Trisha: ಒಂದೇ ಸಿನಿಮಾದಲ್ಲಿ ತ್ರಿಶಾ ಎದುರು ರಶ್ಮಿಕಾ; ಸೀನಿಯರ್, ಜೂನಿಯರ್ ನಡ್ವೆ ಗ್ಲಾಮರ್ ಯುದ್ಧಕ್ಕೆ ವೇದಿಕೆ ಸಜ್ಜು

Written by Soma Shekar

Published on:

---Join Our Channel---

Trisha: ಬರೋಬ್ಬರಿ 14 ವರ್ಷಗಳ ನಂತರ ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ತ್ರಿಷಾ ಕೃಷ್ಣನ್ (Trisha) ಮತ್ತೊಮ್ಮೆ ಬಾಲಿವುಡ್ ಕಡೆಗೆ ಮುಖ ಮಾಡಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿರುವ ತ್ರಿಷಾ ಇದೀಗ ಬಿ ಟೌನ್ ಅಂಗಳಕ್ಕೆ ಭರ್ಜರಿ ಎಂಟ್ರಿಯನ್ನ ಕೊಡ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅವರ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಎಂಟ್ರಿ ಯನ್ನು ಕೊಡುತ್ತಿದ್ದಾರೆ ತ್ರಿಷಾ ಅನ್ನೋ ವಿಷಯ ಕೇಳಿ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

2010ರಲ್ಲಿ ಬಾಲಿವುಡ್ ನಲ್ಲಿ ಬಿಡುಗಡೆಯಾದ ಕಟ್ಟಾ ಮೀಟಾ (Katta Meetha) ಸಿನಿಮಾದಲ್ಲಿ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆಗೆ ತ್ರಿಷಾ ಕೃಷ್ಣನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಯಶಸ್ಸು ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು. ಆ ಒಂದು ಸಿನಿಮಾದ ನಂತರ ತ್ರಿಷಾ ಮತ್ತೆ ಬಾಲಿವುಡ್ ಕಡೆಗೆ ತಿರುಗಿ ನೋಡಿರಲಿಲ್ಲ. ಈಗ ವರ್ಷಗಳ ನಂತರ ಸ್ಟಾರ್ ನಟನ ಸಿನಿಮಾದಲ್ಲಿ ಆ ನಟನಿಗೆ ಜೋಡಿಯಾಗುವ ಮೂಲಕ ಬಾಲಿವುಡ್ ಗೆ ಮತ್ತೊಮ್ಮೆ ಎಂಟ್ರಿ ಕೊಡುತ್ತಿದ್ದಾರೆ ತ್ರಿಷಾ.

ಸಲ್ಮಾನ್ ಖಾನ್ ನಟನೆಯ ಸಿಖಂದರ್ (Sikandar) ಸಿನಿಮಾ ಘೋಷಣೆಯಾಗಿದ್ದು ಇದರಲ್ಲಿ ದಕ್ಷಿಣದ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಎಂದು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಅದರ ಬೆನ್ನಲ್ಲೇ ಸಿಕಂದರ್ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿ ಇದ್ದು, ಅದಕ್ಕಾಗಿ ತ್ರಿಷಾ ಈ ಸಿನಿಮಾಕ್ಕೆ ಎಂಟ್ರಿ ಅನ್ನ ಕೊಡುತ್ತಿದ್ದಾರೆ ಅಂತ ಹೇಳಲಾಗಿದ್ದು ಈ ಸುದ್ದಿ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಅಧಿಕೃತ ಘೋಷಣೆಯೊಂದು ಬಾಕಿ ಇದೆ.

ದಕ್ಷಿಣ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಸೀನಿಯರ್ ನಟಿಯರಾದ ತ್ರಿಷಾ ಮತ್ತು ನಯನತಾರಾ ಸಿಕ್ಕಾಪಟ್ಟೆ ಸದ್ದನ್ನ ಮಾಡುತ್ತಿದ್ದಾರೆ. ತ್ರಿಶಾ ಅವರ ಕೈಯಲ್ಲಿ ಪ್ರಸ್ತುತ ಐದು ಸಿನಿಮಾಗಳಿವೆ. ದಕ್ಷಿಣದ ಸ್ಟಾರ್ ಗಳಾದ ಮೆಗಾಸ್ಟಾರ್ ಚಿರಂಜೀವಿ, ಹಿರಿಯ ನಟ ಕಮಲಹಾಸನ್ ಮತ್ತು ಅಜಿತ್ ಅವರ ಹೊಸ ಸಿನಿಮಾದಲ್ಲಿ ಕೂಡಾ ತ್ರಿಷಾ ನಾಯಕಿ ಎಂದು ಹೇಳಲಾಗಿದ್ದು, ಇದಲ್ಲದೇ ನಟಿ ಮಲಯಾಳಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Leave a Comment