Actor Sudeep: ದರ್ಶನ್ ಬಂಧನದ ನಂತರ ಕಿಚ್ಚು ಸುದೀಪ್ ಫಸ್ಟ್ ರಿಯಾಕ್ಷನ್; ಒಟ್ನಲ್ಲಿ ನ್ಯಾಯ ಸಿಗಬೇಕು

Written by Soma Shekar

Published on:

---Join Our Channel---

Actor Sudeep: ಚಿತ್ರದುರ್ಗದ ರೇಣುಕಾಸ್ವಾಮಿ ಕೊ ಲೆ ಪ್ರಕರಣದಲ್ಲಿ (Renuka Swamy Murder Case) ಸ್ಯಾಂಡಲ್ವುಡ್ ನ ಸ್ಟಾರ್ ನಟ ದರ್ಶನ್ (Darshan) ಬಂಧಿತರಾಗಿರೋ ವಿಚಾರ, ಈ ಪ್ರಕರಣದ ತನಿಖೆ ಎಲ್ಲವೂ ಕೂಡಾ ಪ್ರಸ್ತುತ ಪ್ರಮುಖ ಸುದ್ದಿಯಾಗಿರುವುದು ಮಾತ್ರವೇ ಅಲ್ಲದೇ ದೊಡ್ಡ ಮಟ್ಟದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಸ್ಯಾಂಡಲ್ವುಡ್ ನ ಹಲವು ನಟ, ನಟಿಯರು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿಯೇ ಉಳಿದಿದ್ದಾರೆ.

ಇವೆಲ್ಲವುಗಳ ನಡುವೆ ಸ್ಯಾಂಡಲ್ವುಡ್ ನ ಮತ್ತೊಬ್ಬ ಸ್ಟಾರ್ ನಟ ಕಿಚ್ಚ ಸುದೀಪ್ (Actor Sudeep) ಅವರು ಈ ವಿಚಾರವಾಗಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.‌ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕಾನೂನಿನ ಬಲೆ ಎಂದರೆ ಅದು ತಪ್ಪಾಗುತ್ತೆ, ಮಾದ್ಯಮಗಳಲ್ಲಿ ಏನು ತೋರಿಸ್ತಾ ಇದ್ದೀರೋ ಅದನ್ನ ನೋಡಿ ನಾನು ತಿಳ್ಕೊಳ್ತಾ ಇದ್ದೀನಿ. ಸತ್ಯಾಂಶ ಹೊರಗೆ ತರಬೇಕು ಅನ್ನೋ ನಿಟ್ಟಿನಲ್ಲಿ ಮಾದ್ಯಮಗಳು ಮತ್ತು ಪೋಲಿಸರು ತುಂಬಾ ಒಳ್ಳೆ ಕೆಲಸವನ್ನು ಮಾಡ್ತಾ ಇದ್ದಾರೆ.

ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ ಕೆಲಸ ಸರಿಯಾದ ನಿಟ್ಟಿನಲ್ಲಿ ನಡೀತಿದೆ ಎಂದರ್ಥ. ಒಟ್ನಲ್ಲಿ ರೇಣುಕಾಸ್ವಾಮಿ, ಅವರ ಪತ್ನಿ, ಮಗೂಗೆ ನ್ಯಾಯ ಸಿಗಬೇಕು. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ ಸುದೀಪ್ ಅವರು. ‌ಇಂದು ಒಂದಲ್ಲಾ ಒಂದು ವಿಚಾರಕ್ಕೆ ಚಿತ್ರರಂಗದ ಹೆಸರು ಬರ್ತಿದೆ. ಜನ ಬರ್ತಿಲ್ಲ ಅಂದ್ರೆ ಚಿತ್ರರಂಗ, ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಚಿತ್ರರಂಗ ಹೀಗೆ ಏನೇನೋ ನಡೀತಾ ಇದೆ. ಅದಕ್ಕೂ ಚಿತ್ರರಂಗ ಅಂತಾರೆ.

ಚಿತ್ರರಂಗಕ್ಕೆ (Sandalwood) ಕ್ಲೀನ್ ಚಿಟ್ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಬ್ಯಾನ್ ಮಾಡಬೇಕು ಅನ್ನೋದು ಮುಖ್ಯ ಅಲ್ಲ, ಬ್ಯಾನ್ ಅಂದ್ರೇನು? ಚೇಂಬರ್ ಇರೋದು ನ್ಯಾಯವನ್ನು ಕೊಡಿಸೋದಕ್ಕೆ ಎನ್ನುವ ‌ಮಾತುಗಳನ್ನು ಸುದೀಪ್ ಅವರು ಹೇಳಿದ್ದಾರೆ.‌ ಸದ್ಯಕ್ಕಂತೂ ಕನ್ನಡ ಮಾದ್ಯಮಗಳಲ್ಲಿ ಈ ಪ್ರಕರಣದ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೀತಾ ಇದೆ. ಮುಂದೆ ಏನಾಗಲಿದೆ ಅನ್ನೋ ಕಡೆಗೆ ಎಲ್ಲರ ಗಮನ ಇದೆ.

Leave a Comment