Tollywood News: ರಶ್ಮಿಕಾ ವಿಜಯ್ ದೇವರಕೊಂಡ ಕುರಿತು ಇದೆಂತಾ ಸುದ್ದಿ? ಇದು ನಿಜವೇನಾ ಅಂತ ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Tollywood News: ಟಾಲಿವುಡ್ ನಲ್ಲಿ (Tollywood News) ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಜೋಡಿಯಾಗಿದೆ. ಸಿನಿಮಾ ವಿಚಾರಗಳಿಗೆ ಅಲ್ಲದೇ ಆಗಾಗ ಇವರ ಖಾಸಗಿ ಜೀವನದ ವಿಚಾರವಾಗಿಯೂ ಇವರು ಸುದ್ದಿಯಾಗುತ್ತಾರೆ. ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಜೋಡಿಯಾಗಿ ಗೀತಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದರು.

ರಶ್ಮಿಕಾ ಮತ್ತು ವಿಜಯ ದೇವರಕೊಂಡ ಮೊದಲು ಜೋಡಿಯಾಗಿ ಕಾಣಿಸಿಕೊಂಡಿದ್ದು ಗೀತಗೋವಿಂದಂ (Geetha Govindam) ಸಿನಿಮಾದಲ್ಲಿ. ಈ ಸಿನಿಮಾ ದೊಡ್ಡ ಗೆಲುವನ್ನು ಪಡೆಯಿತು. ಇದು ರಶ್ಮಿಕಾ ಮಂದಣ್ಣಗೆ ವೃತ್ತಿ ಜೀವನದಲ್ಲಿ ಮುಂದೆ ಸಾಗಲು, ಇನ್ನಷ್ಟು ಬೇಡಿಕೆ ಸಿಗಲು ಕಾರಣವಾಯಿತು. ಅನಂತರ ಈ ಜೋಡಿ ಡಿಯರ್ ಕಾಮ್ರೇಡ್ ನಲ್ಲೂ ಜೊತೆಯಾಗಿ ನಟಿಸಿದರಾದರೂ ಆ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯಲಿಲ್ಲ.

ಸಿನಿಮಾಗಳ ವಿಚಾರ ಒಂದು ಕಡೆಯಾದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ನಡುವಿನ ಸ್ನೇಹ ಮತ್ತು ಆತ್ಮೀಯತೆಯಿಂದಾಗಿ ಸಾಕಷ್ಟು ಸುದ್ದಿಯಾದರು. ಇವರಿಬ್ಬರ ನಡುವಿನ ಆತ್ಮೀಯತೆ ಕುರಿತಾಗಿ ಒಂದಷ್ಟು ಗಾಸಿಪ್ ಗಳು ಹರಿದಾಡಿದವು. ರಶ್ಮಿಕಾ ಮತ್ತು ವಿಜಯ್ ಎರಡು ಸಿನಿಮಾಗಳ ನಂತರ ಮತ್ತೆ ಜೋಡಿಯಾಗಿ ಕಾಣಿಸಿಕೊಂಡಿಲ್ಲ. ಇಬ್ವರನ್ನು ಜೋಡಿಯಾಗಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.‌

ಈಗ ಅಭಿಮಾನಿಗಳ ಆಸೆ ಹಾಗೂ ನಿರೀಕ್ಷೆಗಳು ನಿಜವಾಗುವ ಸಮಯ ಹತ್ತಿರವಾದಂತೆ ಕಾಣುತ್ತಿದೆ. ನಿರ್ದೇಶಕ ರಾಹುಲ್ ತಮ್ಮ ಹೊಸ ಸಿನಿಮಾಕ್ಕಾಗಿ ವಿಜಯ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ‌ ಅವರನ್ನು ತರುವ ಆಲೋಚನೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ರಾಹುಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಯಕಿಯ ಪಾತ್ರ ರಾಯಲ ಸೀಮ ಹುಡುಗಿಯ ಪಾತ್ರವಾಗಿದ್ದು, ರಶ್ಮಿಕಾ ಈಗಾಗಲೇ ಪುಷ್ಪ ದಲ್ಲಿ ಅಂತಹ ಪಾತ್ರ ಮಾಡಿದ್ದಾರೆ.

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಾಡಿರುವ ಪಾತ್ರದ ಕಾರಣದಿಂದ ಹೊಸ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ರಶ್ಮಿಕಾ ಬೆಸ್ಟ್ ಎಂದು ರಾಹುಲ್ ಅವರಿಗೆ ಅನಿಸಿದೆ‌. ಇನ್ನು ರಶ್ಮಿಕಾ ಈ ಸಿನಿಮಾವನ್ನು ಒಪ್ಪಿಕೊಂಡರೆ ಬಹುದಿನಗಳ ನಂತರ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮತ್ತೊಮ್ಮೆ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಅನುಭವ ನೀಡಲಿದ್ದಾರೆ.

Leave a Comment