Pushpa 2: ಅಲ್ಲು ಅರ್ಜುನ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್; ಪುಷ್ಪ 2 ಸಿನಿಮಾದ ಬಗ್ಗೆ ಹೊರ ಬಿತ್ತು ಶಾಕಿಂಗ್ ಅಪ್ಡೇಟ್

Written by Soma Shekar

Published on:

---Join Our Channel---

Pushpa 2: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಐಕಾನ್ ಸ್ಟಾರ್ ಆಗಿ ಬದಲಾಯಿಸಿದ ಸಿನಿಮಾ ಪುಷ್ಪ. ಈ ಸಿನಿಮಾದ ನಂತರ ಅಲ್ಲು ಅರ್ಜುನ್ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಡೆದಂತಹ ದೊಡ್ಡ ಗೆಲುವಿನ ನಂತರ ಸಹಜವಾಗಿಯೇ ಸಿನಿ ಪ್ರೇಮಿಗಳು ಮತ್ತು ನಟನ ಅಭಿಮಾನಿಗಳು ಪುಷ್ಪ 2 (Pushpa 2) ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಸಾಂಗ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಭರ್ಜರಿ ಖುಷಿಯನ್ನು ನೀಡಿದೆ.

ಈ ಸಿನಿಮಾ ಕುರಿತಾಗಿ ನೂರು ನಿರೀಕ್ಷೆಗಳನ್ನು ಇಟ್ಟುಕೊಂಡು ಅಭಿಮಾನಿಗಳು ಸಿನಿಮಾ ಬಿಡುಗಡೆಯ ದಿನವನ್ನು ಲೆಕ್ಕ ಹಾಕುತ್ತಿರುವಾಗಲೇ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ಈಗ ಹೊರ ಬಂದಿರುವ ಸುದ್ದಿಯ ಪ್ರಕಾರ ಡಿಸೆಂಬರ್ ನಲ್ಲಿಯೂ ಪುಷ್ಪ 2 ಸಿನಿಮಾ ತೆರೆಗೆ ಬರುವುದು ಅನುಮಾನ ಎನ್ನಲಾಗಿದ್ದು, ಈ ವಿಷಯ ಈಗ ಚರ್ಚೆಗೆ ಕಾರಣವಾಗಿದೆ.

ಪುಷ್ಪ 2 ಸಿನಿಮಾ ಆಗಸ್ಟ್ 15ರಂದು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಸಿನಿಮಾ ಬಿಡುಗಡೆಯ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಆದರೆ ಅನಂತರ ಕೆಲವು ಕಾರಣಗಳಿಂದಾಗಿ ಪುಷ್ಪ 2 ಸಿನಿಮಾದ ಬಿಡುಗಡೆಯನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿತ್ತು. ಆದರೆ ಈಗ ಡಿಸೆಂಬರ್ ನಲ್ಲೂ ಸಿನಿಮಾ ಬಿಡುಗಡೆ ಅನುಮಾನ ಎನ್ನಲಾಗಿದ್ದು, ಬಹುಶಃ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಬಹುದು.

ಸಿನಿಮಾದ ಚಿತ್ರೀಕರಣ ಸರಿಯಾದ ಸಮಯದಲ್ಲಿ ನಡೆಯುತ್ತಿಲ್ಲ ಎಂಬುದಾಗಿ ನಟ ಅಲ್ಲು ಅರ್ಜುನ್ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಸಿನಿಮಾಕ್ಕಾಗಿ ಅಲ್ಲು ಅರ್ಜುನ್ ಗಡ್ಡವನ್ನು ಬೆಳೆಸಿದ್ದರು ಆದರೆ ಶೂಟಿಂಗ್ ತಡವಾಗುತ್ತಿರುವ ಕಾರಣ ಅವರು ಗಡ್ಡವನ್ನು ಟ್ರಿಮ್ ಮಾಡಿಸಿದ್ದಾರೆ. ಕುಟುಂಬದ ಜೊತೆಗೆ ಯುರೋಪ್‌ ನ ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೊಂದು ಕಡೆ ಸಿನಿಮಾದ ನಿರ್ದೇಶಕ ಸುಕುಮಾರ್ ಅಮೆರಿಕಕ್ಕೆ ಹೋಗಿದ್ದು ಚಿತ್ರೀಕರಣಕ್ಕೆ ತಡವಾಗುತ್ತಿದೆ.

ಪುಷ್ಪ 2 ಸಿನಿಮಾದ ಕುರಿತಾಗಿ ಅಭಿಮಾನಿಗಳಂತೂ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬಿಡುಗಡೆಯಾಗಿರುವ ಸಾಂಗ್ ಸೋಶಿಯಲ್ ಮೀಡಿಯಾ ಗಳಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಇವೆಲ್ಲವಗಳ ನಡುವೆ ಮರು ಚಿತ್ರೀಕರಣದ ಮಾತು ಕೇಳಿಬಂದಿದೆ. ಇಷ್ಟು ದಿನಗಳು ಕಳೆದರೂ ಶೂಟಿಂಗ್ ಇನ್ನು ಯಾಕೆ ಮುಗಿದಿಲ್ಲವೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಒಟ್ಟಿನಲ್ಲಿ ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಅಧಿಕೃತ ಘೋಷಣೆಗೆ ಫ್ಯಾನ್ಸ್ ಕಾಯ್ತಿದ್ದಾರೆ.

Leave a Comment