Shravani Subramanya: ಅಪ್ಪನ ಮರ್ಯಾದೆ ಉಳಿಸೋಕೆ ಬಂದೇ ಬಿಟ್ಲು ಶ್ರಾವಣಿ, ಗಪ್ ಚುಪ್ ಆದ ರಿಪೋರ್ಟರ್

Written by Soma Shekar

Published on:

---Join Our Channel---

Shravani Subramanya: ಕನ್ನಡ ಕಿರುತೆರೆಯಲ್ಲಿ ಪ್ರಸಾರವನ್ನು ಆರಂಭಿಸಿದ ಕೆಲವೇ ವಾರಗಳಲ್ಲಿ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಧಾರಾವಾಹಿ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಾ, ಕುತೂಹಲವನ್ನು ಕೆರಳಿಸುತ್ತಿದೆ. ನಿನ್ನೆಯ ಎಪಿಸೋಡ್ (June 19) ಪ್ರೇಕ್ಷಕರಿಗೆ ಖಂಡಿಯ ಥ್ರಿಲ್ಲಿಂಗ್ ಅನುಭವ ನೀಡಿದ. ಪ್ರೆಸ್ ಕಾನ್ಫರೆನ್ಸ್ ನಲ್ಲಿ ಅಪ್ಪನಿಗೆ ಆಗ್ತಿದ್ದ ಅವಮಾನವನ್ನು ತಡೆಯುವುದಕ್ಕೆ ನೇರವಾಗಿ ಶ್ರಾವಣಿ ಅಲ್ಲಿಗೆ ಬಂದು ತಲುಪುವ ಮೂಲಕ ಎಲ್ಲರಿಗೂ ಶಾ ಕ್ ನೀಡಿದ್ದಾಳೆ.

ಕಾನ್ಫರೆನ್ಸ್ ನಲ್ಲಿ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಆಗಿರುವ ಉತ್ತಮ ಕೆಲಸಗಳನ್ನು ವೀರೇಂದ್ರ ಸರ್ದೇಸಾಯಿ (Veerendra) ವಿವರಿಸುವ ಸಂದರ್ಭದಲ್ಲಿ, ಮದನ್ ಸೆಟ್ ಮಾಡಿ ಕಳಿಸಿರೋ ವ್ಯಕ್ತಿ ರಿಪೋರ್ಟರ್ ಅಂತ ಹೇಳ್ಕೊಂಡು ಕಾನ್ಫರೆನ್ಸ್ ನಲ್ಲಿ ಹಾಜರಾಗಿದ್ದಾನೆ. ಅಲ್ಲಿ ಶಿಕ್ಷಣದ ಕುರಿತಾಗಿ ಪ್ರಶ್ನೆಗಳನ್ನು ಕೇಳದೇ ವೀರೇಂದ್ರ ಅವರ ಪರ್ಸನಲ್ ಲೈಫ್ ಬಗ್ಗೆ ಪ್ರಶ್ನೆಗಳನ್ನು ಮಾಡಿದ್ದಾನೆ.

ರಾಜ್ಯದ ಮಕ್ಕಳ ಶಿಕ್ಷಣಕ್ಕೆ ಇಷ್ಟೆಲ್ಲ ಮಾಡೋ ನೀವು ನಿಮ್ಮ ಮಗಳಾಗಿ ಏನು ಮಾಡಿಲ್ವಾ, ನಿಮ್ಮ ಮಗಳು ಫೇಲ್ ಆಗೋದಕ್ಕೆ ಏನು ಕಾರಣ ಅಂತೆಲ್ಲಾ ಪ್ರಶ್ನೆಗಳನ್ನು ಕೇಳ್ತಾನೆ. ಅಪ್ಪ ಮಗಳ ಸಂಬಂಧ ಸರಿಯಾಗಿಲ್ಲ, ಒಬ್ಬರಿಗೊಬ್ಬರು ಮಾತಾಡೋದಿಲ್ಲ, ಇಬ್ಬರ ನಡುವೆ ದ್ವೇಷ ಇದೆ ಅಂತೆಲ್ಲಾ ಹೇಳಿ ನೈತಿಕ ಹೊಣೆಗಾರಿಕೆ ಹೊತ್ತು ನೀವು ನಿಮ್ಮ ಸ್ಥಾನದಿಂದ ಕೆಳಗಿಳಿದು ಬಿಡಬೇಕು ಎಂದಿದ್ದಾನೆ.

