Lifestyle: ಅಕ್ಕ ತಂಗಿ ಅವಳಿಗಳು, ಗುರುತು ಸಿಗದೇ ಹೆಂಡ್ತಿ ತಂಗಿ ಜೊತೆ ಮಂಚ ಏರಿದ ಗಂಡ; ಮುಂದೆ ಆಗಿದ್ದು ಮಾತ್ರ ಬೇಸರ

Written by Soma Shekar

Published on:

---Join Our Channel---

Lifestyle: ಅವರಿಬ್ಬರು ಅವಳಿಗಳು, ಅವರಿಬ್ಬರೂ ಸಹಾ ಅಕ್ಕ ತಂಗಿಯರು (Lifestyle). ಅಕ್ಕನಿಗೆ ಮದುವೆಯಾಗಿದ್ದು, ತಂಗಿಗೆ ಮದುವೆ ಮಾಡಲು ಸೂಕ್ತ ವರನ ಹುಡುಕಾಟದಲ್ಲಿ ತೊಡಗಿದ್ದರು ತಂದೆ ತಾಯಿ. ಅವಳಿ ಅಕ್ಕ ತಂಗಿಯರು ನೋಡುವುದಕ್ಕೆ ಒಂದೇ ರೀತಿ ಇದ್ದುದ್ದರಿಂದ ಅನೇಕ ಸಲ ಅವರಲ್ಲಿ ಅಕ್ಕ ಯಾರು, ತಂಗಿ ಯಾರು ಎನ್ನುವುದನ್ನು ಗುರುತಿಸುವುದು ಕಷ್ಟವಾಗಿತ್ತು. ಇದೇ ಗೊಂದಲದಿಂದಾಗಿ ಅಕ್ಕನ ಗಂಡ ತನ್ನ ಹೆಂಡ್ತಿ ಯಾರೆಂದು ತಿಳಿಯದೇ ತಂಗಿಯ ಜೊತೆಗೆ ಪಲ್ಲಂಗ ಏರಿದ ವಿಚಿತ್ರ ಘಟನೆಯೊಂದು ನಡೆದಿದೆ.

ಇಲ್ಲಿ ಇನ್ನೂ ವಿಚಿತ್ರ ಏನಂದರೆ ಅಕ್ಕನ ಗಂಡ ತನ್ನೊಡನೆ ಸರಸ ಆಡುತ್ತಿದ್ದರೂ ಬಾವ ನಾನು ಅಕ್ಕ ಅಲ್ಲ ಎಂದು ಹೇಳದೇ ಬಾವನ ಜೊತೆಗೆ ಮಂಚ ಏರಿದ ತಂಗಿ ಅಕ್ಕನ ಸಂಸಾರಕ್ಕೆ ಕೊಳ್ಳಿ ಇಟ್ಟಿದ್ದಾಳೆ. ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಲೀಸಾ (Lisa) ಎನ್ನುವ ಹೆಸರಿನ ಯುವತಿಗೆ ಐದು ವರ್ಷಗಳ ಹಿಂದೆ ಜಾರ್ಜ್ ಎನ್ನುವ ವ್ಯಕ್ತಿಯ ಜೊತೆಯಲ್ಲಿ ಮದುವೆ ನಡೆದಿತ್ತು. ‌

ಲೀಸಾಗೆ ಲೀನಾ‌ (Leena) ಹೆಸರಿನ ಸಹೋದರಿ ಇದ್ದಾಳೆ. ಲೀಸಾಗೆ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಿದ್ದರಿಂದ ಆಕೆಗೆ ಇನ್ನೂ ಮಕ್ಕಳಾಗಿಲ್ಲ. ಹೀಗಿರುವಾಗ ಲೀಸಾ ಯಾವುದೋ ಕೆಲಸದ ಮೇಲೆ ಪರಸ್ಥಳಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ತಂಗಿ ಲೀನಾ ಅಕ್ಕನ‌ ಮನೆಗೆ ಬಂದಿದ್ದಾಳೆ. ಈ ವೇಳೆ ಲೀಸಾಳ ಪತಿ ಲೀನಾಳನ್ನೇ ತನ್ನ ಹೆಂಡತಿ ಎಂದು ಕೊಂಡು ಹತ್ತಿರವಾಗಿದ್ದು, ಅವಳ ಜೊತೆಗೆ ಮಂಚವೇರಿದ್ದಾನೆ.

ಮನೆಗೆ ಮರಳಿದ ಲೀಸಾಗೆ ಈ ವಿಷಯ ತಿಳಿದು ಬೇಸರಗೊಂಡಿದ್ದು, ವಿಚ್ಚೇದನ ನೀಡುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಾಳೆ ಎನ್ನಲಾಗಿದೆ. ಜಾರ್ಜ್ ತನ್ನ ತಪ್ಪನ್ನು ತಿಳಿದು ಲೀಸಾ ಬಳಿ ಕ್ಷಮೆ ಯಾಚಿಸಿದರೂ ಸಹಾ ಲೀಸಾ ಗಂಡನನ್ನ ಕ್ಷಮಿಸದೇ ದೂರ ಇಟ್ಟಿದ್ದಾಳೆ.‌ ಲೀನಾ ಮಾತ್ರ ತನಗೇನೂ ತಿಳಿದಿಲ್ಲ ಎಂದು ಮೌನವಾಗಿದ್ದು, ಲೀಸಾ ತನಗಾದ ನೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಾಗ ಇದು ಎಲ್ಲರ ಗಮನಕ್ಕೆ ಬಂದಿದೆ.

Leave a Comment