Priyamani: ಬಾಲಿವುಡ್ ಕಲ್ಚರ್ (Bollywood) ಕುರಿತಾಗಿ ಆಗಾಗ ಕೆಲವೊಂದು ವಿಚಾರಗಳು ಮುನ್ನಲೆಗೆ ಬಂದು ಒಂದಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತವೆ. ಇಲ್ಲಿ ಬಡಾ ಬಡಾ ಸ್ಟಾರ್ ಗಳು ತನ್ನ ಕೋ ಸ್ಟಾರ್ ಗಳನ್ನು ಹಲವು ಸಂದರ್ಭಗಳಲ್ಲಿ ಕೆಟ್ಟದಾಗಿ ನಡೆಸಿಕೊಳ್ಳೋದು ಸಾಮಾನ್ಯವಾದ ವಿಚಾರವಾಗಿದೆ. ಸಿನಿಮಾ ಕಾರ್ಯಕ್ರಮಗಳಲ್ಲಿ, ಸಿನಿಮಾ ಪ್ರಮೋಷನ್ ವೇಳೆಯಲ್ಲಿ, ನಟಿಯರನ್ನು ಎತ್ತಿಕೊಳ್ಳುವುದು, ಅಪ್ಪಿಕೊಂಡು ಮುತ್ತಿಡುವುದು, ಮುದ್ಧಾಡುವುದು ನಡೆಯುತ್ತಲೇ ಇರುತ್ತದೆ. ಇದೆಲ್ಲಾ ಕಾರ್ಪೊರೇಟ್ ಕಲ್ಚರ್ ಎನ್ನುವಂತೆ, ಅದೆಲ್ಲಾ ಸಾಮಾನ್ಯ ಎನ್ನುವ ಹಾಗೆ ನಡೆದುಕೊಳ್ಳುತ್ತಾರೆ ಸ್ಟಾರ್ ಗಳು.
ಈಗ ಇದೇ ವಿಚಾರವಾಗಿ ಮತ್ತೊಮ್ಮೆ ಒಂದಷ್ಟು ವಿಚಾರಗಳು ಹರಿದಾಡಿದೆ. ಹಿರಿಯ ನಟಿ , ದಿವಂಗತ ಶ್ರೀದೇವಿ ಅವರ ಪತಿ, ಚಿತ್ರ ನಿರ್ಮಾಪಕ ಬೋನಿ ಕಪೂರ್ (Boney Kapoor) ಅವರು ಜನಪ್ರಿಯ ನಟಿ ಪ್ರಿಯಾಮಣಿ (Priyamani) ಅವರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹಾಗಾದರೆ ಏನಿದು ಘಟನೆ? ತಿಳಿಯೋಣ ಬನ್ನಿ.
ಬೋನಿ ಕಪೂರ್ ಅವರು ಸಿನಿಮಾ ನಿರ್ಮಾಪಕನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರನ್ನ ಮಾಡಿರುವ ನಿರ್ದೇಶಕನಾಗಿದ್ದಾರೆ. ಆದರೆ ಇವರು ಕೆಲವು ಸಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿಚಿತ್ರ ವರ್ತನೆಯಿಂದಾಗಿಯೇ ಟ್ರೋಲ್ ಆಗೋದು ಸಹಾ ಸಾಮಾನ್ಯವಾದ ವಿಚಾರವಾಗಿದೆ. ಈಗ ನಟಿ ಪ್ರಿಯಾಮಣಿ ಜೊತೆಗೆ ಬೋನಿ ಕಪೂರ್ ವರ್ತನೆಯನ್ನು ನೋಡಿ ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ಏಪ್ರಿಲ್ 9, 2024 ರಂದು, ಬೋನಿ ಕಪೂರ್ ತಮ್ಮ ನಿರ್ಮಾಣದ ಹೊಸ ಸಿನಿಮಾ ಮೈದಾನ್ ನ (Maidan Movie) ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ಒಂದು ವೀಡಿಯೋ ತುಣುಕು ವೈರಲ್ ಆಗಿದ್ದು, ಇದರಲ್ಲಿ ಬೋನಿ ಕಪೂರ್ ನಟಿಯ ಸೊಂಟವನ್ನು ಹಿಡಿದು, ಅನಂತರ ನಟಿಯ ಭುಜದ ಮೇಲೆ ಕೈ ಹಾಕಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಆದರೆ ಈ ವೇಳೆ ನಟಿ ಪ್ರಿಯಾಮಣಿ ತುಂಬಾ ಕಂಫರ್ಟೆಬಲ್ ಆಗಿದ್ದಂತೆ ಕಂಡಿದೆ.
ನಟಿ ಕಂಫೋರ್ಟಬಲ್ ಆಗಿದ್ದಾರೆಯಾದರೂ ಇದನ್ನ ನೋಡಿದ ನೆಟ್ಟಿಗರು ಸಿಟ್ಟಾಗಿದ್ದಾರೆ. ಬೋನಿ ಕಪೂರ್ ಅವರನ್ನು ಟೀಕಿಸಿ, ಛೀಮಾರಿ ಹಾಕಿದ್ದಾರೆ. ನೆಟ್ಟಿಗರೊಬ್ಬರಯ ಕಾಮೆಂಟ್ ಮಾಡುತ್ತಾ, ಪ್ರಿಯಾಮಣಿಯಂತಹ ಪ್ರತಿಭಾವಂತ ನಟಿ ಇಂತಹ ಅಸಹ್ಯಕರ ನಡವಳಿಕೆಯನ್ನು ಏಕೆ ಸಹಿಸಿಕೊಳ್ಳಬೇಕು ಎಂದಿದ್ದಾರೆ. ಮತ್ತೊಬ್ಬರು ಯುವ ನಟಿಯರು ಮತ್ತು ಹೊಸ ನಟಿಯರೊಂದಿಗೆ ಅವರು ಹೀಗೆ ವರ್ತಿಸ್ತಾರೆ ಅಂತ ಊಹೆ ಮಾಡೋಕೂ ಸಾಧ್ಯ ಇಲ್ಲ ಎಂದಿದ್ದಾರೆ.
ಅಲ್ಲದೇ ಇನ್ನೂ ಕೆಲವರು, ಇಬ್ಬರು ಹೆಣ್ಣು ಮಕ್ಕಳಿರುವ ವ್ಯಕ್ತಿಯಾಗಿ ಬೇರೆ ನಟಿಯರ ಜೊತೆಗೆ ಈ ರೀತಿ ವರ್ತಿಸುವುದು ಸರಿಯಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಆದರೆ ಇದೇ ವೇಳೆ ಕೆಲವರು ಸಿನಿಮಾ ಫೀಲ್ಡ್ ನಲ್ಲಿ ಇದೆಲ್ಲಾ ಸಾಮಾನ್ಯವಾದ ವಿಚಾರ, ನಟಿಗೇ ತೊಂದರೆ ಇಲ್ಲ ಅಂದ್ಮೇಲೆ ಅವರ ಬಗ್ಗೆ ಟೀಕೆ ಮಾಡುವ ಹಕ್ಕು ನಮಗಿಲ್ಲ ಎಂದು ವಿಚಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.