ಮನೆಯಲ್ಲಿ ವಿಜಯಾಂಬಿಕೆ ಮತ್ತು ಮದನ್ ಈ ದೃಶ್ಯಗಳನ್ನು ನೋಡಿ ಸಿಕ್ಕಾಪಟ್ಟೆ ಖುಷಿಪಡುತ್ತಿದ್ದಾರೆ. ಹೀಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ವೀರೇಂದ್ರಾಗೆ ತೀವ್ರ ಮುಜುಗರವನ್ನು ಉಂಟುಮಾಡುವಾಗ್ಲೇ ಅಲ್ಲಿಗೆ ಬರುವ ಶ್ರಾವಣಿ ರಿಪೋರ್ಟರ್ ಹೇಳಿದ ಪ್ರಶ್ನೆಗಳಿಗೆ ತಕ್ಕ ಪ್ರತಿಕ್ರಿಯೆ ಕೊಡ್ತಾಳೆ, ರಿಪೋರ್ಟರ್ ಪೆಚ್ಚು ಮೋರೆ ಹಾಕ್ಕೊಂಡು ಮೌನವಾಗಿ ಕೂತ್ಕೊಳ್ತಾನೆ. ಶ್ರಾವಣಿ ಮಾತಾಡ್ತಾ ಅಪ್ಪ ಎಂದರೆ ಅಸಾಮಾನ್ಯ ಅಪ್ಪನ ಬಗ್ಗೆ ಹೇಳುವುದಕ್ಕೆ ಮಾತುಗಳಿಲ್ಲ.

ಅವರು ನನ್ನ ಸ್ನೇಹಿತ. ಅಪ್ಪನಿಂದರೆ ಆಕಾಶ ಎಂದೆಲ್ಲಾ ಭಾವಕ ವಿಚಾರಗಳನ್ನು ಹಂಚಿಕೊಂಡು, ಇವತ್ತು ಫಾದರ್ಸ್ ಡೇ ಆಗಿರೋದ್ರಿಂದ ಅಪ್ಪನಿಗೋಸ್ಕರ ನಾನೇ ವಿಶೇಷವಾಗಿ ಅಡುಗೆ ಮಾಡಿಕೊಂಡು ತಂದಿದ್ದೇನೆ ಅಂತ ಹೇಳಿ, ಎಲ್ಲರ ಮುಂದೆ ಅದನ್ನ ವೀರೇಂದ್ರನಿಗೆ ತಿನ್ನಿಸಿ ಅವನನ್ನ ಅಪ್ಪಿಕೊಂಡು ಫಾದರ್ಸ್ ಡೇ ವಿಶ್ ಮಾಡ್ತಾಳೆ.

ಹೀಗೆ ಸಾರ್ವಜನಿಕವಾಗಿ ತನಗೆ ಎದುರಾಗಿದ್ದ ಮುಜುಗರವನ್ನು, ಎಲ್ಲರ ಮುಂದೆ ಹೋಗ್ತಿದ್ದ ತನ್ನ ಮಾನವನ್ನ, ಮರ್ಯಾದೆಯನ್ನ ಸಕಾಲಕ್ಕೆ ಅಲ್ಲಿಗೆ ಬಂದು ಕಾಪಾಡಿದ ಶ್ರಾವಣಿ ಬಗ್ಗೆ ವಿರೇಂದ್ರ ಹೊಂದಿರುವ ತನ್ನ ನಿಲುವನ್ನ ಇನ್ನಾದ್ರೂ ಬದಲಾಯಿಸಿಕೊಳ್ತಾನಾ ಅನ್ನೋದನ್ನ ಈಗ ಕಾದು ನೋಡಬೇಕಾಗಿದೆ.

Leave a Comment