Tamannah Bhatia: ತಮನ್ನಾ ಬಗ್ಗೆ ನಾಲಗೆ ಹರಿಬಿಟ್ಟ ಹಿರಿಯ ನಟ, ತಮನ್ನಾ ಇದ್ರೆ ಸಾಕೆಂದ ನಟ ಆಮೇಲೆ ಮಾಡಿದ್ದು ಶಾಕಿಂಗ್

Written by Soma Shekar

Updated on:

---Join Our Channel---

Tamannah Bhatia: ನಟಿ ತಮನ್ನಾ ಭಾಟಿಯಾ (Tamannah Bhatia) ಕುರಿತಾಗಿ ಮಾತನಾಡಿದ ರಾಧಾಕೃಷ್ಣನ್ ಪಾರ್ಥಿಬನ್ ಅವರು ಈಗ ನಟಿಯ ಕ್ಷಮೆ ಕೇಳಿರುವ ಘಟನೆಯೊಂದು ನಡೆದಿದೆ. ಪಾರ್ಥಿಬನ್ (Parthiban) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಿನಿಮಾದಲ್ಲಿ ಕಥೆ ಇಲ್ಲದೇ ಇದ್ರು ಪರವಾಗಿಲ್ಲ ಆದರೆ ತಮನ್ನಾ ಡ್ಯಾನ್ಸ್ ಇದ್ರೆ ಸಿನಿಮಾ‌ ಓಡುತ್ತೆ ಅನ್ನೋ ಕಾಲ ಈಗ ಬದಲಾಗಿದೆ ಎನ್ನುವ ಮಾತುಗಳನ್ನ ಆಡಿದ್ದರು. ಅವರ ಮಾತುಗಳು ವೈರಲ್ ಆಗಿತ್ತು.

ಪಾರ್ಥಿಬನ್ ಅವರು ಆಡಿದ ಮಾತುಗಳು ವೈರಲ್ ಆದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕೆಗಳನ್ನು ಮಾಡಿದ್ದಾರೆ. ಅಲ್ಲದೇ ಯಾವ ಸಿನಿಮಾ ವಿಚಾರವಾಗಿ ಅವರು ಇಂತಹ ಮಾತುಗಳನ್ನು ಆಡಿದ್ದಾರೆ ಎನ್ನುವ ಕುರಿತಾಗಿ ಚರ್ಚೆಗಳು ಶುರುವಾದ ಬೆನ್ನಲ್ಲೇ ಪಾರ್ಥಿಬನ್ ತಾನು ಮಾಡಿದ ಕಾಮೆಂಟ್ ಗೆ ಕ್ಷಮಾಪಣೆಯನ್ನು ಕೇಳಿದ್ದಾರೆ.

ನನಗೆ ಚಿತ್ರರಂಗಕ್ಕೆ ಸೇರಿದ ಎಲ್ಲರ ಬಗ್ಗೆ ಗೌರವವಿದೆ.‌ ಕಲಾವಿದರನ್ನು ಕೀಳಾಗಿ ನೋಡುವ ಉದ್ದೇಶ ನನಗಿಲ್ಲ. ನಾನು ಆಡಿದ ಮಾತುಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎನ್ನುವ ಮಾತುಗಳನ್ನ ಹೇಳಿದ್ದಾರೆ. ತಮಿಳು ಸಿನಿಮಾ ರಂಗದಲ್ಲಿ ಪಾರ್ಥಿಬನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಮನ್ನಾ ಕುರಿತಾಗಿ ಪಾರ್ಥಿಬನ್ ಮಾತ್ರವೇ ಅಲ್ಲದೇ ಕೆಲವು ದಿನಗಳ ಹಿಂದೆ ಮತ್ತೊಬ್ಬ ವಿಮರ್ಶಕ ಕೂಡಾ ಮಾತನಾಡಿ, ನಟಿಯು ಬೋಲ್ಡ್ ದೃಶ್ಯಗಳಲ್ಲಿ ನಟಿಸೋದಕ್ಕೆ ಬೇರೆ ಹೆಚ್ಚು ಚಾರ್ಜ್ ಮಾಡ್ತಾರೆ ಅನ್ನೋ ಮಾತುಗಳನ್ನು ಹೇಳಿದ್ದರು. ಆ ವಿಷಯ ಸಹಾ ವೈರಲ್ ಆಗಿ ಒಂದಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.

Leave a Comment