Kalki 2898 AD: ದೊಡ್ಡ ಸ್ಟಾರ್ ಆದ್ರು ಸರಳತೆ ಮೆರೆದ ಅಮಿತಾಬ್ ಬಚ್ಚನ್ ಅವರ ನಡೆಗೆ ಹರಿದು ಬರ್ತಿದೆ ಮೆಚ್ಚುಗೆಗಳು

Written by Soma Shekar

Published on:

---Join Our Channel---

Kalki 2898 AD: ಬಹುನಿರೀಕ್ಷಿತ ಕಲ್ಕಿ 2898 ಎಡಿ (Kalki 2898 AD) ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಇತ್ತೀಚಿಗಷ್ಟೇ ಮುಂಬೈನಲ್ಲಿ ಈ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ನಟ ಪ್ರಭಾಸ್, ನಾಯಕಿ ದೀಪಿಕಾ ಪಡುಕೋಣೆ, ಪ್ರಮುಖ ಪಾತ್ರಗಳಲ್ಲಿರುವ ಹಿರಿಯ ನಟರಾದ ಅಮಿತಾಬ್ ಬಚ್ಚನ್ (Amitab Bachchan) ಹಾಗೂ ಕಮಲಹಾಸನ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಮಿತಾಬ್ ಬಚ್ಚನ್ ಅವರು ಚಿತ್ರ ನಿರ್ಮಾಪಕರಿಗೆ ಗೌರವ ಸೂಚಿಸಿದ ವಿಧಾಮ ನೋಡಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ ಹಾಗೂ ವೈರಲ್ ಆಗಿದೆ.

ಕಲ್ಕಿ ಸಿನಿಮಾವನ್ನು ತೆಲುಗು ಸಿನಿಮಾ ರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವಂತಹ ವೈಜಯಂತಿ ಮೂವೀಸ್ (Vyjayanti Movies) ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡಿದೆ. ಸಿನಿಮಾ ಕಾರ್ಯಕ್ರಮದಲ್ಲಿ ವೈಜಯಂತಿ ಮೂವೀಸ್ ನ ಮಾಲೀಕರಾದಂತಹ ಅಶ್ವಿನಿ ದತ್ (Ashwini Dutt) ಅವರು ಭಾಗಿಯಾಗಿದ್ದರು. ಈ ವೇಳೆ ಅಮಿತಾಬ್ ಬಚ್ಚನ್ ಅವರು ಅಶ್ವಿನಿ ದತ್ ಅವರ ಪಾದಗಳಿಗೆ ನಮಸ್ಕರಿಸುವ ಮೂಲಕ ಅವರಿಗೆ ಗೌರವ ಸೂಚಿಸಿದ್ದು, ಆ ಕ್ಷಣದ ವೀಡಿಯೋ ಮತ್ತು ಫೋಟೋಗಳ ಮೂಲಕ ಎಲ್ಲಾ ಕಡೆ ವೈರಲ್ ಆಗಿದೆ.

ಅಮಿತಾಬ್ ಬಚ್ಚನ್ ಅವರು ಮಾತನಾಡ್ತಾ “ವೈಜಯಂತಿ ಮೂವೀಸ್ ‌‌ನ ಮಾಲಿಕರಾದ ಅಶ್ವಿನಿ ದತ್ ಅವರು ನಾನು ಭೇಟಿಯಾದಂತಹ ಅತ್ಯಂತ ಸರಳ ಮತ್ತು ವಿನಮ್ರ ಮನುಷ್ಯ” ಎನ್ನುವ ಮಾತನ್ನು ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ದಂತ ಕಥೆಯಾಗಿ ಛಾಪನ್ನು ಮೂಡಿಸಿರುವ ಹಿರಿಯ ನಟ ಅಮಿತಾ ಬಚ್ಚನ್ ಅವರು ನಿರ್ಮಾಪಕ ಅಶ್ವಿನಿ ದತ್ ಅವರ ಪಾದ ಮುಟ್ಟಿ ನಮಸ್ಕರಿಸಿದ್ದು, ನಟನ ಸರಳತೆಗೆ ಸಾಕ್ಷಿಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ.

ಕಲ್ಕಿ ಸಿನಿಮಾದಲ್ಲಿ ಅಮಿತಾ ಬಚ್ಚನ್ ಅವರು ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಚ್ಚನ್ ಅವರಿಗೆ ಸಿನಿಮಾದ ಮೊದಲ ಟಿಕೆಟ್ ಅನ್ನ ನೀಡಿ ಗೌರವಿಸಿದ್ದಾರೆ ನಿರ್ಮಾಪಕ ಅಶ್ವಿನಿ ದತ್ ಅವರು. ಮುಂಬೈನಲ್ಲಿ ನಡೆದಂತಹ ಪ್ರಿ ರಿಲೀಸ್ ಕಾರ್ಯಕ್ರಮದ ಫೋಟೋಗಳು ಮತ್ತು ವೀಡಿಯೋಗಳು ಈಗಾಗಲೇ ಸಾಕಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡಿದ್ದಾರೆ. ಈಗ ಎಲ್ಲರ ಗಮನ ಸಿನಿಮಾ ಬಿಡುಗಡೆಯ ಕಡೆಗೆ ಇದೆ.

Leave a Comment