Tollywood Actor: ತೆಲುಗು ಸಿನಿಮಾ ರಂಗದ ಖ್ಯಾತ ನಟ (Tollywood Actor), ಹಿರಿಯ ಹಾಸ್ಯ ನಟ ಆಲಿ (Comedian Ali) ಅವರು ಒಂದು ಸಂಚಲನ ನಿರ್ಧಾರವನ್ನು ಕೈಗೊಂಡಿದ್ದು, ನಟ ತನ್ನ ನಿರ್ಧಾರದ ಕುರಿತಾಗಿ ಮಾತನಾಡಿರುವ ವೀಡಿಯೋ ಈಗ ಮಾದ್ಯಮಗಳಲ್ಲಿ ಹರಿದಾಡುತ್ತಿದೆ. ನಟ ಆಲಿ ವೈ ಎಸ್ ಆರ್ ಸಿ ಪಿ (YCP) ಪಕ್ಷಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಆ ಪಕ್ಷದ ಅಧ್ಯಕ್ಷರಾದ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
ನಟ ಆಲಿ 2019 ರ ಚುನಾವಣೆಗೂ ಮೊದಲು ವೈ ಎಸ್ ಆರ್ ಸಿ ಪಿ ಗೆ ಸೇರ್ಪಡೆಯಾಗಿದ್ದರು. ನಂತರ ವಿಧಾನ ಸಭಾ ಚುನಾವಣೆಯ ವೇಳೆ ಅವರು ಪಕ್ಷದ ಪರವಾಗಿ ಪ್ರಚಾರವನ್ನು ಮಾಡಿದ್ದರು. ಪಕ್ಷವು ಅಧಿಕಾರಕ್ಕೆ ಬಂದ ಮೇಲೆ 2022 ರಲ್ಲಿ ಆಲಿ ಅವರನ್ನು ಆಂಧ್ರಪ್ರದೇಶದ ಸರ್ಕಾರದ ಎಲೆಕ್ಟ್ರಾನಿಕ್ ಮಾದ್ಯಮದ ಸಲಹೆಗಾರನನ್ನಾಗಿ ನೇಮಕ ಮಾಡಿತ್ತು.
2024 ರ ಚುನಾವಣೆ ನಂತರ ಅವರು ತಮಗೆ ಶಾಸಕ ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡದ ಕಾರಣ ನಟನಿಗೆ ಭಾರೀ ನಿರಾಸೆ ಎದುರಾಗಿತ್ತು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರ ಈ ಬಾರಿ ಚುನಾವಣೆ ವೇಳೆಯಲ್ಲಿ ಪಾರ್ಟಿ ಪರವಾಗಿ ಪ್ರಚಾರಕ್ಕೂ ನಟ ಆಲಿ ಹೋಗಿರಲಿಲ್ಲ. ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಿನಗಳಲ್ಲಿ ಜನರಿಗೆ ಇನ್ನಷ್ಟು ಸೇವೆ ಮಾಡಲು ರಾಜಕೀಯ ಪ್ರವೇಶ ಮಾಡಿದ್ದಾಗಿ ನಟ ಹೇಳಿದ್ದರು.
ಬಾಲ ನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ನಟ ಆಲಿ ಅವರು ಹಾಸ್ಯನಟನಾಗಿ ದೊಡ್ಡ ಹೆಸರನ್ನು ಮಾಡಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಾಯಕನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ನಟ ವೈಸಿಪಿಗೆ ರಾಜೀನಾಮೆ ನೀಡಿದ ನಂತರ ನಾವು ಯಾವುದೇ ಪಾರ್ಟಿ ವ್ಯಕ್ತಿಯಲ್ಲ, ಇನ್ಮುಂದೆ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ, ನಟನೆಗೆ ಮಾತ್ರ ಗಮನ ನೀಡುತ್ತೇನೆಂದು ಹೇಳಿದ್ದಾರೆ.