Kannada Serial TRP: ಹೊಸ ಸೀರಿಯಲ್ ಗಳ ಅಬ್ಬರ, ಮೊದಲ ಸ್ಥಾನ ಬಿಡಲ್ಲ ಅಂದ ಹಳೇ ಸೀರಿಯಲ್ ಇಲ್ಲಿದೆ ಟಾಪ್ 5 ಪಟ್ಟಿ

Written by Soma Shekar

Published on:

---Join Our Channel---

Kannada Serial TRP: ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ನೋಡೋದಕ್ಕೆ ಜನ ಥಿಯೇಟರ್ ಗಳ ಕಡೆಗೆ ಮುಖ ಮಾಡ್ತಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.‌ ಅದೇ ವೇಳೆ ಇನ್ನೊಂದು ಕಡೆ ಕಿರುತೆರೆಯಲ್ಲಿ ಪ್ರಸಾರ ಆಗ್ತಾ ಇರೋ ಸೀರಿಯಲ್ ಗಳಲ್ಲಿ ಮೂಡಿ ಬರ್ತಿರುವ ಹೊಸ ಹೊಸ ಟ್ವಿಸ್ಟುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಟಿ ಆರ್ ಪಿ ಯಲ್ಲಿ (Kannada Serial TRP) ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದೆ. ಆದರೂ ಕೆಲವು ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೂ ನೋಡುಗರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಈ ವಾರದ ಟಿಆರ್ಪಿ ಪ್ರಕಾರ ಯಾವ ಸೀರಿಯಲ್ ಗೆ ಯಾವ ಸ್ಥಾನ? ತಿಳಿಯೋಣ.

ಹಿಂದಿನ ವಾರಗಳಂತೆ ಪುಟ್ಟಕ್ಕನ ಮಕ್ಕಳು (Puttakkana Makkalu) ಮತ್ತೊಂದು ಸಲ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಲಕ್ಷ್ಮೀ ನಿವಾಸ ಸೀರಿಯಲ್ ಆರಂಭವಾದಾಗ ಒಂದೆರಡು ವಾರಗಳು ಪುಟ್ಟಕ್ಕನ ಮಕ್ಕಳು ಎರಡನೇ ಸ್ಥಾನ ಪಡೆದುಕೊಂಡಿತ್ತು ಆದರೆ ಮರಳಿ ಅದು ತನ್ನ ಮೊದಲ ಸ್ಥಾನವನ್ನು ಪಡೆದುಕೊಂಡು ಅದೇ ಸ್ಥಾನದಲ್ಲಿ ಮುಂದುವರೆಯುತ್ತಿದೆ. ಸ್ನೇಹ ಐಎಎಸ್ ತಯಾರಿ, ಸಹನಾ ತಿಥಿ ಕಾರ್ಯ ಈ ವಾರದ ಕಥೆಯಲ್ಲಿ ಕಂಡ ಪ್ರಮುಖ ದೃಶ್ಯಗಳಾಗಿತ್ತು.

ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ (Lakshmi Nivasa) ಇದ್ದು, ಪ್ರತಿದಿನ ಒಂದು ಗಂಟೆ ಅವಧಿ ಪ್ರಸಾರವಾಗುವ ಈ ಸೀರಿಯಲ್ ಆರಂಭದಿಂದಲೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ, ಅದೇ ರೀತಿಯ ಮೆಚ್ಚುಗೆಯನ್ನು ಉಳಿಸಿಕೊಂಡಿದೆ. ಕಳೆದ ಕೆಲವು ವಾರಗಳಿಂದಲೂ ನಿರಂತರವಾಗಿ ಎರಡನೇ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದ್ದು ಈ ವಾರವೂ ಅದೇ ಸ್ಥಾನದಲ್ಲಿ ಮುಂದುವರೆದಿದೆ. ಭಾವನಾಗೆ ತಾಳಿ ಕಟ್ಟಿದ ಸಿದ್ಧೇಗೌಡ್ರು, ಊರಿನಲ್ಲಿ ನಡೆದ ಜಾತ್ರೆ ಈ ವಾರ ವಿಶೇಷ ಆಕರ್ಷಣೆಯಾಗಿತ್ತು.

