Keerthy Suresh: ಸೌತ್ ಹೀರೋ ನೋ ಲಿಪ್ ಕಿಸ್, ಬಾಲಿವುಡ್ ಹೀರೋ ಆದ್ರೆ ಓಕೆ? ಕೀರ್ತಿ ಸುರೇಶ್ ಶಾಕಿಂಗ್ ನಿರ್ಣಯ

Written by Soma Shekar

Published on:

---Join Our Channel---

Keerthy Suresh: ನಟಿ ಕೀರ್ತಿ ಸುರೇಶ್ (Keerthy Suresh) ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಹೆಸರನ್ನು ಪಡೆದಿರುವ ಜನಪ್ರಿಯ ತಾರೆಯಾಗಿದ್ದಾರೆ. ನೇನು ಶೈಲಜಾ ಸಿನಿಮಾದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಪರಿಚಯವಾದ ಈ ನಟಿ ಆರಂಭದಿಂದಲೇ ತಮ್ಮ ನಟನೆ ಹಾಗೂ ಅಂದದಿಂದ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದವರು. ಮೊದಲ ಸಿನಿಮಾದಿಂದಲೇ ಪ್ರೇಕ್ಷಕರ ಮೇಲೆ ಮೋಡಿಯನ್ನು ಮಾಡಿದವರು. ಅದಾದ ನಂತರ ಜನಪ್ರಿಯ ಸಿನಿಮಾ ನಟರ ಜೊತೆಗೆ ಹೊಸ ಹೊಸ ಅವಕಾಶಗಳನ್ನು ಪಡೆದುಕೊಂಡರು.

ಕೀರ್ತಿ ಸುರೇಶ್ ಅವರು ಪವನ್ ಕಲ್ಯಾಣ್ ಜೊತೆ ತೆರೆಯನ್ನು ಹಂಚಿಕೊಂಡ ಅಜ್ಞಾತವಾಸಿ ಸಿನಿಮಾ ಮಾತ್ರ ನಿರೀಕ್ಷಿತ ಗೆಲುವನ್ನು ಕಾಣದೇ ಸೋಲನ್ನ ಅನುಭವಿಸಿತ್ತು. ಆದರೆ ಅದೇ ವರ್ಷ ನಾಗ್ ಅಶ್ವಿನ್ (Nag Aswin) ನಿರ್ದೇಶನದ ಮಹಾ ನಟಿ (Mahanati) ಸಿನಿಮಾದಲ್ಲಿ ಹಿರಿಯ ನಟಿ ಸಾವಿತ್ರಿ ಅವರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸಿನಿಮಾರಂಗದಲ್ಲೊಂದು ಸಂಚಲನ ಸೃಷ್ಟಿಸಿದ ಕೀರ್ತಿ ಸುರೇಶ್ ಮಾತ್ರವೇ ತಮ್ಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು.

ಮಹಾ ನಟಿ ಸಿನಿಮಾದ ನಂತರ ಸಾಲು ಸಾಲು ಅವಕಾಶಗಳು ನಟಿಯನ್ನು ಅರಸಿ ಬಂದವು. ಆದರೆ ಅದರಲ್ಲಿ ಒಂದಷ್ಟು ಸಿನಿಮಾಗಳು ಯಶಸ್ಸನ್ನ ಪಡೆದುಕೊಳ್ಳಲಿಲ್ಲ. ಅದೇ ವೇಳೆ ನಟಿ ತಾವು ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದಿಲ್ಲ, ಮತ್ತು ಲಿಪಲಾಕ್ ದೃಶ್ಯಗಳನ್ನು ಮಾಡೋದಿಲ್ಲ ಎಂದು ಹಾಕಿದ ಶರತ್ತುಗಳಿಂದ ಸ್ಟಾರ್ ನಟಿಯಾದರೂ ಸಹಾ ಅವಕಾಶಗಳು ಕಡಿಮೆಯಾದವು.

ಅಲ್ಲದೇ ಟಾಲಿವುಡ್ ನ ಒಂದು ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯವೊಂದರಲ್ಲಿ ನಟಿಸಬೇಕಾಗಿ ಬಂತು. ಆದರೆ ಆ ದೃಶ್ಯ ಕಂಫರ್ಟಬಲ್ ಅಲ್ಲ ಅನಿಸಿದ ಆ ಸಿನಿಮಾದ ಹೀರೋ ಅಂತಹುದೊಂದು ದೃಶ್ಯ ಬೇಡ ಅಂತ ನಿರ್ದೇಶಕರಿಗೆ ಹೇಳಿದರಂತೆ. ದಿನೇ ದಿನೇ ಬೇಡಿಕೆ ಕುಗ್ಗುತ್ತಿರುವುದನ್ನ ಕಂಡ ಕೀರ್ತಿ ಸುರೇಶ್ ಮೊದಲಿಗಿಂತ ಸ್ವಲ್ಪ ಬೋಲ್ಡ್ ಆಗಿ ಡ್ರೆಸ್ ಧರಿಸಿ ಫೋಟೋ ಶೂಟ್ ಮಾಡಿಸಿದರು.

ಅಲ್ಲಿಗೆ ತಾನು ಬೋಲ್ಡ್ ಡ್ರೆಸ್ ಹಾಕೋಕೆ ಸಿದ್ಧ ಅಂತ ಪರೋಕ್ಷವಾಗಿ ಹೇಳಿದರು. ಈಗ ಆ್ಯಟ್ಲಿ ನಿರ್ದೇಶನದ ಬಾಲಿವುಡ್ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಲಿಪ್ ಲಾಕ್ ಮಾಡಲು ಸಹಾ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ ನಟಿಯ ಅಭಿಮಾನಿಗಳು ಶಾಕ್ ಆಗಿದ್ದಾರೆ. ಬಾಲಿವುಡ್ ಸಿನಿಮಾಕ್ಕಾಗಿ ನಟಿ ತಮ್ಮ ನಿರ್ಧಾರವನ್ನ ಬದಲಿಸಿ ಬಿಟ್ರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Leave a Comment