂಡಿದ್ದಾರೆ. ಅಂತ ಅವಕಾಶ ಸಿಕ್ರೆ ಖಂಡಿತ ಮಿಸ್ ಮಾಡಿಕೊಳ್ಳಲ್ಲ ಎಂದಿದ್ದಾರೆ ನಟಿ.

Leave a Comment