Coolie Movie: ತಮಿಳಿನ ಜನಪ್ರಿಯ ನಿರ್ದೇಶಕ ಲೊಕೇಶ್ ಕನಗರಾನ್ (Lokesh Kanagaraj) ಮತ್ತು ಸೂಪರ್ ಸ್ಟಾರ್ ರಜನೀಕಾಂತ್ (Rajanikanth) ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಸಿನಿಮಾ ʼಕೂಲಿʼ (Coolie Movie) ಘೋಷಣೆಯಾದ ನಂತರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಮೂಡಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟೈಟಲ್ ಮತ್ತು ಟೀಸರ್ ನಿಂದ ಸಿನಿಮಾದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಅಲ್ಲದೇ ರಜನೀಕಾಂತ್ ಈ ಸಿನಿಮಾಕ್ಕೆ ಪಡೆಯುತ್ತಿರುವ ಸಂಭಾವನೆಯ ವಿಚಾರ ವೈರಲ್ ಆಗಿದ್ದು, ನಟ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ʼಕೂಲಿʼ ಸಿನಿಮಾದ ಟೀಸರ್ ಅನ್ನು ನೋಡಿದ ನಂತರ ರಜನೀಕಾಂತ್ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆದರೆ ಈಗ ಖುಷಿಯ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಪಿ ರೈಟ್ಸ್ ಸಂಕಷ್ಟವು ಕಾಡಿದೆ. ಸಂಗೀತ ಲೋಕದ ದಿಗ್ಗಜರಾದ ಇಳಯರಾಜ ಅವರು ಕೂಲಿ ಸಿನಿಮಾ ತಂಡಕ್ಕೆ ಕಾಪಿ ರೈಟ್ಸ್ ನೋಟೀಸ್ ಅನ್ನು ನೀಡಿದ್ದಾರೆ. ಹಾಗಾದರೆ ಏನಿದು ವಿವಾದ ಅನ್ನೋದನ್ನ ತಿಳಿಯೋಣ ಬನ್ನಿ.
ಬಿಡುಗಡೆ ಆಗಿರುವ ʼಕೂಲಿʼ ಟೈಟಲ್ ಟೀಸರ್ ನಲ್ಲಿ ರಜನೀಕಾಂತ್ ಅವರು ನಟಿಸಿರುವಂತಹ 1983 ರಲ್ಲಿ ತೆರೆಕಂಡಿದ್ದಂತಹ ʼತಂಗ ಮಗನ್ʼ ಸಿನಿಮಾದ ಜನಪ್ರಿಯ ಹಾಡು ‘ವಾ ವಾ ಪಕ್ಕಂ ವಾ’ ಹಾಡನ್ನು ಬಳಸಿಕೊಂಡಿದ್ದಾರೆ. ಈ ಹಾಡನ್ನು ಅಂದು ಆ ಸಿನಿಮಾಕ್ಕಾಗಿ ಇಳಯರಾಜ (Ilayaraja) ಅವರು ಸಂಯೋಜನೆ ಮಾಡಿದ್ದರು. ಆದ್ದರಿಂದ ಕಾನೂನಿನ ಪ್ರಕಾರ ಇಳಯರಾಜ ಅವರು ಆ ಹಾಡಿನ ಮಾಲೀಕರಾಗಿರದ್ದಾರೆ.
ಈಗ ಕೂಲಿ ಸಿನಿಮಾ ಟೈಟಲ್ ಟೀಸರ್ ನ ಬಿಡುಗಡೆಗಾಗಿ, ಇಳಯರಾಜ ಅವರ ಅನುಮತಿಯನ್ನು ಪಡೆಯದೇ ಅವರ ಹಾಡನ್ನು ಬಳಸಿಕೊಂಡಿದ್ದಾರೆ. ಔಪಚಾರಿಕವಾಗಿ ಅವರಿಂದ ಅನಮತಿಯನ್ನು ಪಡೆಯುವ ಗೋಜಿಗೆ ಹೋಗಿಲ್ಲ. ಆದ್ದರಿಂದಲೇ ಈಗ 1957 ರ ಹಕ್ಕುಸ್ವಾಮ್ಯ ಕಾಯ್ದೆಯಡಿಯಲ್ಲಿ ಇದನ್ನು ಅಪರಾಧ ಎಂದು ಪರಿಗಣಿಲಾಗಿದೆ. ಇದೇ ಕಾರಣದಿಂದ ಲೀಗಲ್ ನೋಟಿಸ್ ಜಾರಿಯಾಗಿದೆ.