Tirupati: ಭಕ್ತರೇ ಎಚ್ಚರ, ತಿರುಮಲ ವಿಶೇಷ ದರ್ಶನ ಮತ್ತು ಲಾಡು ಬೆಲೆ ಇಳಿಕೆ, ವೈರಲ್ ಸುದ್ದಿಗೆ TTD ಕೊಟ್ಟಾಯ್ತು ಸ್ಪಷ್ಟನೆ

Written by Soma Shekar

Published on:

---Join Our Channel---

Tirupati : ತಿರುಮಲ ತಿರುಪತಿ (Tirupati) ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಪ್ರತಿದಿನವೂ ಕೂಡಾ ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆ ಮತ್ತು ವಾಹನಗಳ ಮೂಲಕ ತಿರುಮಲ ಗಿರಿಯನ್ನು ಸೇರುತ್ತಾರೆ. ತಿರುಪತಿಯ ದೇವರ ದರ್ಶನದ ನಂತರ ಸ್ವಾಮಿಯವರ ಲಾಡು ಪ್ರಸಾದ ಇಲ್ಲಿ ಬಹಳ ವಿಶೇಷವಾಗಿದೆ. ತಿರುಮಲದಲ್ಲಿ ಉಚಿತ ಸರ್ವದರ್ಶನಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ ಎನ್ನುವ ಕಾರಣಕ್ಕೆ ಅನೇಕರು ವಿಶೇಷ ದರ್ಶನ ಟಿಕೆಟ್ ಪಡೆದು ಹೋಗುತ್ತಾರೆ. ಹೋಗದೇ ಇರುವವರು ಲಾಡು ತಂದುಕೊಡುವಂತೆ ಕೇಳುವುದು ಸಾಮಾನ್ಯ.

ಆದರೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಸುದ್ದಿ ವೈರಲ್ ಆಗಿದೆ. ತಿರುಪತಿಯಲ್ಲಿ ವಿಶೇಷ ದರ್ಶನ (Special Darshan) ಟಿಕೆಟ್ ನ ದರವನ್ನು ಮತ್ತು ಲಾಡು ಪ್ರಸಾದದ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎನ್ನುವ ಫೋಟೋ ಫೋಸ್ಟ್ ಗಳು ವೈರಲ್ ಆಗಿದ್ದು, ಇದನ್ನು ನೋಡಿ ಅನೇಕರು ಇದನ್ನು ನಿಜ ಎಂದು ಭಾವಿಸಿದ್ದು, ಇದಕ್ಕೆ ಟಿಟಿಡಿ ತನ್ನ ಸ್ಪಷ್ಟನೆ ನೀಡಿದೆ.

ಆಂಧ್ರಪ್ರದೇಶದದಲ್ಲಿ ಚಂದ್ರಬಾಬು ನಾಯ್ಡು ಅವರ ನಾಯಕತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ತಿರುಪತಿಗೆ ವಿಶೇಷ ಗಮನ ನೀಡುವ ಜೊತೆಗೆ ವಿಶೇಷ ದರ್ಶನ ಮತ್ತು ಲಾಡು ಬೆಲೆಯನ್ನು ಕಡಿಮೆ ಮಾಡಿದ್ದಾರೆಂದು ಕೆಲವೊಂದು ಸುದ್ದಿಗಳನ್ನು ಹಬ್ಬಿಸಲಾಗಿದ್ದು, ವೈರಲ್ ಸುದ್ದಿ ಕೇಳಿ ಅನೇಕರು ಖುಷಿಯಾಗಿದ್ದು, ಮೆಚ್ಚುಗೆಗಳನ್ನು ಸಹಾ ನೀಡಿದ್ದಾರೆ.

ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ ಸ್ಪಷ್ಟನೆ ನೀಡುತ್ತಾ, ವಿಶೇಷ ದರ್ಶನ ಟಿಕೆಟ್ ಮತ್ತು ಲಾಡು ಪ್ರಸಾದದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.‌ ಇದರ ಬಗ್ಗೆ ನಡೆಯುತ್ತಿರುವ ಪ್ರಚಾರ ಸತ್ಯಕ್ಕೆ ದೂರವಾಗಿದೆ. ಜನ ಇದನ್ನು ನಂಬಬಾರದು, ವಿಶೇಷ ದರ್ಶನದ ಟಿಕೆಟ್ 300 ಮತ್ತು ಲಾಡು ಬೆಲೆ 50 ಇದ್ದು ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ.

Leave a Comment