Actor Chethan: ದರ್ಶನ್ ಕೇಸ್, ಉಪೇಂದ್ರ ಅವರದ್ದು ಅಜ್ಞಾನದ ಹೇಳಿಕೆ ಎಂದ ನಟ ಚೇತನ್ ಅಹಿಂಸಾ

Written by Soma Shekar

Published on:

---Join Our Channel---

Actor Chethan: ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಮೊನ್ನೆಯಷ್ಟೇ ನಟ ದರ್ಶನ್ (Darshan) ಅವರ ಪ್ರಕರಣದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಸುದೀರ್ಘ ಪೋಸ್ಟ್ ನ ಮೂಲಕ ಹಂಚಿಕೊಂಡಿದ್ದರು. ನಟ ಹೇಳಿದ ಮಾತಿಗೆ ಒಂದಷ್ಟು ಮೆಚ್ಚುಗೆ ಹರಿದು ಬಂದಿತ್ತು, ಆದರೆ ಇದೇ ವೇಳೆ ಇದು ಸಾಧ್ಯವೇನಾ? ಎಂದು ಕೆಲವರು ಪ್ರಶ್ನೆಯನ್ನು ಸಹಾ ಮಾಡಿದ್ದರು.

ದರ್ಶನ್ ಅವರು ಸಾರ್ವಜನಿಕ ವ್ಯಕ್ತಿಯಾಗಿರುವ ಕಾರಣ ವಿಚಾರಣೆ ಪಾರದರ್ಶಕವಾಗಿರಬೇಕು, ವಿಚಾರಣೆ ವೀಡಿಯೋ ದಾಖಲೆ, ಸಾಕ್ಷಿ ಎಲ್ಲಾ ಸಾರ್ವಜನಿಕವಾಗಿ ತೆರದಿಡಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವೆಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ ಎಂದಿದ್ದರು ಉಪೇಂದ್ರು. ಇದೇ ವಿಚಾರವಾಗಿ ನಟ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೆ ನೀಡುತ್ತಾ ಉಪೇಂದ್ರ ಅವರದ್ದು ಅಜ್ಞಾನದ ಹೇಳಿಕೆ ಎಂದಿದ್ದಾರೆ.‌

ಚೇತನ್ (Actor Chethan) ಅವರು ಪೋಸ್ಟ್ ಒಂದನ್ನು ಶೇರ್ ಮಾಡಿ, ನಟ ಉಪೇಂದ್ರ ಅವರು ದರ್ಶನ್ ಪ್ರಕರಣದ ಬಗ್ಗೆ ತಮ್ಮ ಟ್ರೇಡ್ಮಾರ್ಕ್ ಅಜ್ಞಾನದ ಹೇಳಿಕೆಯನ್ನು ನೀಡಿದ್ದಾರೆ. ಈ ಪ್ರಕರಣದ ವೀಡಿಯೊ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪೊಲೀಸರು ಅಧಿಕೃತವಾಗಿ ಸಾರ್ವಜನಿಕರಿಗೆ ಹಂಚಿಕೊಳ್ಳಬೇಕು ಎಂದು ಉಪೇಂದ್ರ ಸಲಹೆ ನೀಡಿದ್ದಾರೆ.

ಅಂತಹ ಪೊಲೀಸ್ ಕ್ರಮವು ಆರೋಪಿಗಳ ಗೌಪ್ಯತೆಯ ಹಕ್ಕಿನ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಮಾನವ ಹಕ್ಕುಗಳಿಗಿಂತ ಮನರಂಜನೆಯೇ ಉಪೇಂದ್ರ ಅವರ ಕಾರ್ಯವಿಧಾನವೆಂದು ತೋರುತ್ತದೆ ಎಂದು ಬರೆದುಕೊಂಡಿದ್ದು, ಉಪೇಂದ್ರ ಅವರ ಹೇಳಿಕೆಯ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.‌

Leave a Comment