Anushka Shetty: ಸಿನಿಮಾ ಸೆಲೆಬ್ರಿಟಿಗಳ ಮದುವೆ ವಿಚಾರಗಳ ಕುರಿತಸಗಿ ಆಗಾಗ ಕೆಲವೊಂದು ಸುದ್ದಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್ ನಟ, ನಟಿಯರು ಮದುವೆಯಾಗದೇ ಇದ್ದಲ್ಲಿ ಅವರು ಯಾರನ್ನು ಮದ್ವೆ ಆಗ್ತಾರೆ ಅನ್ನೋ ವಿಚಾರವಾಗಿ ಒಂದಷ್ಟು ಹೆಸರುಗಳ ಜೊತೆಗೆ ತಳಕು ಹಾಕಿಕೊಂಡು ಒಂದಷ್ಟು ವದಂತಿಗಳು (Gossips) ಹರಿದಾಡೋದು ತೀರಾ ಸಾಮಾನ್ಯವಾದಂತಹ ವಿಷಯವಾಗಿದೆ.
ದಕ್ಷಿಣದ ಸ್ಟಾರ್ ನಟಿಯಾಗಿ ಮಿಂಚಿದ್ದ ಕನ್ನಡ ಮೂಲಕ ಅನುಷ್ಕಾ ಶೆಟ್ಟಿ (Anushka Shetty) ಅವರು ಮೊದಲಿನಷ್ಟು ಈಗ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡ ಅನುಷ್ಕಾ ಅನಂತರ ನಟಿಸಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. ಅದರಲ್ಲೂ ದೊಡ್ಡ ಸಕ್ಸಸ್ ಪಡೆದ ಯಾವುದೇ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿಲ್ಲ.
ವಯಸ್ಸು 42 ಆದರೂ ನಟಿ ಇನ್ನೂ ಮದುವೆಯಾಗಿಲ್ಲ. ಅದಕ್ಕೆ ಅವರ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. ಅನುಷ್ಕಾ ಜೊತೆ ನಟ ಪ್ರಭಾಸ್ (Prabhas) ಅವರ ಹೆಸರು ಒಂದಷ್ಟು ಸಮಯದವರೆಗೆ ತಳಕು ಹಾಕಿಕೊಂಡಿತ್ತು. ಈ ಜೋಡಿ ಪ್ರೀತಿಸುತ್ತಿದ್ದಾರೆ, ಮದುವೆ ಆಗ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅವರು ಉತ್ತಮ ಸ್ನೇಹಿತರೇ ಹೊರತು ಬೇರೇನೂ ಅಲ್ಲ ಎಂದು ಹೇಳಲಾಯಿತು.
ಈಗ ಮತ್ತೊಮ್ಮೆ ತೆಲುಗು ಮಾದ್ಯಮಗಳಲ್ಲಿ ಅನುಷ್ಕಾ ಶೆಟ್ಟಿ ಅವರ ಮದುವೆ ವಿಚಾರವು ಸದ್ದು ಮಾಡಿವೆ. ಮಾದ್ಯಮ ವರದಿಗಳ ಪ್ರಕಾರ ನಟಿ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಕನ್ನಡ ನಿರ್ಮಾಪಕರೊಬ್ಬರ ಜೊತೆಗೆ ಅನುಷ್ಕಾ ಮದುವೆ ನಡೆಯಲಿದೆ ಎಂದೂ ಅವರ ವಯಸ್ಸು ಸಹಾ 42 ಎಂದು ಹೇಳಲಾಗಿದೆ. ಅಲ್ಲದೇ ಎರಡು ಕುಟುಂಬಗಳು ಮದುವೆ ವಿಚಾರ ಮಾತನಾಡಿದ್ದು, ಮದುವೆಗೆ ಗ್ರೀನ್ ಸಿಗ್ನಲ್ ದೊರೆತಿದೆ ಎನ್ನಲಾಗುತ್ತಿದೆ.