Chaithra Achar: ಕನ್ನಡದ ಆಲಿಯಾ ಭಟ್ ಖ್ಯಾತಿಯ ನಟಿ ಈಗ ತಮಿಳಿನಲ್ಲಿ ಮಿಂಚಲು ಸಜ್ಜು, ಫ್ಯಾನ್ಸ್ ಖುಷಿಯೋ ಖುಷಿ

Written by Soma Shekar

Published on:

---Join Our Channel---

Chaithra Achar : ಇತ್ತೀಚಿನ ದಿನಗಳಲ್ಲಿ ಟೋಬಿ ಸಿನಿಮಾದ ನಟಿ ಚೈತ್ರ ಆಚಾರ್ (Chaithra Achar) ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಶೂಟ್ ಗಳ ವಿಷಯವಾಗಿ ಸಾಕಷ್ಟು ಸದ್ದು ಮತ್ತು ಸುದ್ದಿಯಾಗುತ್ತಿದ್ದಾರೆ. ಹಾಟ್ ಮತ್ತು ಬೋಲ್ಡ್ ಫೋಟೋ ಶೂಟ್ ಗಳ ಮೂಲಕ ಬಾಲಿವುಡ್ ನಟಿಯರಿಗೆ ನಾವೇನು ಕಮ್ಮಿ ಇಲ್ಲ ಎನ್ನುವಂತೆ ವಿನೂತನ ಸ್ಟೈಲ್ ನಲ್ಲಿ ಮಿಂಚುತ್ತಾ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ ನಟಿ ಚೈತ್ರ ಆಚಾರ್.

ಚೈತ್ರ ಆಚಾರ್ ಅವರ ಕೆಲವೊಂದು ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ನಟಿಯನ್ನು ಕನ್ನಡದ ಆಲಿಯಾ ಭಟ್ ಅಂತ ಕೂಡಾ ಕರೆದಿದ್ದಾರೆ ಅನ್ನೋದು ನಿಜ. ಈಗ ಈ ನಟಿ ತಮ್ಮ ಅಭಿಮಾನಿಗಳಿಗೊಂದು ಖುಷಿಯ ವಿಚಾರವೊಂದನ್ನು ನೀಡಿದ್ದಾರೆ. ಹಾಗಾದರೆ ಏನದು ಹೊಸ ಸುದ್ದಿ ಅನ್ನೋದನ್ನ ತಿಳಿಯೋಣ ಬನ್ನಿ. ನಟಿ ಚೈತ್ರ ಆಚಾರ್ ಅವರು ರಾಜ್ ಬಿ ಶೆಟ್ಟಿ (Raj B Shetty) ಜೊತೆಯಲ್ಲಿ ಟೋಬಿ ಯಲ್ಲಿ ನಟಿಸಿ ಹೆಸರನ್ನು ಪಡೆದರು.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರ ಜೊತೆಯಲ್ಲಿ ಸಪ್ತಸಾಗರದ ಆಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ನಟಿಸಿದ್ದ ಚೈತ್ರ ಅವರು ಇನ್ನಷ್ಟು ಜನಪ್ರಿಯತೆ ಪಡೆದಿದ್ದು ಮಾತ್ರವೇ ಅಲ್ಲದೇ ಇವರ ನಟನೆಗೆ ಸಾಕಷ್ಟು ಮೆಚ್ಚುಗೆಗಳು ಕೂಡಾ ವ್ಯಕ್ತವಾಯಿತು. ಸೋಶಿಯಲ್ ಮೀಡಿಯಾ ಗಳಲ್ಲಿ ನಟಿಯನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.‌

ಈಗ ಇವೆಲ್ಲವುಗಳ ಬೆನ್ನಲ್ಲೇ ಚೈತ್ರ ಆಚಾರ್ ಅವರು ತಮಿಳಿನಲ್ಲಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಸಿನಿಮಾದ ಕೆಲಸಗಳು ನಡೆಯುತ್ತಿದೆ ಎಂದು ತಿಳಿದುಬಂದಿದೆ. ತಮಿಳಿನಲ್ಲಿ ಯಾವ ಬ್ಯಾನರ್ ನಲ್ಲಿ ಯಾವ ನಟನ ಜೊತೆಗೆ ಚೈತ್ರಾ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರಗಳಿನ್ನೂ ಹೊರಗೆ ಬಂದಿಲ್ಲ. ಶೀಘ್ರದಲ್ಲೇ ನಿರ್ಮಾಣ ಸಂಸ್ಥೆಯು ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

Leave a Comment