ನಟ ಅಮೋಘ್ ಮತ್ತು ಆಸಿಯಾ ಫಿರ್ದೋಸ್ ಮುಖ್ಯ ಪಾತ್ರಗಳಲ್ಲಿರುವ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಕಳೆದ ವಾರದಂತೆ ಈ ವಾರವೂ ಮೂರನೇ ಸ್ಥಾನದಲ್ಲಿದೆ. ಮಗಳನ್ನು ದ್ವೇಷ ಮಾಡುವ ತಂದೆ, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತ ಸುಬ್ಬು, ಅಪ್ಪನ ಪ್ರೀತಿಗಾಗಿ ಸಾಕಷ್ಟು ಪ್ರಯತ್ನಗಳನ್ನ ಮಾಡುವ ಶ್ರಾವಣಿ, ಈ ಧಾರವಾಹಿಯ ಮುಖ್ಯ ಕಥಾ ಹಂದರವಾಗಿದ್ದು ಪ್ರೇಕ್ಷಕರ ಪ್ರೀತಿಯನ್ನು ಗಳಿಸಿಕೊಂಡಿದೆ.

ಕಳೆದ ವಾರ ಐದನೇ ಸ್ಥಾನದಲ್ಲಿದ್ದ ಅಮೃತಧಾರೆ (Amruthadhaare) ಈ ವಾರ ನಾಲ್ಕನೇ ಸ್ಥಾನಕ್ಕೆ ಬಂದಿದೆ. ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಪ್ರಮುಖ ಪಾತ್ರಗಳಲ್ಲಿರುವ ಈ ಸೀರಿಯಲ್ ನ‌ ಸ್ಥಾನ ಆಗಾಗ ಬದಲಾಗುತ್ತಲೇ ಇದೆ. ಈ ವಾರ ಗೌತಮ್ ಆಫೀಸ್ ನಲ್ಲಿ ಆದಂತಹ ವಂಚನೆ, ಕೆಂಚನ ಕರೆ ಸ್ವೀಕರಿಸಿ ಸಾಕಷ್ಟು ವಿಷಯ ತಿಳಿದ ಭೂಮಿಕಾ, ಜೈದೇವ್ ಆಟಗಳು ನೋಡುಗರ ಗಮನ ಸೆಳೆದಿದೆ.‌

ಗಗನ್ ಚಿನ್ನಪ್ಪ ಮತ್ತು ವೈಷ್ಣವಿ ಗೌಡ ಮುಖ್ಯ ಪಾತ್ರಗಳಲ್ಲಿರುವ ಸೀತಾ ರಾಮ (SeethaRama) ಸೀರಿಯಲ್ ಈ ವಾರ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಸೀರಿಯಲ್ ನಲ್ಲಿ ಪ್ರಸ್ತುತ ಸೀತಾ ಮತ್ತು ರಾಮ್ ಮದುವೆಗೆ ಅದ್ದೂರಿಯಾಗಿ ಸಿದ್ಧತೆಗಳು ನಡೆಯುತ್ತಿದ್ದು, ಮದುವೆಗೆ ಮುಂಚೆ ಫೋಟೋ ಶೂಟ್ ಸಂಚಿಕೆಗಳು ಎಲ್ಲರ ಗಮನ ಸೆಳೆದಿದೆ. ಇನ್ನು ಮುಂದಿನ ಕೆಲವು ದಿನಗಳ ಕಾಲ ಮದುವೆ ಸಂಚಿಕೆಗಳು ಇರುತ್ತವೆ ಅನ್ನೋದನ್ನ ಊಹೆ ಮಾಡಬಹುದಾಗಿದೆ.

Leave a Comment