Anupama Parameshwaran: ಪ್ರೇಮಂ ಸಿನಿಮಾ ಖ್ಯಾತಿಯ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದರೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಮಾತ್ರ ತೆಲುಗು ಸಿನಿಮಾರಂಗ ಅಥವಾ ಟಾಲಿವುಡ್ ನಲ್ಲಿ. ಆರಂಭದಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಈ ನಟಿ ಈಗ ಸಕತ್ ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಕ್ರಶ್ ಆಗಿ ಬದಲಾಗಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಕಾಣಿಸಿಕೊಂಡಿರುವ ಟಿಲ್ಲು ಸ್ಕ್ವೇರ್ (Tillu Square) ಸಿನಿಮಾ ಬಿಡುಗಡೆಯಾಗಿದ್ದು ದೊಡ್ಡಮಟ್ಟದಲ್ಲಿ ಸಕ್ಸಸ್ ಅನ್ನ ಪಡೆದುಕೊಳ್ಳುವ ಮೂಲಕ ಬಹಳ ದಿನಗಳ ನಂತರ ಅನುಪಮಾ ಅವರಿಗೆ ಒಂದು ದೊಡ್ಡ ಸಕ್ಸಸ್ ಸಿಕ್ಕಿದೆ. ಟಿಲ್ಲು ಸ್ಕ್ವೇರ್ ನ ಯಶಸ್ಸಿನ ಬೆನ್ನಲ್ಲೇ ಇದೀಗ ಅನುಪಮಾ ಪರಮೇಶ್ವರನ್ ದುಬಾರಿ ನಟಿಯಾಗಿ ಬದಲಾಗಿದ್ದು ತಾವು ಪಡೆಯುವ ಸಂಭಾವನೆಯ ಮೊತ್ತವನ್ನು ಏರಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಾನು ಹಸಿ ಬಿಸಿ ದೃಶ್ಯಗಳಲ್ಲಿ ನಟಿಸುವುದಿಲ್ಲ, ತಾನು ಬೋಲ್ಡ್ ಪಾತ್ರೆಗಳನ್ನು ಮಾಡೋದಿಲ್ಲ ಎಂದು ಹೇಳುವ ಮೂಲಕ ಮೊದಲ ಸಿನಿಮಾಗಳಲ್ಲಿ ತಾವು ಹೇಳಿದಂತೆ ನಡೆದುಕೊಂಡು ಅಂತದ್ದೇ ಪಾತ್ರಗಳನ್ನು ನಿಭಾಯಿಸಿದ್ದರು. ಆದರೆ ಟಿಲ್ಲು ಸ್ಕ್ವೇರ್ ಸಿನಿಮಾದ ಮೂಲಕ ನಟಿ ತಾವೇ ಹಾಕಿಕೊಂಡಿದ್ದ ನಿಯಮವನ್ನ ಬ್ರೇಕ್ ಮಾಡಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಅನ್ನ ನೀಡಿದ್ದಾರೆ.
ಕಾರ್ತಿಕೇಯ 2 (Karthikeya 2) ಸಿನಿಮಾ ನಂತರ ಟಿಲ್ಲು ಸ್ಕ್ವೇರ್ ಸಿನಿಮಾದ ಮೂಲಕ ಅನುಪಮಾ ಪರಮೇಶ್ವರನ್ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಇಷ್ಟು ದಿನಗಳ ಕಾಲ ಸಿನಿಮಾವೊಂದಕ್ಕೆ 50 ರಿಂದ 60 ಲಕ್ಷ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದ ಅನುಪಮಾ ಪರಮೇಶ್ವರನ್ ಅವರು ಈಗ ತಮ್ಮ ಸಂಭಾವನೆಯನ್ನು ಒಂದೂವರೆ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿಕೊಂಡಿದ್ದಾರೆನ್ನುವ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು, ಇನ್ಮುಂದೆ ರಶ್ಮಿಕಾ (Rashmika) ಮತ್ತು ಶೀಲೀಲಾಗೆ (Sreeleela) ಈ ನಟಿ ಟಕ್ಕರ್ ಕೊಡೋ ಹಾಗಿದೆ ಅಂತ ಹೇಳಲಾಗ್ತಿದೆ.