Cinema News: ಸಿನಿಮಾ ಇಂಡಸ್ಟ್ರಿಯಲ್ಲಿ ಕಾಂಟ್ರವರ್ಸಿ ಅನ್ನೋದು ತೀರಾ ಸಾಮಾನ್ಯವಾದ ವಿಚಾರವಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಸಹಾ ಮನೋಭಾವಗಳಿಗೆ ಧಕ್ಕೆಯುಂಟಾಗಿದೆ ಎಂದು ಹೇಳುತ್ತಾ ದೊಡ್ಡ ಮಟ್ಟದಲ್ಲಿ ಚರ್ಚೆಗಳು, ವಿವಾದಗಳು ನಡೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಲೇ ಇದೆ. ಇಂತಹ ವಿವಾದಗಳು ತೊಂಬತ್ತರ ದಶಕದಲ್ಲೂ ಇತ್ತು ಅನ್ನೋದು ಕೂಡಾ ಸತ್ಯ. ಸಿನಿಮಾಗಳಲ್ಲಿನ (Cinema News) ಐಟಂ ಸಾಂಗ್ ಗಳು ಸಹಾ ವಿವಾದಗಳಿಗೆ ಕಾರಣವಾಗಿದೆ.
ಕೆಲವೊಂದು ಸಿನಿಮಾಗಳಲ್ಲಿ ಐಟಂ ಸಾಂಗ್ ಗಳೇ ಸಿನಿಮಾದ ಪ್ರಮುಖ ಆಕರ್ಷಣೆ ಆಗಿದ್ದವು. ಹಾಗೆ ತೊಂಬತ್ತರ ದಶಕದಲ್ಲಿ ಒಂದು ಐಟಂ ಸಾಂಗ್ ಅನ್ನು ಡಬಲ್ ಮೀನಿಂಗ್ ಸಾಂಗ್ ಎಂದು ಹೇಳಿದ್ದು ಮಾತ್ರವೇ ಅಲ್ಲದೇ ಆ ಹಾಡನ್ನು ಬ್ಯಾನ್ ಮಾಡಲಾಗಿತ್ತು. ಬಾಲಿವುಡ್ ನ (Bollywood) ಸ್ಟಾರ್ ನಟ ಸಂಜಯ್ ದತ್ ಮತ್ತು ನಟಿ ಮಾಧುರಿ ದೀಕ್ಷಿತ್ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬ್ಯಾನ್ ಎನ್ನಲಾದ ಅದೇ ಹಾಡು ಅಂದು ಇಡೀ ದೇಶದಲ್ಲೊಂದು ಸಂಚಲನ ಸೃಷ್ಟಿಸಿತ್ತು.
1993 ರಲ್ಲಿ ಬಿಡುಗಡೆಯಾದ ಖಳ್ ನಾಯಕ್ (Khalnayak) ಸಿನಿಮಾದ ದೊಡ್ಡ ಗೆಲುವನ್ನು ಪಡೆದುಕೊಂಡ ಸಿನಿಮಾ ಆಗಿತ್ತು. ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಹೆಸರು ಮಾಡಿತ್ತು. ಈ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ (Madhuri Dixit) ಅವರ ಚೋಲಿ ಕೇ ಪೀಚೆ ಕ್ಯಾ ಹೇ ಹಾಡು ಅಂದು ಬಹು ಜನಪ್ರಿಯ ಐಟಂ ಸಾಂಗ್ ಆಗಿ ಸದ್ದು ಮಾಡಿತ್ತು. ಈ ಹಾಡು ಹೊಸ ಟ್ರೆಂಡ್ ಸೆಟ್ ಮಾಡಿದ್ದಲದ್ದೇ ಈ ಹಾಡನ್ನು ಕೇಳೋದಕ್ಕಾಗಿಯೇ ಜನರು ಕ್ಯಾಸೆಟ್ ಖರೀದಿ ಮಾಡಿದ ಪರಿಣಾಮ ಕೋಟಿಗಟ್ಟಲೆ ಆಡಿಯೋ ಕ್ಯಾಸೆಟ್ ಗಳು ಮಾರಾಟವಾಗಿದ್ದವು.
ಒಂದೇ ವಾರದಲ್ಲಿ ಒಂದು ಕೋಟಿಗೂ ಅಧಿಕ ಕ್ಯಾಸೆಟ್ ಮಾರಾಟವಾಗಿದ್ದವು. ಮಾಧುರಿ ದೀಕ್ಷಿತ್ ಮತ್ತು ನೀನಾ ಗುಪ್ತಾ ಇಬ್ಬರೂ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಡಬಲ್ ಮೀನಿಂಗ್ ಇದೆ ಎನ್ನುವ ಕಾರಣಕ್ಕೆ ಹಾಡಿನ ಬಗ್ಗೆ ವಿವಾದ ಎದ್ದಿತ್ತು. ಇದರ ಪರಿಣಾಮವಾಗಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ಈ ಹಾಡಿನ ಪ್ರಸಾರವನ್ನು ನಿಷೇಧ ಮಾಡಿದವು.
ಇಷ್ಟೆಲ್ಲಾ ಆದ್ರೂ ಈ ಹಾಡು ಮಾತ್ರ ದೊಡ್ಡ ಟ್ರೆಂಡ್ ಸೃಷ್ಟಿಸಿದ್ದು ಮಾತ್ರವೇ ಅಲ್ಲದೇ ಸೂಪರ್ ಹಿಟ್ ಹಾಡುಗಳ ಸಾಲಿಗೆ ಸೇರ್ಪಡೆಯಾಯಿತು. ಮಾಧುರಿ ದೀಕ್ಷಿತ್ ಅವರು ತಮ್ಮ ಏಕ್ ದೋ ತೀನ್ ಹಾಡಿನ ನಂತರ ಮತ್ತೊಮ್ಮೆ ಈ ಹಾಡಿನಿಂದ ಜನಪ್ರಿಯತೆ ಪಡೆದುಕೊಂಡರು. ಇತ್ತೀಚಿಗೆ ತಬು, ಕರೀನಾ ಕಪೂರ್ ಮತ್ತು ಕೃತಿ ಸೆನೋನ್ ನಟಿಸಿರುವ ದಿ ಕ್ರೂ ಸಿನಿಮಾದಲ್ಲಿ ಈ ಹಾಡನ್ನು ರಿಮೇಕ್ ಮಾಡಲಾಗಿದೆ.